ಸಾರಾಂಶ
ತಾಲೂಕಿನ ಮಾಲವಿ ಗ್ರಾಪಂನಿಂದ ಮಾಲವಿ ಡ್ಯಾಂ ಹೂಳೆತ್ತುವ ಕಾಮಗಾರಿಲ್ಲಿ ತೊಡಗಿದ್ದ ಐವರು ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಹಗರಿಬೊಮ್ಮನಹಳ್ಳಿ: ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ನರೇಗಾ ಕಾರ್ಮಿಕರು ಕೇಕ್ ಕತ್ತರಿಸಿ, ಹಿರಿಯ ಕಾರ್ಮಿಕರನ್ನು ಸನ್ಮಾನಿಸಿ ಅರ್ಥಪೂರ್ಣವಾಗಿ ಆಚರಿಸಿದರು.
ಚಿಂತ್ರಪಳ್ಳಿ ಕೆರೆ ಹೂಳೆತ್ತುವಲ್ಲಿ ತೊಡಗಿಸಿಕೊಂಡ ಕಾರ್ಮಿಕರು ಕೇಕ್ ಕತ್ತರಿಸಿ ಪರಸ್ಪರ ಸಿಹಿ ವಿತರಿಸಿದರು.ಪಿಡಿಒ ನವೀನ್ ಕುಮಾರ್, ಮುಖಂಡ ಬಲ್ಲಾಹುಣ್ಸಿ ಎಸ್.ಬಿ.ನಾಗರಾಜ, ಗ್ರಾಪಂ ಮಾಜಿ ಸದಸ್ಯ ದಾದಮ್ಮನವರ ಬಸವರಾಜ ಇತರರಿದ್ದರು.
ತಾಲೂಕಿನ ಮಾಲವಿ ಗ್ರಾಪಂನಿಂದ ಮಾಲವಿ ಡ್ಯಾಂ ಹೂಳೆತ್ತುವ ಕಾಮಗಾರಿಲ್ಲಿ ತೊಡಗಿದ್ದ ಐವರು ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು.ತಾಲೂಕಿನ ವಲ್ಲಬಾಪುರ ಗ್ರಾಪಂ ಅಧ್ಯಕ್ಷೆ ಶ್ಯಾನುಬೋಗರ ಲಕ್ಷ್ಮವ್ವ ನಾಗರಾಜ ದಿನಾಚರಣೆ ನಿಮಿತ್ತ ೪೦೦ಕ್ಕೂ ಹೆಚ್ಚು ಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು. ಗ್ರಾಕೂಸ್ ರಾಜ್ಯ ಕಾರ್ಯಕರ್ತ ಕೋಗಳಿ ಮಲ್ಲೇಶ್ ಅವರನ್ನು ಮಾಲವಿ ಕಾರ್ಮಿಕರು ಸನ್ಮಾನಿಸಿ ಗೌರವಿಸಿದರು.
ಪಿಡಿಒ ಶ್ರೀಕಾಂತ, ಗ್ರಾಕೂಸ್ ಸಂಘಟನೆ ಸಂಚಾಲಕಿ ಎಂ.ಬಿ.ಕೊಟ್ರಮ್ಮ, ಗ್ರಾಪಂ ಸಿಬ್ಬಂದಿ ಕುರುಡೆಪ್ಪ, ಕಾಯಕಮಿತ್ರ ಕವಿತಾ, ಬಿಎಫ್‌ಟಿ ವೀರಯ್ಯ, ಕಾರ್ಯದರ್ಶಿ ರತ್ನನಾಯ್ಕ, ಮೇಟಿಗಳಾದ ಗೋಣೆಪ್ಪ, ಜಗದೀಶ, ಶಶಿಕುಮಾರ, ಕುಮಾರ, ರಾಘವೇಂದ್ರ ಇದ್ದರು.ತಾಲೂಕಿನ ಬಾಚಿಗೊಂಡನಹಳ್ಳಿ ಕೆರೆ ಹೂಳೆತ್ತುವ ಕಾಮಗಾರಿ ವೇಳೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಪಂ ಇಒ ಡಾ.ಜಿ. ಪರಮೇಶ್ವರಗೆ ಮನವಿ ಸಲ್ಲಿಸಿದರು.
ಗ್ರಾಕೂಸ್ ಸಂಘಟನೆಯ ತಾಲೂಕು ಸಂಚಾಲಕಿ ಅಕ್ಕಮಹಾದೇವಿ ಮಾತನಾಡಿ, ಹೈ.ಕ. ಪ್ರದೇಶದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿದ್ದು, ಯೋಜನೆಯ ೨ ಹಂತದ ಎನ್‌ಎಂಎಂಎಸ್ ಹಾಜರಾತಿಯನ್ನು ಒಂದೇ ಹಂತಕ್ಕೆ ಸೀಮಿತಗೊಳಿಸಬೇಕು. ಕೆಲಸ ನಿರ್ವಹಿಸುವ ವೇಳೆ ಕಾರ್ಮಿಕರು ಮೃತಪಟ್ಟರೆ ೫ಲಕ್ಷರೂ.ಪರಿಹಾರ ನೀಡಬೇಕು. ನರೇಗಾ ಕಾರ್ಮಿಕನ್ನು ಕಟ್ಟಡ ಕಾರ್ಮಿಕರಾಗಿ ಪರಿಗಣಿಸಿ ಕಟ್ಟಡ ಕಾರ್ಮಿಕರ ಕಾರ್ಡ್ ನೀಡಬೇಕು.ನರೇಗಾ ಕೂಲಿಮೊತ್ತವನ್ನು ಕೂಡಲೇ ಬಿಡಿಗಡೆ ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯಮಹಿಳಾ ಒಕ್ಕೂಟದ ನೀಲಮ್ಮ, ರೇಖಾ, ಕಾರ್ಮಿಕರಾದ ಪ್ರದೀಪ, ಮೇಟಿಗಳಾದ ಸತೀಶ, ರುದ್ರಪ್ಪ, ಹಾಲೇಶ ಇತರರಿದ್ದರು.