ಮೈಸೂರು ಜಿಲ್ಲೆಯಲ್ಲಿ ಕೈಗಾರಿಕೆಗಳ ಆರಂಭಿಸಲು ಭೂಮಿಯ ಕೊರತೆ: ಕೆ.ಶಿವಲಿಂಗಯ್ಯ

| Published : Jul 22 2025, 12:00 AM IST

ಮೈಸೂರು ಜಿಲ್ಲೆಯಲ್ಲಿ ಕೈಗಾರಿಕೆಗಳ ಆರಂಭಿಸಲು ಭೂಮಿಯ ಕೊರತೆ: ಕೆ.ಶಿವಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದಾಗಿ ಉದ್ದಿಮೆ ಆರಂಭಿಸುವವರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕಾ ಚಟುಟಿಕೆ ಘಟಕಗಳಿಗೆ 5 ಲಕ್ಷದಿಂದ 5 ಕೋಟಿ ರೂ. ವರೆಗೆ ಶೇ.5.5 ಬಡ್ಡಿ ದರದಲ್ಲಿ ಹಣಕಾಸು ಸೌಲಭ್ಯ ನೀಡಲಾಗುತ್ತದೆ. ಅಲ್ಲದೆ, ತಾಂತ್ರಿಕ ನೆರವು, ಜಮೀನು ಪರಿವರ್ತನೆ ಶುಲ್ಕ ಮರು ಪಾವತಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯಲ್ಲಿ ಕೈಗಾರಿಕೆಗಳ ಆರಂಭಿಸಲು ಸಾಕಷ್ಟು ಆರ್ಥಿಕ ಸೌಲಭ್ಯ ದೊರೆತರೂ ಅದಕ್ಕೆ ಬೇಕಾದ ಭೂಮಿಯ ಕೊರತೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಕೆ. ಶಿವಲಿಂಗಯ್ಯ ತಿಳಿಸಿದರು.

ನಗರದ ಶ್ರೀಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಶಾಖಾ ಕಚೇರಿಗಳ ಜಂಟಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯಮಿಗಳ ಸಭೆ ಹಾಗೂ ಆರ್ಥಿಕ ನೆರವಿನ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹೊಸದಾಗಿ ಉದ್ದಿಮೆ ಆರಂಭಿಸುವವರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕಾ ಚಟುಟಿಕೆ ಘಟಕಗಳಿಗೆ 5 ಲಕ್ಷದಿಂದ 5 ಕೋಟಿ ರೂ. ವರೆಗೆ ಶೇ.5.5 ಬಡ್ಡಿ ದರದಲ್ಲಿ ಹಣಕಾಸು ಸೌಲಭ್ಯ ನೀಡಲಾಗುತ್ತದೆ. ಅಲ್ಲದೆ, ತಾಂತ್ರಿಕ ನೆರವು, ಜಮೀನು ಪರಿವರ್ತನೆ ಶುಲ್ಕ ಮರು ಪಾವತಿಯಾಗುತ್ತದೆ. ನೋಂದಣಿ ಶುಲ್ಕ ಮರು ಪಾವತಿ, ಉದ್ಯಮ ಆರಂಭಿಸುವವರು ಹೂಡಿಕೆ ಮಾಡುವ ಬಂಡವಾಳದ ಶೆ.25 ರಷ್ಟು ಹಣ ಮರು ಪಾವತಿಸಲಾಗುತ್ತದೆ. ಈ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ ಮಾತನಾಡಿ, ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುವವರಿಗೆ ಸಹಾಯ ಯಾವ ರೂಪದಲ್ಲಾದರೂ ಬರುತ್ತದೆ. ಪ್ರವಾಸೋದ್ಯಮ ಇಲಾಖೆಯಿಂದ ಹೋಮ್ ಸ್ಟೇ, ಹೊಟೇಲ್ ಇಂಡಸ್ಟ್ರಿ ಮಾಡಲು ಸಹಕಾರ ಮಾಡಲಾಗುವುದು. ಅಲ್ಲದೆ, ವಿವಿಧ ರೀತಿಯ ವಿನಾಯಿತಿ ನೀಡಲಾಗುವುದು ಎಂದರು.

ಕಾರ್ಯಾಗಾರವನ್ನು ಪತ್ರಿಕೋದ್ಯಮಿ ರವಿ ಕೋಟಿ ಉದ್ಘಾಟಿಸಿದರು. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕಿ ಎಚ್.ಎ. ಶೋಭಾ, ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಜಗದಾಂಬ, ರಾಜ್ಯ ಹಣಕಾಸು ಸಂಸ್ಥೆಯ ಚಾಮರಾಜನಗರ ಶಾಖಾ ಕಚೇರಿ ಸಹಾಯಕ ಪ್ರಾಧಾನ ವ್ಯವಸ್ಥಾಪಕಿ ಎಂ.ಆರ್. ಪ್ರಮೀಳಾ, ಮೈಸೂರು ಶಾಖಾ ಕಚೇರಿ ಶಾಖಾ ವ್ಯವಸ್ಥಾಪಕ ಜಿ.ಟಿ. ಸತೀಶ್ ಮೊದಲಾದವರು ಇದ್ದರು.ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಉದ್ಯಮ ನಡೆಸುವವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಏಕೈಕ ಸಂಸ್ಥೆಯಾಗಿದೆ. ಆದರೆ, ಅಷ್ಟೇ ಪ್ರಾಮಾಣಿಕವಾಗಿ ಮರು ಪಾವತಿಸಿದಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ. ಇಂತಹ ಸಂಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಿಬ್ಬಂದಿ ಕೊರತೆ ಉಂಟಾಗಿದೆ. ನೇಮಕಾತಿ ಮಾಡಿಕೊಳ್ಳಲು ಕೆಲವೊಂದು ಕಾನೂನು ತೊಡಕು ಉಂಟಾಗಿದ್ದು ಅದನ್ನು ಸರ್ಕಾರ ಸರಿಪಡಿಸಬೇಕು.

- ರವಿ ಕೋಟಿ, ಪತ್ರಿಕೋದ್ಯಮಿ