ತರೀಕೆರೆನಮ್ಮ ನಾಡಿನ ಇತಿಹಾಸ ಸಂಸ್ಕೃತಿ, ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಎತ್ತಿಹಿಡಿಯಲು ನಮ್ಮ ಮಹಾರಾಜರಿಂದ ಹಿಡಿದು ಪಾಳೆಗಾರರು, ಸಾಮಂತರು ಕಟ್ಟಿದ ಕೋಟೆ ಕೊತ್ತಲ, ದೇಗುಲಗಳನ್ನು ರಕ್ಷಿಸುವ ದೊಡ್ಡಹೊಣೆ ನಮ್ಮ ಮೇಲಿದೆ. ಅದೆಷ್ಟೋ ದೇವಾಲಯ, ಸ್ಮಾರಕಗಳು ಇಂದಿಗೂ ನಾಡಿನ ಇತಿಹಾಸ ಸಾರುವ ಜತೆಗೆ ಕಲೆ, ಸಾಹಿತ್ಯ ಸಂಸ್ಕೃತಿಗಳ ಪ್ರತಿಬಿಂಬ ವಾಗಿವೆ. ಅವುಗಳ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾದರೆ ಅಭಿವೃದ್ಧಿ ಕಾಣದೆ ಅಥವಾ ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸಲು ಸಾಧ್ಯವಾಗಬಹುದು.
- ದೇಗುಲಕ್ಕೆ ಮಾರ್ಗ ತೋರುವ ದಿಕ್ಸೂಚಿ, ನಾಮಫಲಕ ಇಲ್ಲ । ಕುಡಿಯುವ ನೀರು ಶೌಚಾಲಯದ ಕೊರತೆ
ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ನಾಡಿನ ಇತಿಹಾಸ ಸಂಸ್ಕೃತಿ, ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಎತ್ತಿಹಿಡಿಯಲು ನಮ್ಮ ಮಹಾರಾಜರಿಂದ ಹಿಡಿದು ಪಾಳೆಗಾರರು, ಸಾಮಂತರು ಕಟ್ಟಿದ ಕೋಟೆ ಕೊತ್ತಲ, ದೇಗುಲಗಳನ್ನು ರಕ್ಷಿಸುವ ದೊಡ್ಡಹೊಣೆ ನಮ್ಮ ಮೇಲಿದೆ.
ಅದೆಷ್ಟೋ ದೇವಾಲಯ, ಸ್ಮಾರಕಗಳು ಇಂದಿಗೂ ನಾಡಿನ ಇತಿಹಾಸ ಸಾರುವ ಜತೆಗೆ ಕಲೆ, ಸಾಹಿತ್ಯ ಸಂಸ್ಕೃತಿಗಳ ಪ್ರತಿಬಿಂಬ ವಾಗಿವೆ. ಅವುಗಳ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾದರೆ ಅಭಿವೃದ್ಧಿ ಕಾಣದೆ ಅಥವಾ ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸಲು ಸಾಧ್ಯವಾಗಬಹುದು.ಅಂತಹ ದೇಗುಲಗಳ ಸಾಲಿನಲ್ಲಿದೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಪ್ರಮುಖ ಧಾರ್ಮಿಕ ಪ್ರವಾಸಿ ಕೇಂದ್ರ ಅಮೃತಾಪುರ ಗ್ರಾಮದ ಶ್ರೀ ಅಮೃತೇಶ್ವರಸ್ವಾಮಿ ದೇವಾಲಯ. ಶಿಲ್ಪಕಲಾ ವೈಭವ ಮತ್ತು ಕಲಾ ಕೌಶಲ್ಯದ ಹೆಗ್ಗುರುತಾದ ಹೊಯ್ಸಳರ ಶೈಲಿಯ ಈ ದೇಗುಲವನ್ನು ಕ್ರಿ.ಶ.1196ರಲ್ಲಿ ಹೊಯ್ಸಳ ದೊರೆ ದಂಡನಾಯಕ (ಅಮೃತೇಶ್ವರ) ಅಮಿತಯ್ಯನ ಕಾಲದಲ್ಲಿ ನಿರ್ಮಾಣವಾಗಿದ್ದು ಶ್ರೀ ಅಮೃತೇಶ್ವರನ ಪ್ರತಿನಿಧಿಸುವ ಲಿಂಗವನ್ನು ಇಮ್ಮಡಿ ಬಲ್ಲಾಳನಿಂದ ಪ್ರತಿಷ್ಠಾಸಲ್ಪಿಟ್ಟಿತ್ತು ಎಂಬ ಮಾಹಿತಿ ಇದೆ.
