ಯೋಜನೆಗಳ ವೈಫಲ್ಯಕ್ಕೆ ಸರ್ಕಾರಗಳ ಇಚ್ಛಾಶಕ್ತಿ ಕೊರತೆ

| Published : Mar 25 2025, 12:49 AM IST

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಯುವ ಸಂಚಲನ, ಭಾರತೀಯ ವೈದ್ಯಕೀಯ ಸಂಘ ಹಾಗೂ ಸಂವಿಧಾನ ಸಾಥಿ ಸಹಯೋಗದಲ್ಲಿ ವಿಶ್ವ ಜಲದಿನದ ಅಂಗವಾಗಿ ವೈದ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀರಿನ ಮರುಬಳಕೆಯ ಸಾಧಕ-ಬಾಧಕಗಳ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ ಹಾಗೂ ಭವಿಷ್ಯದ ನೀರಿನ ಸ್ಥಿತಿಗತಿಗಳ ಕುರಿತಾಗಿ ಸಂವಾದ ಆಯೋಜಿಸಲಾಗಿತ್ತು.

ದೊಡ್ಡಬಳ್ಳಾಪುರ: ಇಲ್ಲಿನ ಯುವ ಸಂಚಲನ, ಭಾರತೀಯ ವೈದ್ಯಕೀಯ ಸಂಘ ಹಾಗೂ ಸಂವಿಧಾನ ಸಾಥಿ ಸಹಯೋಗದಲ್ಲಿ ವಿಶ್ವ ಜಲದಿನದ ಅಂಗವಾಗಿ ವೈದ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀರಿನ ಮರುಬಳಕೆಯ ಸಾಧಕ-ಬಾಧಕಗಳ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ ಹಾಗೂ ಭವಿಷ್ಯದ ನೀರಿನ ಸ್ಥಿತಿಗತಿಗಳ ಕುರಿತಾಗಿ ಸಂವಾದ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ''''''''ಬ್ರೇವ್-ಬ್ಲೂ ವರ್ಲ್ಡ್'''''''' ಹಾಗು ''''''''ಕೆ.ಸಿ, ಎಚ್.ಎನ್ ವ್ಯಾಲಿ ಉತ್ತಮ ಯೋಜನೆ ಕೆಟ್ಟ ಅನುಷ್ಠಾನ'''''''' ಎಂಬ ಎರಡು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.

ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್ ಮೂರ್ತಿ ಮಾತನಾಡಿ, ವಿಶ್ವದ ವಿವಿಧ ರಾಷ್ಟ್ರಗಳು ನೀರಿನ ಮಹತ್ವವನ್ನು ಅರಿತು ಅದರ ಮರು ಬಳಕೆಯನ್ನು ಯಾವ ರೀತಿ ಯಶಸ್ವಿಯಾಗಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಸಾಕ್ಷ್ಯಚಿತ್ರಗಳಲ್ಲಿ ಕಾಣಬಹುದು. ಆದರೆ ನಮ್ಮಲ್ಲಿ ಕೆ.ಸಿ ವ್ಯಾಲಿ ಎಚ್.ಎನ್ ವ್ಯಾಲಿಗಳಂತ ಯೋಜನೆಗಳು ವಿಫಲವಾಗಲು ಸರ್ಕಾರಗಳ ಅವೈಜ್ಞಾನಿಕ ಕಾರ್ಯವೈಖರಿ, ಇಚ್ಛಾಶಕ್ತಿ ಹಾಗೂ ಭ್ರಷ್ಟಾಚಾರವೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ವ್ಯಾಲಿಯ ಹೆಸರಿನಲ್ಲಿ ದೊಡ್ಡಬಳ್ಳಾಪುರಕ್ಕೆ ಆಗುವ ಅನಾಹುತ ಕುರಿತು ಇಂದಿನಿಂದಲೆ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಪರಿಸರವಾದಿ ಕೆ.ಗುರುದೇವ್ ಮಾತನಾಡಿ, ಸರಿಯಾದ ರೀತಿಯಲ್ಲಿ ನೀರಿನ ಮರು ಬಳಕೆ ಮಾಡದ ಕಾರಣ ಬೆಂಗಳೂರು ಹಾಗು ಬೆಂಗಳೂರಿನ ಸುತ್ತಮುತ್ತ ಬೆಳೆಯುವ ಬೆಳೆಗಳಲ್ಲಿ ಭಾರಿ ಲೋಹದ ಅಂಶಗಳು ಕಂಡುಬರುತ್ತಿದೆ ಹಾಗು ಇದನ್ನು ಸೇವಿಸಿದರೆ ನಿಧಾನಗತಿಯಲ್ಲಿ ವಿಷಕಾರಿ ಅಂಶಗಳು ನಮ್ಮ ದೇಹವನ್ನು ಪ್ರವೇಶಿಸುತ್ತದೆ. 50 ವರ್ಷಗಳ ಹಿಂದೆ ಕೆರೆಯಲ್ಲಿ ಬಟ್ಟೆ ಒಗೆಯಲು ಹೋದರೆ ನೀರಿನಲ್ಲಿ ಈಜುತ್ತಾ ಕೆರೆ ನೀರನ್ನು ಕುಡಿಯುತ್ತಿದ್ದ ನೆನಪುಗಳಿವೆ. ಆದರೆ ಈಗಿನ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಆತಂಕವಾಗುತ್ತದೆ. ಎಂದು ಅನುಭವ ಹಂಚಿಕೊಂಡರು.

