ಸಾರಾಂಶ
ಗ್ರಾಮಿಣ ಪ್ರದೇಶದ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳನ್ನು ಆರಂಭಿಸಲಾಗಿದೆ. ಆದರೆ, ಸಮರ್ಪಕ ನಿರ್ವಹಣೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲೆಗಳು ಅಧೋಗತಿ ತಲುಪಿವೆ. ಇದಕ್ಕೆ ಕಲಮೂಡ ಸರ್ಕಾರಿ ಶಾಲೆಯೇ ನಿದರ್ಶನ.
ಕನ್ನಡ ಪ್ರಭ ವಾರ್ತೆ ಕಮಲಾಪುರ
ಗ್ರಾಮಿಣ ಪ್ರದೇಶದ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳನ್ನು ಆರಂಭಿಸಲಾಗಿದೆ. ಆದರೆ, ಸಮರ್ಪಕ ನಿರ್ವಹಣೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲೆಗಳು ಅಧೋಗತಿ ತಲುಪಿವೆ. ಇದಕ್ಕೆ ಕಲಮೂಡ ಸರ್ಕಾರಿ ಶಾಲೆಯೇ ನಿದರ್ಶನ.ತಾಲೂಕಿನ ಕಲಮೂಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಕೋಣೆಗಳ ಕಿಡಕಿ ಬಾಗಿಲು ಮುರಿದು ಹೋಗಿರುವುದರಿಂದ ಮದೆಪ್ರಿಯಾರ ಹಾಗೂ ಜೂಜಾಟ ತಾಣವಾಗಿದ ಎಲಿ ಅಂದರಲ್ಲಿ ಸುಟ್ಟ ಸಿಗರೇಟ್, ಬೀಡಿಗಳ ಸರ್ಕಾರ ಪ್ರಥಮಿಕ ಶಾಲೆಯ ಚಿತ್ರಿತವಾಗಿದೆ.
ಒಂದರಿಂದ 8ನೇ ತರಗತಿವರೆಗಿನ ಈ ಶಾಲೆಯಲ್ಲಿ 75 ಮಕ್ಕಳು ಅಭ್ಯಾಸ ಸುತ್ತಿದ್ದು 12 ವರ್ಗ ಕೋಣೆಗಳಿವೆ ಅದರಲ್ಲಿ 10 ಕೋಣೆಗಳು ಸೇರುತ್ತವೆ ಅದರಲ್ಲಿ ನಾಲ್ಕು ಕೋಣೆಗಳಿಗೆ ಕಿಡಿಕಿ ಬಾಗಿಲುಗಳಿಲ್ಲದಿರುವುದರಿಂದ ಮಳೆ ಬಂದರೆ ತೇವಾಂಶದಿಂದ ಗೋಡೆಯ ಪದರು ಕಳಚಿ ಬೀಳುತ್ತಿವೆ. ಎರಡು ಕೋಣೆಗಳು ಮಾತ್ರ ಸ್ಥಿತಿಯಲ್ಲಿವೆ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ.ಕೆಡಕಿ ಬಾಗಿಲು ಇಲ್ಲದಿರುವುದರಿಂದ ಮಧ್ಯ ಸೇವನೆ ಮಾಡುವುದು ಜೋಜಾಟ ದಂತಹ ಅಕ್ರಮ ಜೂಜಾಟ ನಡೆಸುತ್ತಿದ್ದಾರೆ. ಸುಮಾರು ಐದು ವರ್ಷಗಳ ಹಿಂದೆ 150 ಮಕ್ಕಳು ದಾಖಲಾತಿ ಇದ್ದು ಆತಂಕದಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿದೆ ಇದರಿಂದ ಕೆಲ ಪಾಲಕರು ಶಾಲೆ ಬೀಳುವ ಹಂತದಲ್ಲಿದ್ದು ಮಕ್ಕಳನ್ನು ಆತಂಕದಲ್ಲಿ ಪಾಲಕರು ಶಾಲೆಗೆ ಕಳುಹಿಸು ಕಳುಹಿಸುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ಪಾಲಕರು ಬೇಸರ ವ್ಯಕ್ತಪಡಿಸಿದ್ದರು.