ಬೆಟ್ಟದರಸಮ್ಮನ ಸನ್ನಿಧಿಯಲ್ಲಿ ಇಂದು ಲಕ್ಷದೀಪೋತ್ಸವ

| Published : Nov 26 2024, 12:48 AM IST

ಬೆಟ್ಟದರಸಮ್ಮನ ಸನ್ನಿಧಿಯಲ್ಲಿ ಇಂದು ಲಕ್ಷದೀಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಶ್ರೀಬೆಟ್ಟದರಸಮ್ಮ ತಾಯಿ ಹಲಗೂರು ಸೇರಿದಂತೆ ಗುಂಡಾಪುರ, ನಂದಿಪುರ, ಕೆಂಪಯ್ಯನ ದೊಡ್ಡಿ, ದೇವಿರಹಳ್ಳಿ, ದಳವಾಯಿ ಕೋಡಿಹಳ್ಳಿ, ಬಸವನಹಳ್ಳಿ ಮತ್ತು ಇತರೆ ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾರೆ. ದೇವಿ ಸನ್ನಿಧಿಯಲ್ಲಿ ನ.26ರ ಬೆಳಗ್ಗೆ 7.30ರಿಂದ ಗಣಪತಿ ಪೂಜೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಗುಂಡಾಪುರ ಗ್ರಾಮದ ಪುಣ್ಯ ಕ್ಷೇತ್ರ ಶ್ರೀಬೆಟ್ಟದರಸಮ್ಮನ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ಮಾಸದ ಅಂಗವಾಗಿ 26ನೇ ವರ್ಷದ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.

ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಶ್ರೀಬೆಟ್ಟದರಸಮ್ಮ ತಾಯಿ ಹಲಗೂರು ಸೇರಿದಂತೆ ಗುಂಡಾಪುರ, ನಂದಿಪುರ, ಕೆಂಪಯ್ಯನ ದೊಡ್ಡಿ, ದೇವಿರಹಳ್ಳಿ, ದಳವಾಯಿ ಕೋಡಿಹಳ್ಳಿ, ಬಸವನಹಳ್ಳಿ ಮತ್ತು ಇತರೆ ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾರೆ.

ದೇವಿ ಸನ್ನಿಧಿಯಲ್ಲಿ ನ.26ರ ಬೆಳಗ್ಗೆ 7.30ರಿಂದ ಗಣಪತಿ ಪೂಜೆ ನಡೆಸಿ, ನಂತರ ದೇವಿಯ ಮೂರ್ತಿ ಶುಚಿಗೊಳಿಸಿ, ಪಂಚಾಮೃತ ಅಭಿಷೇಕ ನಡೆಸಿದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಕಾರ್ಯಕ್ರಮ ನಡೆಸಿ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಯೋಗಿಸಲಾಗುತ್ತದೆ.

ಸಂಜೆ ಅಪಾರ ಭಕ್ತಾದಿಗಳಿಂದ ಕಾರ್ತಿಕ ಮಾಸದ ಕೊನೆ ದಿನವಾದ ಮಂಗಳವಾರ ಸಂಜೆ ಲಕ್ಷದೀಪೋತ್ಸವವನ್ನು ನಡೆಸಲಾಗುತ್ತದೆ. ಭಕ್ತರೇ ದೀಪ ಎಣ್ಣೆ ತಂದು ದೇವರ ಆವರಣದಲ್ಲಿ ದೀಪಗಳನ್ನು ಹಚ್ಚಿ, ನಿಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳಲಿದ್ದಾರೆ ಎಂದು ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ

ಹಲಗೂರು:

ಕಾರ್ತಿಕ ಮಾಸದ ಕಡೆ ದಿನವಾದ ಸೋಮವಾರ ಹಲಗೂರಿನ ವಿದ್ಯಾಗಣಪತಿ ಕಾಳಿಕಾಂಬ ನಡುಕೇರಿ ವೀರಭದ್ರ ಸ್ವಾಮಿ ಕೊನ್ನಾಪುರದ ಶಂಭುಲಿಂಗೇಶ್ವರ ಚಿಲ್ಲಾಪುರದ ಸಿದ್ಧಪಾಜಿ ಪುರದೊಡ್ಡಿ ಶನಿಶ್ವರ ಸ್ವಾಮಿ ಹಲಗೂರು ಗ್ರಾಮ ದೇವತೆ ಪಟ್ಟಳದಮ್ಮ ಹೆಬ್ಬೆಟ್ಟದ ಬಸವೇಶ್ವರ ಗುಂಡಾಪುರದ ಬೆಟ್ಟದರಸಮ್ಮ ಸೇರಿದಂತೆ ಇನ್ನೂ ಇತರ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸೋಮವಾರ ಸಂಜೆ ದೇವಸ್ಥಾನಕ್ಕೆ ಬಂದ ಭಕ್ತರು ದೀಪ ಬೆಳಗಿ ತಮಷ್ಟಾರ್ಥವನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.