ಸ್ತ್ರೀರೋಗ ತಜ್ಞೆ ಡಾ.ಆರ್.ಇಂದಿರಾ ಮಾತನಾಡಿ, ಸಾಕ್ಷ್ಯಚಿತ್ರದಲ್ಲಿ ಬೇರೆ ಬೇರೆ ರಾಷ್ಟ್ರಗಳು ನೀರಿನ ಮರುಬಳಕೆಯನ್ನು ಯಾವ ರೀತಿ ಮಾಡುತ್ತಿದ್ದಾರೆ ಎಂದು ನೋಡಿದ್ದೇವೆ. ನಾವು ಬಳಸಿದ ನೀರನ್ನು ಮರುಬಳಕೆ ಮಾಡಬೇಕಿದೆ. ಇಂದಿನ ದಿನಗಳಲ್ಲಿ ನೀರಿನ ಹಾಹಾಕಾರ ಯಾವ ಹಂತ ತಲುಪಿದೆ ಎಂಬುದು ನಮ್ಮೆಲ್ಲರಿಗೂ ಅರಿವಿದೆ. ಆದ್ದರಿಂದ ಪೋಲು ಮಾಡದೆ ಹಿತಮಿತವಾಗಿ ಬಳಸಬೇಕು. ಈ ಬಗ್ಗೆ ಜನಜಾಗೃತಿ ಅನಿವಾರ್ಯ, ಮುಖ್ಯವಾಗಿ ಮನೆಗಳಲ್ಲಿ ಮಹಿಳೆಯರು ನೀರಿನ ಮಹತ್ವ ಅರಿತು ಬಳಸಬೇಕು. ಮಕ್ಕಳಿಗೂ ತಿಳಿಸಿಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞೆ ಡಾ.ಶಾಲಿನಿ, ನಾಗದಳದ ವೆಂಕಟೇಶ್ ಆದಿನಾರಾಯಣ, ನಾಗರಾಜ್, ಸಾಮಾಜಿಕ ಅರಣ್ಯ ಇಲಾಖೆ ಚಂದ್ರು, ಯುವ ಸಂಚಲನ ತಂಡದ ಸದಸ್ಯರು ಹಾಗು ಪರಿಸರಾಸಕ್ತರು ಭಾಗವಹಿಸಿದ್ದರು.

24ಕೆಡಿಬಿಪಿ2-

ದೊಡ್ಡಬಳ್ಳಾಪುರದ ಭಾರತೀಯ ವೈದ್ಯಕೀಯ ಸಂಘದ ಭವನದಲ್ಲಿ ವಿಶ್ವ ಜಲ ದಿನದ ಅಂಗವಾಗಿ ನೀರಿನ ಮರುಬಳಕೆಯ ಸಾಧಕ-ಬಾಧಕ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.