ಸಾರಾಂಶ
ನೀರಿನ ಕೊರತೆ ಉಂಟಾಗಿ ಎಳನೀರು ಬೆಳೆ ಸಿಗದಂತಾಗಿದೆ. ಎಳನೀರಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರವೂ ಹೆಚ್ಚಾಗಿದೆ. ತಾಲೂಕಿನಾದ್ಯಂತ ದಲ್ಲಾಳಿಗಳು ರೈತರಿಂದ 22 ರಿಂದ 30ರೂ.ಗಳಿಗೆ ಎಳನೀರು ಖರೀದಿಸುತ್ತಿದ್ದಾರೆ. ಈ ಹಿಂದೆ ಬೆಳೆಗಾರರಿಂದ ದಲ್ಲಾಳಿಗಳು ಖರೀದಿಸುತ್ತಿರುವ ದರ 20 ರು.ಗಳ ಆಜುಬಾಜಿನಲ್ಲೇ ಇತ್ತು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತೆಂಗು ಬೆಳೆಯಲ್ಲಿ ಏರಿಳಿತವಾದ ಹಿನ್ನೆಲೆಯಲ್ಲಿ ಎಳನೀರು ಪೂರೈಕೆ ಕುಸಿತವಾಗಿದೆ. ಇದರ ಪರಿಣಾಮ ಎಳನೀರಿನ ಬೆಲೆ ಗಗನಕ್ಕೇರಿದೆ. ಜತೆಗೆ ಮೊದಲ ಬಾರಿಗೆ ರೈತರಿಗೆ ಬಂಪರ್ ದರ ದೊರೆಯುತ್ತಿದೆ. ಕಳೆದ ಸಾಲಿನ ಭೀಕರ ಬರ ಹಾಗೂ ಹೆಚ್ಚು ಬಿಸಿಲಿನಿಂದ ಕೂಡಿದ ವಾತಾವರಣದ ಹಿನ್ನೆಲೆಯಲ್ಲಿ ತೆಂಗಿನ ಬೆಳೆ ಸಾಕಷ್ಟು ಹಾನಿಯಾಗಿತ್ತು. ಇದರಿಂದ ನೀರಿನ ಕೊರತೆ ಉಂಟಾಗಿ ಎಳನೀರು ಬೆಳೆ ಸಿಗದಂತಾಗಿದೆ. ಎಳನೀರಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರವೂ ಹೆಚ್ಚಾಗಿದೆ. ತಾಲೂಕಿನಾದ್ಯಂತ ದಲ್ಲಾಳಿಗಳು ರೈತರಿಂದ 22 ರಿಂದ 30ರೂ.ಗಳಿಗೆ ಎಳನೀರು ಖರೀದಿಸುತ್ತಿದ್ದಾರೆ. ಈ ಹಿಂದೆ ಬೆಳೆಗಾರರಿಂದ ದಲ್ಲಾಳಿಗಳು ಖರೀದಿಸುತ್ತಿರುವ ದರ 20 ರು.ಗಳ ಆಜುಬಾಜಿನಲ್ಲೇ ಇತ್ತು. ಇದೇ ಮೊದಲ ಬಾರಿ ರೂ.25ರಿಂದ 30ರೂ. ಕೊಟ್ಟು ರೈತರಿಂದ ಎಳೆನೀರು ಖರೀದಿಸಲಾಗುತ್ತಿದೆ. ಇದು ಸದ್ಯದ ಮಟ್ಟಿಗೆ ದಾಖಲೆಯಾಗಿದೆ. ಪ್ರತಿ ಎಳನೀರಿಗೆ ₹50ಸಾಮಾನ್ಯವಾಗಿ ಪಾನಿಯಗಳಿಗೆ ಸುಡುವ ಬಿಸಿಲು ಬೇಸಿಗೆ ಕಾಲದಲ್ಲಿ ಬಾರಿ ಬೇಡಿಕೆ ಮತ್ತು ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗುತ್ತದೆ. ಆದರೆ ಚಳಿಗಾಲವಾದ ನವೆಂಬರ್ ತಿಂಗಳಿನಲ್ಲಿ ಬಾರಿ ಬೇಡಿಕೆ ಹಿನ್ನೆಲೆಯಲ್ಲಿ ಎಳನೀರು-ಎಳನೀರಿನ ಬೆಲೆ ಗಗನಕ್ಕೇರಿದೆ. ವ್ಯಾಪಾರಿಗಳು ಒಂದು ಸಿಯಾಳಕ್ಕೆ 45ರಿಂದ 50 ರು.