ಕೂಲಿಕಾರರು ಇ-ಕೆವೈಸಿ ಮಾಡಿಸುವುದು ಕಡ್ಡಾಯ

| Published : Sep 25 2025, 01:01 AM IST

ಸಾರಾಂಶ

ನರೇಗಾ ಯೋಜನೆಯಡಿ ನೋಂದಾಯಿತ, ಜಾಬ್ ಕಾರ್ಡ್ ಪಡೆದ ಎಲ್ಲ ಕುಟುಂಬಸ್ಥರು ಸೆ.೩೦ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು

ಹನುಮಸಾಗರ: ಮನರೇಗಾ ಕೂಲಿಕಾರರ ಮನೆಗೆ ಕಾಯಕ ಬಂಧುಗಳು ಆಗಮಿಸಿದ ವೇಳೆ ತಮ್ಮ ಆಧಾರ ಕಾರ್ಡನ್ನು ನೀಡಿ, ಜಾಬ್ ಕಾರ್ಡಗೆ ಮೊಬೈಲ್ ಆ್ಯಫ್ ಮೂಲಕ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.

ಇಲ್ಲಿನ ಗ್ರಾ.ಪಂ.ಯಲ್ಲಿ ಮನರೇಗಾ ಯೋಜನೆಯಡಿಯಲ್ಲಿ ಸೋಮವಾರ ಇ-ಕೆವೈಸಿ ನಿಮಿತ್ತ ಕಾಯಕ ಬಂಧುಗಳಿಗೆ ಮಾಹಿತಿ ನೀಡಿ ಮಾತನಾಡಿದರು. ನರೇಗಾ ಯೋಜನೆಯಡಿ ನೋಂದಾಯಿತ, ಜಾಬ್ ಕಾರ್ಡ್ ಪಡೆದ ಎಲ್ಲ ಕುಟುಂಬಸ್ಥರು ಸೆ.೩೦ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಈಗಾಗಲೇ ಕಾಯಕ ಬಂಧುಗಳಿಗೆ ಮಾಹಿತಿ ನೀಡಲಾಗಿದೆ. ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಧ್ಯ ೭೦೫೯ ಸಕ್ರಿಯ ಕೂಲಿಕಾರರಿದ್ದಾರೆ. ಇ-ಕೆವೈಸಿ ಮಾಡಿಸದೇ ಇರುವಂತಹವರು ನಿಮ್ಮ ವಾರ್ಡ್‌ಗಳ ಕಾಯಕ ಬಂಧುಗಳು ಆಗಮಿಸಿದ ವೇಳೆ ಅಥವಾ ಗ್ರಾ.ಪಂ.ಆಗಮಿಸಿ ಇ-ಕೆವೈಸಿ ಮಾಡಿಸಬೇಕು ಎಂದರು.

ಗ್ರಾ.ಪಂ.ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಕಾರ್ಯದರ್ಶಿ ಗ್ರೇಡ್- ೧ ಅಮರೇಶ ಕರಡಿ, ಬಿಎಫ್‌ಟಿ ಮಾರುತಿ ಸಾಳುಂಕಿ, ಎಸ್‌ಡಿಎ ವೀರನಗೌಡ ಪಾಟೀಲ್, ಗ್ರಾ.ಪಂ.ಸಿಬ್ಬಂದಿಗಳಾದ ಮಹಾಂತಯ್ಯ ಕೋಮಾರಿ, ಚಂದಯ್ಯ ಹಿರೇಮಠ, ವೀರೇಶ ಕೂರ್ನಾಳ, ಬಸವರಾಜ ಶಿವಸಿಂಪಿ, ಹನುಮೇಶ ನರೇಗಲ್, ಮೈಬೂಬ ಇಟಗಿ ಇದ್ದರು.