ಲಕ್ಕೇನಹಳ್ಳಿ ಗೊಲ್ಲರಹಟ್ಟಿಗೆ ಶೀಘ್ರವೇ ಕಂದಾಯ ಗ್ರಾಮ

| Published : Aug 18 2025, 12:00 AM IST

ಲಕ್ಕೇನಹಳ್ಳಿ ಗೊಲ್ಲರಹಟ್ಟಿಗೆ ಶೀಘ್ರವೇ ಕಂದಾಯ ಗ್ರಾಮ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಕೇನಹಳ್ಳಿ ಗೊಲ್ಲರಹಟ್ಟಿಯನ್ನು ಕಂದಾಯ ಗ್ರಾಮ ಮಾಡುವುದಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ಭರವಸೆಯನ್ನು ನೀಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಲಕ್ಕೇನಹಳ್ಳಿ ಗೊಲ್ಲರಹಟ್ಟಿಯನ್ನು ಕಂದಾಯ ಗ್ರಾಮ ಮಾಡುವುದಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ಭರವಸೆಯನ್ನು ನೀಡಿದರು.

ತಾಲೂಕಿನ ಲಕ್ಕೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಷ್ಣುವಿನ ದಶಾವತಾರದಲ್ಲಿ ಒಂದಾದ ಶ್ರೀ ಕೃಷ್ಣ ಪರಮಾತ್ಮ ಸತ್ಯ, ಧರ್ಮ ನ್ಯಾಯ ಸಂದೇಶದ ಪ್ರತೀಕವಾಗಿ ಕಂಗೊಳಿಸುತ್ತಿದ್ದಾರೆ. ದೇಶದ ಎರಡು ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಮಧ್ಯೆ ನಡೆದ ಯುದ್ಧದಲ್ಲಿ ಶ್ರೀ ಕೃಷ್ಣನು ಧರ್ಮದ ಪರವಾಗಿ ಪಂಡವರಿಗೆ ಜಯಶಾಲಿಯಾಗುವಂತೆ ಹರಿಸಿದನು. ಜೊತೆಗೆ ಅಧರ್ಮದಿಂದ ಕೂಡಿದ್ದ ಕೌರವರ ಸೋಲಲಿಕ್ಕೆ ಕೃಷ್ಣನೇ ಕಾರಣರಾಗಿದ್ದು ಎಂದು ಹೇಳಿದರು. ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ, ಜನಾಂಗವು ಸಂಘಟಿತರಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ಇಂತಹ ಕಾರ್ಯಕ್ರಮದಲ್ಲಿ ಯಾವುದೇ ದ್ವೇಷ ಅಸೂಹೆ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.ನಂತರ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಮಕ್ಕಳು ಕೃಷ್ಣ ರಾಧೆಯ ವೇಷದ ಮೂಲಕ ಕೃಷ್ಣನ ಬಾಲ್ಯಾವಸ್ಥೆಯ ತುಂಟತನದ ಮೊಸರು ಗಡಿಗೆ ಒಡೆಯುವ ಆಟ, ಬೆಣ್ಣೆ ಕದಿಯೋ ಆಟಗಳನ್ನು ಆಡಿಸುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಅನ್ನಸಂತರ್ಪಣೆ, ಪಾನಕ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಚಿಕ್ಕಣ್ಣಸ್ವಾಮಿ ದೇವರ ಅರ್ಚಕ ಶಿವಕುಮಾರ್, ಡಾ.ಕೆ.ಪಿ.ಕೃಷ್ಣಪ್ಪ, ಮುಖಂಡ ಜೆಸಿಬಿ ಕೃಷ್ಣಮೂರ್ತಿ, ಗ್ರಾಪಂ ಸದಸ್ಯರಾದ ಭಾಗ್ಯಮ್ಮ ಪಾಂಡುರಂಗಪ್ಪ, ಮಹೇಂದ್ರಕುಮಾರ್, ಮುಖಂಡರಾದ ಕೃಷ್ಣೋಜಿ ರಾವ್, ಶಿವಾಜಿ ರಾವ್, ಗುಬ್ಬಿಹಟ್ಟಿ ಮಹಾಲಿಂಗಯ್ಯ,ಉದಯ್ ಕುಮಾರ್, ನರಸೀಯಪ್ಪ, ಚಿಕ್ಕೀರಯ್ಯ, ಮಹದೇವ್, ಪ್ರಸಾದ್, ರಂಗಸ್ವಾಮಿ ಹಾಗೂ ಗ್ರಾಮಸ್ಥರು, ಯುವಕ ಸಂಘದ ಪದಾಧಿಕಾರಿಗಳು ಇದ್ದರು.