ಸಾರಾಂಶ
ಇಂದಿನ ಯುವಜನತೆಯಲ್ಲಿ ಸ್ಪಷ್ಟತೆಯ ಗುರಿ, ಛಲ ಇಲ್ಲದಿರುವುದು ಎದ್ದು ಕಾಣುತ್ತಿದೆ. ಈ ಅಂಶ ಗಮನಿಸಿದರೆ ಬಾಲಕರಿಗಿಂತ ಬಾಲಕೀಯರೇ ಬಹುಪಾಲು ಉತ್ತಮ. ಅವರಲ್ಲಿ ಸ್ವಲ್ಪಮಟ್ಟಿಗಾದರೂ ಗುರಿ ಸಾಧಿಸುವ ನಿಟ್ಟಿನಲ್ಲಿ ಕಲಿಕಾ ಓದು, ಅಭ್ಯಾಸದ ಅಭಿರುಚಿ ಪ್ರಯತ್ನ ಇದೆ ಎಂದು ಹಳಿಯಾಳ ತಾಲೂಕಿನ ಮರ್ಕವಾಡದ ಸುಕೃತಿ ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಅಕಾಡೆಮಿ ಉಸ್ತುವಾರಿ ಅನೀಲ ನಾಯ್ಕ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಇಂದಿನ ಯುವಜನತೆಯಲ್ಲಿ ಸ್ಪಷ್ಟತೆಯ ಗುರಿ, ಛಲ ಇಲ್ಲದಿರುವುದು ಎದ್ದು ಕಾಣುತ್ತಿದೆ. ಈ ಅಂಶ ಗಮನಿಸಿದರೆ ಬಾಲಕರಿಗಿಂತ ಬಾಲಕೀಯರೇ ಬಹುಪಾಲು ಉತ್ತಮ. ಅವರಲ್ಲಿ ಸ್ವಲ್ಪಮಟ್ಟಿಗಾದರೂ ಗುರಿ ಸಾಧಿಸುವ ನಿಟ್ಟಿನಲ್ಲಿ ಕಲಿಕಾ ಓದು, ಅಭ್ಯಾಸದ ಅಭಿರುಚಿ ಪ್ರಯತ್ನ ಇದೆ ಎಂದು ಹಳಿಯಾಳ ತಾಲೂಕಿನ ಮರ್ಕವಾಡದ ಸುಕೃತಿ ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಅಕಾಡೆಮಿ ಉಸ್ತುವಾರಿ ಅನೀಲ ನಾಯ್ಕ ಹೇಳಿದರು.ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ ವಿದ್ಯಾರ್ಥಿಗಳಿಗಾಗಿ ಗುರಿ ಮತ್ತು ಸಾಧನೆ ಹಾಗೂ ವೃತ್ತಿಪರ ಮಾರ್ಗದರ್ಶನ ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,
ಮಕ್ಕಳಲ್ಲಿರುವ ಆಸಕ್ತಿ ಗುರುತಿಸಿ ಪ್ರತಿಭೆಗಳನ್ನು ಹೊರ ತಗೆಯಬೇಕಾಗಿದೆ. ಅದಕ್ಕೆ ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಇದೆ ಎಂದರು.ಆಚಲ ಆತ್ಮವಿಶ್ವಾಸ ದಿಂದ ಗುರಿ ತಲುಪಲು ಸಾಧ್ಯ.ಜೀವನದಲ್ಲಿ ಸತತ ಪ್ರಯತ್ನವಾದಿಗಳಾಗಿ ಶ್ರಮಿಸಿದರೆ ಖಂಡಿತ ತಾವುಗಳು ಸಾಧಕರಾಗುವಿರಿ. ಅದೃಷ್ಟ ನಿಮ್ಮ ಕೈಯಲ್ಲಿದೆ.ಎಂದು ಮಕ್ಕಳಿಗೆ ಸಲಹೆ ನೀಡಿದರು.
ಸಾಧನೆಗೆ ಬಡತನ ಅಡ್ಡಿಯಾಗಲಾರದು. ಆ ಹಿನ್ನೆಲೆಯಲ್ಲಿ ಬಡತನದ ಕಾರಣ, ನೆಪ ಎಳ್ಳಷ್ಟು ಕೊಡಬೇಡಿ. ಇಂಥ ವಿಚಾರ ನಿಮ್ಮ ತಲೆಯಲ್ಲಿಟ್ಟಕೊಳ್ಳಬೇಡಿ. ಯಾರು ಡ್ಡರಲ್ಲ. ಎಲ್ಲರಲ್ಲೂ ಒಂದೊಂದು ಪ್ರತಿಭೆಗಳಿವೆ ಎಂದರು.ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಸವರಾಜ ಅನಂತಪುರ, ಜಿ.ಆರ್.ಜಾಧವ, ಶಿಕ್ಷಕಿ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಶಿಕ್ಷಣಾಥಿ೯ ಅಕ್ಷತಾ ಮೂತ್ತೂರ ವೇದಿಕೆಯಲ್ಲಿದ್ದರು. ಲೋಹಿತ ಮಿಜಿ೯ ಸ್ವಾಗತಿಸಿದರು, ಸದಾಶಿವ ಸಿದ್ದಾಪುರ ನಿರೂಪಿಸಿದರು, ಈರಣ್ಣ ದೇಸಾಯಿ ವಂದಿಸಿದರು.