ಬೆಳೆ ವಿಮೆ ಬಾಕಿ ಹಣ ಪಾವತಿಗೆ ಕುಂಟು ನೆಪ: ಖಾಸಗಿವಿಮಾ ಕಂಪನಿ ಕ್ರಮ ಖಂಡಿಸಿ ರೈತರ ಪ್ರತಿಭಟನೆ

| Published : Oct 13 2024, 01:09 AM IST

ಬೆಳೆ ವಿಮೆ ಬಾಕಿ ಹಣ ಪಾವತಿಗೆ ಕುಂಟು ನೆಪ: ಖಾಸಗಿವಿಮಾ ಕಂಪನಿ ಕ್ರಮ ಖಂಡಿಸಿ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಸಾಲಿನ ಬೆಳೆ ವಿಮೆ ಪರಿಹಾರದ ಬಾಕಿ ಹಣ ಪಾವತಿಗೆ ಕುಂಟು ನೆಪ ಹೇಳುತ್ತಿರುವ ರಿಲಾಯನ್ಸ್ ಇನ್ಸೂರನ್ಸ್ ಕಂಪನಿ ಕ್ರಮ ಖಂಡಿಸಿ ರೈತರು ಶನಿವಾರ ತಾಲೂಕಿನ ಇಟಗಿ ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ಕಳೆದ ಸಾಲಿನ ಬೆಳೆ ವಿಮೆ ಪರಿಹಾರದ ಬಾಕಿ ಹಣ ಪಾವತಿಗೆ ಕುಂಟು ನೆಪ ಹೇಳುತ್ತಿರುವ ರಿಲಾಯನ್ಸ್ ಇನ್ಸೂರನ್ಸ್ ಕಂಪನಿ ಕ್ರಮ ಖಂಡಿಸಿ ರೈತರು ಶನಿವಾರ ತಾಲೂಕಿನ ಇಟಗಿ ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಕಳೆದ ಬಾರಿ ಸರ್ಕಾರ ಬರಗಾಲ ಪೀಡಿತ ಜಿಲ್ಲೆ ಅಂತಾ ಘೋಷಿಸಿದ ನಂತರ ರಿಲಾಯನ್ಸ್ ಇನ್ಸೂರನ್ಸ ಕಂಪನಿ ಬೆಳೆವಿಮೆ ಮಾಡಿಸಿದ ಎಲ್ಲಾ ರೈತರ ಖಾತೆಗೆ ಶೇ.25 ವಿಮಾ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಿತ್ತು. ಆದರೆ ಇದೀಗ ಬಾಕಿ ಹಣ ಪಾವತಿಗೆ ಇಲ್ಲಸಲ್ಲದ ನೆಪ ಹೇಳುತ್ತಾ ಸರ್ಕಾರದ ಕ್ರಮವನ್ನು ಪ್ರಶ್ನಿಸುತ್ತಿದೆ. ವಿಮಾ ಕಂಪನಿಯ ಈ ನಿರ್ಧಾರವನ್ನು ಖಂಡಿಸಿ ಬೆಳೆವಿಮೆ ಹಣ ರೈತರ ಖಾತೆಗೆ ಜಮಾ ಆಗುವ ತನಕ ನಿರಂತರವಾಗಿ ಸರತಿಯಂತೆ ಪ್ರತಿ ದಿನ ಜಿಲ್ಲೆಯ ಒಂದೊಂದು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ರಿಲಾಯನ್ಸ್ ಕಂಪನಿಯ ಮುಖ್ಯಸ್ಥರು, ರೈತ ಮುಖಂಡರೊಂದಿಗೆ ಸಭೆ ನಡೆಸಬೇಕು. ಇದನ್ನು ನಿರ್ಲಕ್ಷಿಸಿದಲ್ಲಿ ಜಿಲ್ಲಾ ಬಂದ್‌ಗೆ ಕರೆ ನೀಡಿ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯತನ ಖಂಡಿಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗುವುದೆಂದು ಎಚ್ಚರಿಕೆ ನೀಡಿದರು. ಗ್ರಾಪಂ ಅಧ್ಯಕ್ಷ ನಾಗರಾಜ ಹೂಡಿ, ಸುಭಾಷಗೌಡ ರಾಮಲಿಂಗಣ್ಣನವರ, ಪ್ರಶಾಂತರಡ್ಡಿ ಯರೇಕುಪ್ಪಿ ಮಾತನಾಡಿದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆಯ ಉಪತಹಸೀಲ್ದಾರ್‌ ಎಂ.ಎಸ್. ಕಡೂರ ಕೃಷಿ ಇಲಾಖೆಯ ಮಹಬೂಬ್ ಭಾಷಾ ರೈತರಿಂದ ಮನವಿ ಸ್ವೀಕರಿಸಿದರು. ಮೈಲಾರಪ್ಪ ಬಿದರಿ, ಮಂಜಪ್ಪ ಶಿವಲಿಂಗಪ್ಪನವರ, ಹನುಮಂತಪ್ಪ ಗುತ್ತಲ, ಪ್ರಕಾಶ ಡೊಂಬರಮತ್ತೂರ, ಗ್ರಾಪಂ ಹನುಮಂತಪ್ಪ ಉಕ್ಕುಂದ, ಕೃಷ್ಣರಡ್ಡಿ, ಹನಮರಡ್ಡಿ, ಮಹೇಶಪ್ಪ ಕರೇಗೌಡ್ರ, ಹಾಲೇಶ ಕೆಂಚನಾಯ್ಕರ, ರುದ್ರಗೌಡ ಸಣ್ಣಗೌಡ್ರ, ರಾಮಪ್ಪ ದೇವರಮನಿ, ಚನ್ನಬಸಪ್ಪ ಮುದ್ದಿ, ಶಿದ್ದಪ್ಪ ದೇವರಮನಿ, ಗೋವಿಂದರಡ್ಡಿ ಯರೇಶಿಮಿ, ಮುತ್ತಪ್ಪ ದೇವರಮನಿ, ಬೂದೆಪ್ಪ ಹರಿಜನ, ಹರಿಹರಗೌಡ ಪಾಟೀಲ, ಅರುಣ ಯಲ್ಲಕ್ಕನವರ, ಹಾಲೇಶ ಗೋವಿಂದರಡ್ಡೇರ, ಯಲ್ಲಪ್ಪ ಓಲೇಕಾರ ಮತ್ತಿತರರಿದ್ದರು.