ಲಕ್ಷ ಭಗವದ್ಗೀತಾ ಪ್ರತಿ ಹಂಚಿದ ಉಮೇಶ ಕಾರಜೋಳ

| Published : Nov 25 2024, 01:05 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಈ ಬಾರಿ ವಿಜಯಪುರ ಜಿಲ್ಲೆಯನ್ನು ಕೇಂದ್ರವನ್ನಾಗಿಸಿ ರಾಜ್ಯಾದ್ಯಂತ ಭಗವದ್ಗೀತಾ ಅಭಿಯಾನ ನಡೆಸುತ್ತಿದ್ದಾರೆ. ನ.4ರಿಂದ ಡಿ.14ರ ವರೆಗೆ ಜಿಲ್ಲೆಯಲ್ಲಿ ನಡೆದ ಅಭಿಯಾನದದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ಉಮೇಶ ಕಾರಜೋಳ ಅವರು ಒಂದು ಲಕ್ಷ ಭಗವದ್ಗೀತೆ ಪ್ರತಿಗಳನ್ನು ಉಚಿತವಾಗಿ ಹಂಚಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ:

ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಈ ಬಾರಿ ವಿಜಯಪುರ ಜಿಲ್ಲೆಯನ್ನು ಕೇಂದ್ರವನ್ನಾಗಿಸಿ ರಾಜ್ಯಾದ್ಯಂತ ಭಗವದ್ಗೀತಾ ಅಭಿಯಾನ ನಡೆಸುತ್ತಿದ್ದಾರೆ. ನ.4ರಿಂದ ಡಿ.14ರ ವರೆಗೆ ಜಿಲ್ಲೆಯಲ್ಲಿ ನಡೆದ ಅಭಿಯಾನದದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿ ಅಧ್ಯಕ್ಷ ಉಮೇಶ ಕಾರಜೋಳ ಅವರು ಒಂದು ಲಕ್ಷ ಭಗವದ್ಗೀತೆ ಪ್ರತಿಗಳನ್ನು ಉಚಿತವಾಗಿ ಹಂಚಿದ್ದಾರೆ. ನಾಡಿನ ಜನತೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದು, ಶ್ರೀ ಭಗವದ್ಗೀತಾ 9ನೇ ಅಧ್ಯಾಯದ ಶ್ಲೋಕಗಳುಳ್ಳ ಒಂದು ಲಕ್ಷ ಪ್ರತಿಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ. ಜಿಲ್ಲೆಯ ಶಾಲಾ-ಕಾಲೇಜುಗಳು, ದೇವಸ್ಥಾನಗಳು, ಧಾರ್ಮಿಕ ಕೇಂದ್ರಗಳು ಸೇರಿದಂತೆ ಎಲ್ಲೆಡೆ ಸ್ವತಃ ಉಮೇಶ ಕಾರಜೊಳ ಹಾಗೂ ಅವರ ತಂಡ ಸಂಚರಿಸಿ ಉಚಿತವಾಗಿ ಪ್ರತಿಗಳನ್ನು ವಿತರಿಸುಸತ್ತಿದೆ.ಕೋಟ್:

ಶ್ರೀಗಳ ಹಾಗೂ ಹಿರಿಯರ ಮಾರ್ಗದರ್ಶನದಂತೆ ಶ್ರೀ ಭಗವದ್ಗೀತಾ ಅಭಿಯಾನದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಭಗವದ್ಗೀತೆಯ ಶಕ್ತಿ, ಸಂಸ್ಕೃತಿಯ ಜಾಗೃತಿ ಮೂಡಿಸುವ ಸಲುವಾಗಿ ಭಗವದ್ಗೀತೆಯ ಶ್ಲೋಕಗಳುಳ್ಳ ಒಂದು ಲಕ್ಷ ಪ್ರತಿಗಳನ್ನು ಮುದ್ರಿಸಿ ಎಲ್ಲೆಡೆ ಉಚಿತವಾಗಿ ಹಂಚಲಾಗುತ್ತಿದೆ. ತಂದೆಯವರ ಸಲಹೆ ಮೇರೆಗೆ ಸಮಾಜಕ್ಕಾಗಿ ಸಣ್ಣ ಅಳಿಲುಸೇವೆ ಮಾಡುತ್ತಿದ್ದೇವೆ.

ಉಮೇಶ ಕಾರಜೋಳ, ಅಧ್ಯಕ್ಷರು, ಭಗವದ್ಗೀತಾ ಅಭಿಯಾನ ಸಮಿತಿ