ಅಮೃತೇಶ್ವರ ಈ ದೇಗುಲ ಬಹು ಆಕರ್ಷಣೀಯ ಪ್ರಮುಖ ಧಾರ್ಮಿಕ, ಶ್ರದ್ಧೆ, ಮತ್ತು ಪ್ರವಾಸಿ ಕೇಂದ್ರವಾಗಿ ರಾಜ್ಯ ಮತ್ತು ಹೊರ ರಾಜ್ಯಗಳು ಸೇರಿದಂತೆ ದೂರ ದೂರುಗಳಿಂದ ಭಕ್ತರು ಮತ್ತು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ತಾಣ.ಶ್ರೀ ಅಮೃತೇಶ್ವರಸ್ವಾಮಿ ದೇವಾಲಯದಲ್ಲಿ ಬಹು ಅಪರೂಪದ ಅಗ್ನಿ ಶಿವಲಿಂಗ, ವಿದ್ಯಾಧಿದೇವತೆ ಶ್ರೀ ಶಾರದೆ, ಪ್ರಾಂಗಣ ದಲ್ಲಿರುವ ಶಿಲಾಸ್ಥಂಭಗಳು, ಸುಂದರವಾದ ನಂದಿ ಮೂರ್ತಿ, ದೇವಸ್ಥಾನ ಸುತ್ತ ಶಿಲ್ಪದಲ್ಲಿ ಕೆತ್ತಿರುವ ರಾಮಾಯಣ, ಮಹಾಭಾರತ , ಉಪನಿಷತ್, ಭಾಗವತ, ಪುರಾಣದ ಅದ್ಬುತ ಕಲೆ, ವಿವಿಧ ಬಗೆಯ ಚಿತ್ತಾರ ಪ್ರಾಚೀನ ಕಲೆಯ ಕೇಂದ್ರಬಿಂದುವೆನಿಸಿದೆ.
ದೇವಸ್ಥಾನದ ಹೊರನೋಟ ನಯನ ಮನೋಹರ, ಉದ್ಯಾನವನ, ಇತಿಹಾಸ ಸಾರುವ ಶಿಲ್ಪಕಲಾ ವೈಭವದಿಂದ ಕಂಗೊಳಿಸುವ ಈ ದೇವಾಲಯ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಕುಡಿಯುವ ನೀರಿನ ಸೌಲಭ್ಯ, ಶೌಚಾಲಯಗಳ ನಿರ್ವಹಣೆಗೆ ನಲ್ಲಿಗಳಲ್ಲಿ ನೀರಿಲ್ಲದೆ ಪರದಾಡುವ ಸ್ಥಿತಿ ಇದೆ. ದೇವಸ್ಥಾನದಲ್ಲಿ ವಿದ್ಯುತ್ ವ್ಯವಸ್ಥೆಯೂ ಸರಿಯಾಗಿಲ್ಲ.ಪ್ರತಿ ವರ್ಷದ ಮಕರ ಸಂಕ್ರಮಣ, ಶಿವರಾತ್ರಿ ಇನ್ನಿತರ ಹಬ್ಬ ಹರಿದಿನ, ಜಾತ್ರೆ ಉತ್ಸವಗಳು ಮತ್ತು ರಜಾ ದಿನಗಳಲ್ಲಿ ಪ್ರವಾಸಿಗರು ಪುಣ್ಯಕ್ಷೇತ್ರದ ಶಿವಲಿಂಗದ ದರ್ಶನ ಪಡೆದು ಇಲ್ಲೆ ಒಂದೆರಡು ದಿನ ಉಳಿದುಕೊಳ್ಳಲು ಇಚ್ಚಿಸಿದರೂ ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದು ಪ್ರವಾಸೋದ್ಯಮಕ್ಕೂ ಧಕ್ಕೆಯಂತಾಗಿದೆ.
