ಸಾರಾಂಶ
ಬ್ಯಾಡಗಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಸೂಕ್ತ ಅವಕಾಶಗಳ ಕೊರತೆ ಇದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು ಅಭಿಪ್ರಾಯಪಟ್ಟರು.ಹಳ್ಳಿಮೇಷ್ಟ್ರು ಚಲನಚಿತ್ರದಲ್ಲಿ ಬಾಲನಟನಾಗಿ ಮಿಂಚಿದ್ದ ಹಾವೇರಿ ತಾಲೂಕಿನ ಚಿಕ್ಕಲಿಂಗದ ಹಳ್ಳಿ ಗ್ರಾಮದ ಕಲಾವಿದ ಫಕ್ಕೀರಪ್ಪ ದೊಡ್ಡಮನಿ ನಟನೆಯ “ಸೆಲ್ಯೂಟ್” ಸಿನಿಮಾ ಬಿಡುಗಡೆಯಾದ ಹಿನ್ನೆಲೆ ಪಟ್ಟಣದ ಶೋಭಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ನಟನಿಗೆ ಸನ್ಮಾನಿಸಿ ನಂತರ ಅವರು ಮಾತನಾಡಿದರು. ಉತ್ತರ ಕರ್ನಾಟಕ ಸಿನಿಮಾ ಇಂಡಸ್ಟ್ರೀಗೆ ಅತ್ತುತ್ತಮ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇತ್ತೀಚಿಗೆ ಸಹ ಕೆಲ ಕಲಾವಿದರು ಸಿನಿಮಾ ರಂಗದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅವರ ಸಾಲಿಗೆ ಫಕ್ಕೀರಮ್ಮ ದೊಡ್ಡಮನಿ ಸಹ ಸೇರಿದ್ದಾರೆ. ಇಂತಹ ಕಲಾವಿದರ ನಟನೆಯ ಚಿತ್ರಗಳನ್ನು ವೀಕ್ಷಿಸಿ ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ಸುರೇಶ ಉದ್ಯೋಗಣ್ಣನವರ, ಸುಭಾಷ ಮಾಳಗಿ, ಕಿರಣಕುಮಾರ ಗಡಿ ಗೋಳ, ಈರಣ್ಣ ಅಕ್ಕಿ, ಜಿತೇಂದ್ರ ಸುಣಗಾರ, ಸಂಜೀವ ಮಡಿವಾಳರ, ಮಂಜುನಾಥ ಜಾಧವ, ಪುರಸಭೆ ಮುಖ್ಯಾಧಿಕಾರಿ ವಿನಕುಮಾರ ಹೊಳೆಪ್ಪಗೋಳ, ರಾಜು ಮಾಳಗಿ ಸೇರಿದಂ ತೆ ಹಲವರು ಉಪಸ್ಥಿತರಿದ್ದರು.