ಸಾರಾಂಶ
ಕೊನೆಗೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಅಳೆದುತೂಗಿ ಗಟ್ಟಿ ಮನಸ್ಸು ಮಾಡಿರುವ ಸಂಸದ ಸಂಗಣ್ಣ ಕರಡಿ ಅವರಿಗೆ ಕಾಂಗ್ರೆಸ್ಸಿನಲ್ಲಿ ಯಾವ ಸ್ಥಾನಮಾನ ಸಿಗಲಿದೆ? ಎಂಬ ಚರ್ಚೆ ಜೋರಾಗಿ ಆರಂಭವಾಗಿದೆ
ಬೀದರ್‌ನ ಆಸೀಮ್ ಸಾಧನೆ
ಬೀದರ್: ಯುಪಿಎಸ್ಸಿ ಕಠಿಣ ಪರೀಕ್ಷೆಯನ್ನು ಸುಮಾರು 4 ಬಾರಿ ಬರೆದು ಈಗ 5ನೇ ಬಾರಿಗೆ ಸಫಲನಾಗಿದ್ದೇನೆ. ಸಾಧನೆಯ ಗುರಿ ಇಟ್ಟುಕೊಂಡು ಸಾಧಿಸಲು ಹೊರಟರೆ ಯಾವುದೂ ಕಠಿಣ ಇಲ್ಲ ಎಂದು ಯುಪಿಎಸ್ಸಿಯಲ್ಲಿ 481 ನೇ ರ್‍ಯಾಂಕ್ ಪಡೆದ ಎಂಡಿ ಆಸೀಮ್ ಮುಜತಬಾ ಅಭಿಪ್ರಾಯ ವ್ಯಕ್ತಪಡಿಸಿದರು.ಎಂಡಿ ಆಸೀಮ್ ಮುಜತಬಾ ಅವರು ಬೀದರ್‌ನ ಬ್ರಿಮ್ಸ್‌ನಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದ ಎಂಡಿ ಏಜಾಜ್ ಅವರ ಪುತ್ರನಾಗಿದ್ದಾರೆ. ತಾಯಿ ಕೂಡ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ.ಎಂಡಿ ಆಸೀಮ್ ಮುಜತಬಾ ಬೀದರ್‌ನ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ 1ರಿಂದ 10ನೇ ತರಗತಿ ವರೆಗೆ ಶಿಕ್ಷಣ ಪಡೆದು ಹೈದ್ರಾಬಾದ್‌ನ ಚೈತನ್ಯ ಕಾಲೇಜಿನಲ್ಲಿ ಪಿಯುಸಿ ಪಡೆದಿದ್ದಾರೆ. ನಂತರ ಬೆಂಗಳೂರಿನ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರ್ ಪದವಿ ಪಡೆದಿದ್ದಾರೆ.
ಅವರು ಇಂದು ಯುಪಿಎಸ್ಸಿ ಫಲಿತಾಂಶದಲ್ಲಿ ಉತ್ತಮ ರ್‍ಯಾಂಕ್ ಪಡೆದ ಹಿನ್ನಲೆಯಲ್ಲಿ ಅವರನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾತನಾಡಿ, ಕಳೆದ ವರ್ಷ ಕೂಡ ಉತ್ತೀರ್ಣನಾಗಿದ್ದೆ ಆದರೆ ಉತ್ತಮ ರ್‍ಯಾಂಕ್ ಬಂದಿರಲಿಲ್ಲ ಹೀಗಾಗಿ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಮತ್ತೊಮ್ಮೆ ಪ್ರಯತ್ನಿಸಿ ಯಶಸ್ಸು ಕಂಡೆ ಎಂದು ತಿಳಿಸಿದರು.ಎಂಡಿ ಆಸೀಮ್ ಮುಜತಬಾ ಮನೆಯ ಹಿರಿಮಗನಾಗಿದ್ದು, ಇನ್ನಿಬ್ಬರು ಸಹೋದರರು ಎಲೆಕ್ಟ್ರಾನಿಕ್ಸ್ ಹಾಗೂ ಸಿವಿಲ್ ಎಂಜಿನಿಯರ ಪದವಿ ಪಡೆದಿದ್ದಾರೆ. ಪುತ್ರನಿಗೆ ಅತ್ಯುತ್ತಮ ರ್ಯಾಂಕ್ ಬಂದಿದ್ದಕ್ಕೆ ತಂದೆ ಏಜಾಜ್ ಅರು ಸಂತಸ ವ್ಯಕ್ತಪಡಿಸಿದ್ದು, ಪರಿಶ್ರಮಕ್ಕೆ ಫಲ ಇದೆ ಎಂದು ಹೇಳಿದ್ದಾರೆ.