ಕೋಡಿ ಬಿದ್ದು ಹರಿಯುತ್ತಿರುವ ಕೆರೆಗಳು

| Published : Oct 21 2025, 01:00 AM IST

ಸಾರಾಂಶ

ಕುದೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಾಗಡಿ ತಾಲೂಕಿನ ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಕುದೂರು ಮತ್ತು ತಿಪ್ಪಸಂದ್ರ ಹೋಬಳಿಯ ಕೆಂಚನಪುರ ಕೆರೆ, ಮಲ್ಲಪ್ಪನಹಳ್ಳಿ ಕೆರೆ, ತಿಪ್ಪಸಂದ್ರ ಕೆರೆಗಳು ಭರ್ತಿಯಾಗಿ ಕೋಡಿ ರಭಸವಾಗಿ ಹರಿಯುತ್ತಿವೆ.

ತಿಪ್ಪಸಂದ್ರ ಕೆರೆ ಭರ್ತಿಯಾಗಿ ಬಹಳ ವರ್ಷಗಳಾಗಿದ್ದವು. ಭಾನುವಾರ ರಾತ್ರಿ ಸುರಿದ ಮಳೆಗೆ ಭರ್ತಿಯಾಗಿ ಹರಿಯುತ್ತಿದೆ. ತಿಪ್ಪಸಂದ್ರ ಕೆರೆಯಿಂದ ಬಗಿನಗೆರೆ ಕೆರೆಗೆ ಹೋಗಿ ಅಲ್ಲಿಂದ ಕುಣಿಗಲ್ ಕೆರೆಗೆ ಹೊರಡುತ್ತದೆ. ನಂತರ ಮಂಗಳ ಜಲಾಯಶಯಕ್ಕೆ ಹೋಗಿ ಶಿಂಶಾ ನದಿಯನ್ನು ಸೇರುತ್ತದೆ. ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್ ನದಿಪಾತ್ರದ ಬಗ್ಗೆ ವಿವರಿಸುತ್ತಾರೆ.

ರೈತರು ಕೇಳಿಕೊಂಡಂತೆ ಮಳೆ ಕಾಲಕಾಲಕ್ಕೆ ಸುರಿದು ಕೆರೆಕಟ್ಟೆ ಭರ್ತಿಯಾಗಿ ಬೆಳೆಗಳು ನಳನಳಿಸುತ್ತಿರುವುದರಿಂದ ರೈತನ ಮೊಗದಲ್ಲಿ ದೀಪಾವಳಿಯ ನಗುವಿನ ಮತಾಪು ಅರಳಿದೆ.

20ಕೆಆರ್ ಎಂಎನ್ 2.ಜೆಪಿಜಿ

ತಿಪ್ಪಸಂದ್ರ ಕೆರೆ ಕೋಡಿ ಆಗಿ ರಭಸವಾಗಿ ನದಿಯೋಪಾದಿಯಾಗಿ ಹರಿಯುತ್ತಿರುವುದು.