ಪ್ರಾಚೀನ ಪುರಾತತ್ವ ಇಲಾಖೆ ಸುಪರ್ದಿಯಲ್ಲಿರುವ ದೇಗುಲಕ್ಕೆ ಎಲ್ಲ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುವ ಅಮೃತಾಪುರ ಒಂದು ಉತ್ತಮ ಪ್ರವಾಸಿ ಸ್ಥಳವಾಗುವ ಎಲ್ಲಾ ಅರ್ಹತೆ ಇದ್ದರೂ ಅಭಿವೃದ್ಧಿ ಕಾಣದೆ ಇಂತಹ ಸದವಕಾಶದಿಂದ ವಂಚಿತವಾಗಿದೆ. ಸಂಬಂಧಿಸಿದ ಇಲಾಖೆ ಗಮನ ಹರಿಸಿ ಹೆಚ್ಚಿನ ಮೂಲ ಸೌಕರ್ಯ ಒದಗಿಸಿದರೆ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳ ಸಾಲಿಗೆ ಈ ದೇಗುಲವೂ ಸೇರ್ಪಡೆ ಯಾಗುವುದರಲ್ಲಿ ಸಂಶಯವಿಲ್ಲ. ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ.-- ಬಾಕ್ಸ್--
ಪ್ರವಾಸಿಗರಿಗೆ ಅವ್ಯವಸ್ಥೆ ಅನುಭವಈ ಪ್ರಸಿದ್ಧ ದೇಗುಲಕ್ಕೆತಲುಪಲು ಮಾರ್ಗ ಸೂಚಿಸುವ ಫಲಕಗಳಿಲ್ಲದೆ ಪ್ರವಾಸಿಗರಿಗೆ ಅವ್ಯವಸ್ಥೆ ಅನುಭವಕ್ಕೆ ಬರುತ್ತದೆ. ಅಮೃತೇಶ್ವರ ದೇಗುಲಕ್ಕೆ ಬರಲು ವಿವಿಧ ಸ್ಥಳಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ, ಅಜ್ಜಂಪುರ ಕ್ರಾಸ್ ಬಳಿ ಮಾರ್ಗ ಸೂಚಿ ಅಳವಡಿಸುವ ಅಗತ್ಯವಿದೆ. ವಿವಿಧ ಕಡೆಗಳಿಂದ ಇಲ್ಲಿಗೆ ಬರಬಹುದಾಗಿದ್ದು ತರೀಕೆರೆ ಮತ್ತು ಅಜ್ಜಂಪುರ ಭಾಗಗಳಿಂದ ಸಾರಿಗೆ ವ್ಯವಸ್ಥೆ ಅಗತ್ಯವಾಗಿ ಬೇಕಿದೆ. ದೇವಸ್ಥಾನಕ್ಕೆ ವರ್ಷದ ಎಲ್ಲಾ ಕಾಲದಲ್ಲೂ ಆಗಮಿಸುವ ಪ್ರವಾಸಿಗರಿಗೆ ಇಲ್ಲಿ ತಂಗಲು ನೆಪಮಾತ್ರಕ್ಕೆ ಯಾತ್ರಿನಿವಾಸ ಇದ್ದರೂ ಅದರ ಬಾಗಿಲು ಯಾವಾಗ ತೆರೆದಿರುತ್ತದೆ ಎಂಬುದು ಗೊತ್ತಾಗುವುದೇ ಇಲ್ಲ.
--ಕೋಟ್--ಪ್ರಾಚೀನ ಪುರಾತತ್ವ ಇಲಾಖೆ ಸಮ್ಮತಿಸಿದರೆ ಅಮೃತಾಪುರ ಶ್ರೀ ಅಮೃತೇಶ್ವರಸ್ವಾಮಿ ದೇವಾಲಯದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬಹುದು- ಶೇಖರಪ್ಪದಾಸೋಹ ಸಮಿತಿ ಉಸ್ತುವಾರಿಪೋಟೋ ಇದೆ7ಕಟಿಆರ್.ಕೆ 08ಃ. ತರೀಕೆರೆ ಸಮೀಪದ ಅಮೃತಾಪುರ ಗ್ರಾಮದಲ್ಲಿರುವ ಶ್ರೀ ಅಮೃತೇಶ್ವರಸ್ವಾಮಿ ದೇವಸ್ಥಾನ7ಕೆಟಿಆರ್.ಕೆ.09ಃ ಯಾತ್ರಿಕರ ನಿವಾಸ7ಕೆಟಿಆರ್.ಕೆ.10ಃ ದೇಗುಲದಿಂದ ದೂರ ಇರುವ ನೀರೇ ಇಲ್ಲದ ಶೌಚಾಲಯ