ಗಳಿಗೆ ಮಾರಾಟ ಮಾಡುತ್ತಿದ್ದಾರೆ. 250ಎಂ.ಎಲ್. ಎಳನೀರು ಜ್ಯೂಸ್ ಗೆ 50ರೂ. ಮಾರಾಟ ಮಾಡುತ್ತಾರೆ. ಎಳನೀರು ಕೆಳಗಿಳಿಸಲು ಕಾರ್ಮಿಕರು ಸಿಗದಿರುವುದು, ಹಗ್ಗ ಬಳಸಿ ಎಳನೀರು ಕೆಳಗಿಳಿಸಬೇಕು ಎಂಬುದು ರೈತರ ಕಂಡೀಷನ್. ರೈತರ ತೆಂಗಿನ ತೋಟಗಳಲ್ಲಿ ಎಳನೀರು ಸಿಗುತ್ತಿಲ್ಲ. ಎಳನೀರಿಗೆ ಹೊರರಾಜ್ಯಗಳಲ್ಲೂ ಬೇಡಿಕೆ ಹೆಚ್ಚಿದ್ದರೂ ಅಪೇಕ್ಷೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಪ್ರತಿದಿನ 100ಕ್ಕೂ ಹೆಚ್ಚು ಎಳನೀರು ಮಾರಿಕೊಂಡು ನಮ್ಮ ಜೀವನವನ್ನು ಸಾಗಿಸುತ್ತಿದ್ದೇವೆ ಎನ್ನುತ್ತಾರೆ ಎಳನೀರು ವರ್ತಕರು.
ಸಾರ್ವಜನಿಕರು ಎಳನೀರಿನ ಕಡೆ ಮುಖ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದರಿಂದ, ದಿನಕ್ಕೆ ಎರಡು ಎಳನೀರು ಕುಡಿಯುವವರು ಒಂದಕ್ಕೆ ತೃಪ್ತಿಪಟ್ಟು ಕೊಳ್ಳುತ್ತಿದ್ದಾರೆ. ಎಳನೀರಿನ ಬೆಲೆ ಏರಿಕೆಗೆ ಮಧ್ಯವರ್ತಿಗಳ ಹಾವಳಿಯೇ ಕಾರಣವಾಗಿದೆ. ನೇರ ರೈತರಿಂದ 15 ರೂ.ಗೆ ಎಳೆನೀರು ಪಡೆದು ವ್ಯಾಪಾರಸ್ಥರಿಗೆ 25ರಿಂದ 30ರೂ.ವರೆಗ ನೀಡುತ್ತಿದ್ದು, ಇದರಿಂದ ಬೆಲೆ ಏರಿಕೆಯಾಗಿದೆ.ಡಿಸೆಂಬರ್‌ಗೆ ದರ ಇಳಿಕೆ?
ಕಳೆದ ಸಾಲಿನಲ್ಲಿ ಮಳೆ ಬಾರದೆ ತಾಲ್ಲೂಕಿನಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಇದರಿಂದ ನೀರಿನ ಕೊರತೆ ಉಂಟಾಗಿ ಸಾಕಷ್ಟು ಬೆಳೆ ಒಣಗಿ ನಷ್ಟ ಎದುರಾಗಿತ್ತು.ಆಗ ಮಳೆ ಬಿದ್ದಿದ್ದರೆ ಉತ್ತಮ ಫಲ ಸಿಗುತ್ತಿತ್ತು. ಆದರೆ ಈಗ ಮಳೆ ಬೀಳುತ್ತಿದ್ದರೂ ತೆಂಗಿನ ಫಸಲು ಉತ್ತಮವಾಗಿಲ್ಲ. ಮುಂದಿನ ಡಿಸೆಂಬರ್ ವೇಳೆಗೆ ಹೆಚ್ಚು ಎಳನೀರು ಸಿಗಲಿದೆ ಎಂದು ರೈತರೊಬ್ಬರು ತಿಳಿಸಿದರು.