ರಾಮನಗರ: ದಕ್ಷ ಧೀಮಂತ ಆಡಳಿತಗಾರರಾಗಿದ್ದ ಕೆಂಗಲ್ ಹನುಮಂತಯ್ಯ ರಾಮನಗರ ನೆಲಕ್ಕೆ ಸ್ವಾಭಿಮಾನ ತಂದು ಕೊಟ್ಟವರು. ಆದರೀಗ ರಾಮನಗರ ಕ್ಷೇತ್ರದ ಜನರಲ್ಲಿ ಸ್ವಾಭಿಮಾನದ ಕೊರತೆ ಕಾಣುತ್ತಿದೆ ಎಂದು ನಗರಸಭೆ ಅಧ್ಯಕ್ಷರಾದ ಕೆ.ಶೇಷಾದ್ರಿ ಬೇಸರ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಜನ್ಮದಿನದ ಪ್ರಯುಕ್ತ ನಗರದ ಹಳೇ ಬಸ್ ನಿಲ್ದಾಣ ವೃತ್ತದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು, ಕೆಂಗಲ್ ಹನುಮಂತಯ್ಯ ಸ್ವಾಭಿಮಾನಿಯಾಗಿದ್ದರು. ಅವರ ತತ್ವಾದರ್ಶ ಹಾಗೂ ಸ್ವಾಭಿಮಾನವನ್ನು ಜನರು ಅನುಸರಿಸಬೇಕು. ದಿವಂಗತ ಕೆಂಗಲ್ ಹನುಮಂತಯ್ಯ ಮೊದಲ ಚುನಾಯಿತ ಮುಖ್ಯಮಂತ್ರಿ ಜೊತೆಗೆ ದಕ್ಷ ಧೀಮಂತ ಆಡಳಿತಗಾರರಾಗಿದ್ದರು. ಈ ನೆಲಕ್ಕೆ ಸ್ವಾಭಿಮಾನ ತಂದು ಕೊಟ್ಟವರು. ದೂರದೃಷ್ಟಿ ಹೊಂದಿದ್ದ ಅವರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಂಗಲ್ ಹನುಮಂತಯ್ಯ ವಿಚಾರಧಾರೆಗಳ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗುವುದು ಎಂದು ಹೇಳಿದರು.ಹಳೇ ಬಸ್ ನಿಲ್ದಾಣದ ವೃತ್ತದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಸಂರಕ್ಷಣೆ ದೃಷ್ಟಿಯಿಂದ ಯಾವುದೇ ಫ್ಲೆಕ್ಸ್, ಬ್ಯಾನರ್ ಹಾಗೂ ಕಟೌಟ್‌ಗಳನ್ನು ಅಳವಡಿಸದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಯಾರಾದರು ಇದನ್ನು ಉಲ್ಲಂಘಿಸಿದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚನ್ನಪಟ್ಟಣ ತಾಲೂಕು ಕೆಂಗಲ್‌ನಲ್ಲಿರುವ ಹನುಮಂತಯ್ಯ ಅವರ ಸಮಾಧಿ ಸ್ಥಳ ಅಭಿವೃದ್ಧಿ ಆಗಬೇಕಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಯೋಗೇಶ್ವರ್ ಸೇರಿದಂತೆ ಜಿಲ್ಲಾಧಿಕಾರಿಗಳ ಗಮನ ಸೆಳೆಯುತ್ತೇನೆ. ಹನುಮಂತಯ್ಯ ಅವರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶೇಷಾದ್ರಿ ತಿಳಿಸಿದರು.ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮಗುರುವೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಶಿವಲಿಂಗಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಲಿಂಗು, ಭಾರತಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಚಂದ್ರಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿಸುರೇಶ್, ನಗರಸಭೆ ಸದಸ್ಯರಾದ ಸೋಮಶೇಖರ್, ಬಿ.ಸಿ.ಪಾರ್ವತಮ್ಮ, ಮಂಜುಳಾ, ಮಹಾಲಕ್ಷ್ಮಿ, ಮಂಜುನಾಥ್, ಗ್ಯಾಬ್ರಿಯಲ್, ವಿಜಯಕುಮಾರಿ, ನಾಗಮ್ಮ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಪ್ರವೀಣ್, ಕೆಡಿಪಿ ಸದಸ್ಯ ಪುಟ್ಟಣ್ಣ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಮುಖಂಡರಾದ ಚೂಡಲಿಂಗಯ್ಯ, ಮಾಯಗಾನಹಳ್ಳಿ ರೇವಣ್ಣ, ಡೇರಿ ವೆಂಕಟೇಶ್, ನಾಗೋಹಳ್ಳಿ ದೀಪು, ದೇವರಾಜು, ಪ್ರಕಾಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕೆಂಗಲ್ ಹನುಮಂತಯ್ಯ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಬಾಕ್ಸ್ ...............
ಪೌರ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ವಿತರಣೆ
ರಾಮನಗರ: ರಾಮನಗರ ನಗರಸಭೆಯ 24.10ರಡಿ 157 ಪೌರ ನೌಕರರಿಗೆ ಆರೋಗ್ಯ ಕಾರ್ಡ್‌ಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಶನಿವಾರ ವಿತರಿಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಆರೋಗ್ಯಕಾರ್ಡ್ ವಿತರಣಾ ಸಮಾರಂಭದಲ್ಲಿ ನಗರಸಭೆ ಆರೋಗ್ಯ ಶಾಖೆಯ ಎಇಇ ಸುಬ್ರಮಣಿ ಮಾತನಾಡಿ, ಪ್ರತಿನಿತ್ಯ ನಗದ ಸ್ವಚ್ಛತೆ ಸೇರಿದಂತೆ ಅನೈರ್ಮಲ್ಯ ಕೆಲಸ ಮಾಡುವ ಪೌರಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ 5 ಲಕ್ಷ ರು.ಗಳ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ, ಮಂಡ್ಯ ಹಾಗೂ ಬೆಂಗಳೂರಿನ ಕೆಲವು ಆಯ್ದ ಆಸ್ಪತ್ರೆಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಪೌರ ನೌಕರರು ಪಡೆಯಬಹುದಾಗಿದೆ ಎಂದು ಸುಬ್ರಮಣಿ ಹೇಳಿದರು.ಈ ವೇಳೆ ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಪೌರ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ನಾಗರಾಜು, ಜಿಲ್ಲಾಧ್ಯಕ್ಷ ಕೊಲ್ಲಾಪುರಿ ಇತರರಿದ್ದರು. ಪೌರಕಾರ್ಮಿಕ ಶಂಕರ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
14ಕೆಆರ್ ಎಂಎನ್ 3,4.ಜೆಪಿಜಿ3.ರಾಮನಗರದ ಹಳೇ ಬಸ್ ನಿಲ್ದಾಣ ವೃತ್ತದಲ್ಲಿರುವ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ನಗರಸಭೆ ಅಧ್ಯಕ್ಷ ಶೇಷಾದ್ರಿ ಮಾಲಾರ್ಪಣೆ ಮಾಡಿದರು.
4.ನಗರಸಭೆ ಅಧ್ಯಕ್ಷ ಶೇಷಾದ್ರಿ ಪೌರ ಕಾರ್ಮಿಕರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿದರು.