ಲಾಯಿಲ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಅಷ್ಟಬಂಧ ಬ್ರಹ್ಮಕಲಶೋತ್ಸವ

| Published : Apr 23 2025, 12:38 AM IST

ಲಾಯಿಲ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಅಷ್ಟಬಂಧ ಬ್ರಹ್ಮಕಲಶೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನ ಲಾಯಿಲ ಇಲ್ಲಿ ಶ್ರೀ ರಾಮಚಂದ್ರ ಮುಖ್ಯಪ್ರಾಣ ಸಹಿತ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಸೋಮವಾರ ರಾತ್ರಿ ಎರಡನೇ ದಿನದ ಧಾರ್ಮಿಕ ಸಭೆ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

‘ರಾಘವೇಂದ್ರ ಸ್ವಾಮಿಗಳು ಅದ್ಭುತವಾದ ವೈರಾಗ್ಯ ನಿಧಿ. ಅವರು ಭಕ್ತರ ಪಾಲಿಗೆ ಕಲ್ಪವೃಕ್ಷ – ಕಾಮಧೇನುವಿದ್ದಂತೆ. ಭಕ್ತರು ಮಂತ್ರಾಲಯಕ್ಕೆ ಹೋಗಿ ಪೂಜಿಸಿದರೂ, ಮೃತ್ತಿಕಾ ಬ್ರಂದಾವನದಲ್ಲಿ ಪೂಜಿಸಿದರೂ ಅನುಗ್ರಹ ನೀಡುವವರು ಅವರು’ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಅವರು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನ ಲಾಯಿಲ ಇಲ್ಲಿ ಶ್ರೀ ರಾಮಚಂದ್ರ ಮುಖ್ಯಪ್ರಾಣ ಸಹಿತ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸೋಮವಾರ ರಾತ್ರಿ ನಡೆದ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ವಸ್ತ್ರ, ಶರೀರ, ಮಾತು, ವಿದ್ಯೆ, ವಿನಯ ಈ ಐದು ಕಾರಣಗಳಿಂದಾಗಿ ನಾವು ಗೌರವಕ್ಕೆ ಪಾತ್ರರಾಗುತ್ತೇವೆ. ರಾಘವೇಂದ್ರ ಸ್ವಾಮಿಗಳ ಅನುಗ್ರಹವಿದ್ದಲ್ಲಿ ಗುರು ಮಾರ್ಗದ ಮೂಲಕ ದೇವ ಮಾರ್ಗವನ್ನು ಪಡೆಯಲು ಸಾಧ್ಯ. ಕಷ್ಟವನ್ನೇ ಅನುಭವಿಸಿದವನಿಗೆ ಏನೇ ಸುಖ ಬಂದರೂ ಅದು ಅಪ್ಯಾಯಮಾನವಾಗಿರುತ್ತದೆ. ಕಷ್ಟವನ್ನೇ ಅನುಭವಿಸಿದ ರಾಯರು ಸಕಲರ ಗೌರವಕ್ಕೆ ಪಾತ್ರರಾಗಿ ಲೋಕದ ಗುರುಗಳಾಗಿ ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಹಾಗಾಗಿ ಮಾತಿನಲ್ಲಿ ಸತ್ಯ, ಕೃತಿಯಲ್ಲಿ ಧರ್ಮ ನಮ್ಮೊಳಗಿರಬೇಕು’ ಎಂದರು.ಶ್ರೀ ರಾಘವೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ಉಪಾಧ್ಯಕ್ಷ ಬಿ. ವಿಠಲ ಶೆಟ್ಟಿ, ಕಾರ್ಯದರ್ಶಿ ಕುಶಾಲಪ್ಪ ಗೌಡ ಇದ್ದರು.ಶ್ರೀ ರಾಘವೇಂದ್ರ ಪ್ರತಿಷ್ಠಾನದ ಟ್ರಸ್ಟಿ ಎ. ಕೃಷ್ಣಪ್ಪ ಪೂಜಾರಿ ಪ್ರಸ್ತಾವಿಸಿ, ಸ್ವಾಗತಿಸಿದರು. ಸುಧಾಮಣಿ ಆರ್ ಕಾರ್ಯಕ್ರಮ ನಿರೂಪಿಸಿ, ದಯಾನಂದ ಲಾಯಿಲ ವಂದಿಸಿದರು.ಇಂದಿನ ಕಾರ್ಯಕ್ರಮಗಳು:ಪ್ರತಿಷ್ಠಾ ಪ್ರಧಾನ ಹೋಮ, ಕಲಶಾರಾಧನೆ, ಶ್ರೀ ಮೂಲರಾಮ ಸಹಿತ ಶ್ರೀ ರಾಘವೇಂದ್ರ ಗುರುಗಳ ವೃಂದಾವನದಲ್ಲಿ ಶ್ರೀ ರಾಯರ ಮೃತ್ತಿಕಾ ಪ್ರತಿಷ್ಠಾಪನೆ, ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ಅನ್ನಸಂತರ್ಪಣೆ, ಉಜಿರೆಯ ಮೂಕಾಂಬಿಕಾ ಭಜನಾ ಮಂಡಳಿ ಹಾಗೂ ಬೆಳ್ತಂಗಡಿಯ ಮುಖ್ಯಪ್ರಾಣ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಬೆಳಗ್ಗೆ ಗಂಟೆ 11.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಉಜಿರೆ ಲಕ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್, ಕಣಿಯೂರು ರೈತಬಂಧು ಆಹಾರೋದ್ಯಮದ ಮಾಲಕ ಶಿವಶಂಕರ್ ನಾಯಕ್, ಬೆಳ್ತಂಗಡಿ ಶ್ರೀ ಗುರುದೇವ ಬ್ಯಾಂಕ್ ನ ಉಪಾಧ್ಯಕ್ಷ ಭಗೀರಥ ಜಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.