ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಬೃಹನ್ಮಠದ ಆವರಣದಲ್ಲಿ ವೀರಶೈವ ಮಹಿಳಾ ಸಮಾಜದಿಂದ ನಡೆದ ಲಲಿತ ಸಹಸ್ರನಾಮ ಪಾರಾಯಣದಲ್ಲಿ ಸರಸ್ವತಿ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸುಶೀಲಮ್ಮ ಮಾತನಾಡಿ, ಸಮಾಜದ ಮಹಿಳೆಯರು ಮತ್ತು ಮಹಿಳಾ ಸಂಘದ ಸದಸ್ಯರಿಗೆ ಲಲಿತ ಸಹಸ್ರನಾಮ ಪಾರಾಯಣವನ್ನು ಕಲಿಯಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು. ಅದಕ್ಕಾಗಿ ನಾವು ಸಂಘವನ್ನು ಸ್ಥಾಪಿಸಿಕೊಂಡು 15 ದಿನಗಳಿಂದ ನಮ್ಮ ಬೃಹನ್ಮಠಕ್ಕೆ ಬಂದು ಲಲಿತ ಸಹಸ್ರನಾಮ ಪಾರಾಯಣ ಕಲಿಯುತ್ತಿದ್ದೆವು ಎಂದರು.
ಇಂದು ಟಿ.ನರಸೀಪುರದ ಗುಣಶೀಲ ಅವರು ನಮ್ಮ ಮಠಕ್ಕೆ ಭೇಟಿ ನೀಡಿ ನಮಗೆ ಲಲಿತಸ್ರಾಹಸ್ರನಾಮ ಮತ್ತು ಇತರ ಸ್ತೋತ್ರಗಳನ್ನು ಪಾರಾಯಣ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ. ನಾವು ಇವುಗಳನ್ನು ಸದಾ ಭಕ್ತಿಯಿಂದ ಕಲಿತುಕೊಂಡರೆ ನಮಗೆ ಮುಂದಿನ ದಿನಗಳಲ್ಲಿ ಮನಸ್ಸಿಗೆ ನೆಮ್ಮದಿ, ಶಾಂತಿ ಜೊತೆಗೆ ಮಹಿಳಾ ಸಂಘಗಳ ಮೂಲಕ ಆರ್ಥಿಕವಾಗಿ ಸಬಲೀಕರಣ, ಧಾರ್ಮಿಕವಾಗಿ ಸಬಲರಾಗಲು ಸಹಕಾರಿಯಾಗಲಿದೆ ಎಂದರು.ಕವಿತಾ ಮಾತನಾಡಿ, ನಾವು ಪ್ರಾರಂಭ ಮಾಡಿದಾಗ ಕೇವಲ 10 ರಿಂದ 15 ಜನ ಇದ್ದೇವು. ಇಂದು 50ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದಾರೆ. ಲಲಿತ ಸಹಸ್ರನಾಮ ಪಾರಾಯಣ ಮಾಡುವುದರಿಂದ ಯಾವುದೇ ಮಾನಸಿಕ ಒತ್ತಡ ಇದ್ದರೂ ಅದನ್ನು ನಿವಾರಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗುಣಶೀಲ, ಶಾರದ, ಲಕ್ಷ್ಮಿ, ಉಮಾಮಹೇಶ್ವರಿ, ಟಿ.ವಿಜಯ ಇವರನ್ನು ಸಂಘದಿಂದ ಅರಿಶಿನ ಕುಂಕುಮ ದ ಜೊತೆ ಫಲ ತಾಂಬೂಲ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಸುಶೀಲ, ವೀಣಾ, ಕವಿತಾ, ಮಮತರಾಣಿ, ಶಾಲಿನಿ, ನಾಗರತ್ನ, ರೇಣುಕಾ, ವನಜಾಕ್ಷಮ್ಮ ಲತಾ, ರೂಪ, ವಿದ್ಯಾ, ಜಗದಾಂಬ ಸೇರಿದಂತೆ ಇತರರು ಇದ್ದರು.25ರಂದು ಆರ್‌ಪಿಎಫ್‌ನಿಂದ ಶೂಟಿಂಗ್ ಅಭ್ಯಾಸ: ಸಾರ್ವಜನಿಕರಿಗೆ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಮೈಸೂರುನೈಋತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ದಳ (ಆರ್ ಪಿಎಫ್) ವತಿಯಿಂದ ಎರಡನೇ ಹಂತದ ವಾರ್ಷಿಕ ಶೂಟಿಂಗ್ ವರ್ಗೀಕರಣ ಗುರಿ ಅಭ್ಯಾಸವನ್ನು ನ.25ರ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಂಡ್ಯ ಜಿಲ್ಲೆಯ ದೊಡ್ಡ ಬ್ಯಾಡರಹಳ್ಳಿ ಶೂಟಿಂಗ್ ಶ್ರೇಣಿಯಲ್ಲಿ ನಡೆಸಲಾಗುತ್ತಿದೆ. ಈ ಅಭ್ಯಾಸದ ಹಿನ್ನೆಲೆಯಲ್ಲಿ ಅಕ್ಕ- ಪಕ್ಕದ ಗ್ರಾಮಸ್ಥರು ಹಾಗೂ ತಮ್ಮ ದನಕರುಗಳನ್ನು ಶೂಟಿಂಗ್ ಶ್ರೇಣಿಯ ಒಳಗೂ ಹಾಗೂ ಸುತ್ತಮುತ್ತಲು ಚಲನ ವಲನ ಮಾಡದಂತೆ ವಿನಂತಿಸಿಕೊಳ್ಳಲಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ನಿವಾಸಿಗಳು ಸಹಕರಿಸುವಂತೆ ಕೋರಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))