ಭೂ ಸಂಪತ್ತನ್ನು ಖಾಲಿಗೊಳಿಸಿ ಮರುಭೂಮಿ ಮಾಡಲಾಗುತ್ತಿದೆ-ಗವಿಸಿದ್ದೇಶ್ವರ ಶ್ರೀ

| Published : Nov 20 2024, 12:31 AM IST

ಭೂ ಸಂಪತ್ತನ್ನು ಖಾಲಿಗೊಳಿಸಿ ಮರುಭೂಮಿ ಮಾಡಲಾಗುತ್ತಿದೆ-ಗವಿಸಿದ್ದೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಂಪತ್ತಿನ ಆಸೆಗೆ ಬಿದ್ದ ಮನುಷ್ಯ ಫಲವತ್ತಾದ ಭೂಮಿ ಅದರಲ್ಲಿನ ಹೇರಳವಾದ ಸಂಪತ್ತನ್ನು ಖಾಲಿಗೊಳಿಸಿ ಮರುಭೂಮಿಯನ್ನಾಗಿ ಮಾಡುತ್ತಿರುವುದು ನಮ್ಮ ದೌರ್ಭಾಗ್ಯವೆಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಬ್ಯಾಡಗಿ: ಸಂಪತ್ತಿನ ಆಸೆಗೆ ಬಿದ್ದ ಮನುಷ್ಯ ಫಲವತ್ತಾದ ಭೂಮಿ ಅದರಲ್ಲಿನ ಹೇರಳವಾದ ಸಂಪತ್ತನ್ನು ಖಾಲಿಗೊಳಿಸಿ ಮರುಭೂಮಿಯನ್ನಾಗಿ ಮಾಡುತ್ತಿರುವುದು ನಮ್ಮ ದೌರ್ಭಾಗ್ಯವೆಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಆಧ್ಯಾತ್ಮ ಪ್ರವಚನದ 6 ದಿನವಾದ ಮಂಗಳವಾರ ನೆರೆದಿದ್ದ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಸಂಪತ್ತಿನ ಹಿಂದೆ ಬಿದ್ದಿರುವ ಮನುಷ್ಯ ಭೂಮಿಯಲ್ಲಿ ಚಿನ್ನ ಹುದುಗಿಡುವ ಕಾರ‍್ಯಕ್ಕೆ ಮುಂದಾಗಿದ್ದಾನೆ, ಇಟ್ಟಿದ್ದ ಚಿನ್ನವನ್ನೇ ದೋಚಲು ಮತ್ತೊಬ್ಬ ಸಿದ್ಧನಾಗಿದ್ದಾನೆ, ಇವರನ್ನು ನೋಡಿದ ಭೂಮಿ ನಗುತ್ತಾ ಹೇಳುತ್ತಿದೆ ನೀನು ಭೂಮಿ ಮೇಲೆ ಬದುಕಲು ಅವಶ್ಯವಿರುವ ಅನ್ನವನ್ನು ಕೊಡುವ ನನ್ನನ್ನು ದೋಚಿದರೇ ಚಿನ್ನವನ್ನು ತಿಂದು ಬದುಕಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದೆ ಎಂದರು.

ಸಂಪತ್ತು ತರಲಿದೆ ಆಪತ್ತು: ಎಷ್ಟು ಹಣವಿದ್ದರೇ ನಿಮಗೆ ನೆಮ್ಮದಿ ಸಿಗಲಿದೆ..? ಅಥವಾ ಹಣಕೊಟ್ಟು ನೆಮ್ಮದಿ ಪಡೆದುಕೊಳ್ಳಲು ಸಾಧ್ಯವೇ..? ನೀವು ಆಸೆಯ ಹಿಂದೆ ಬೀಳುತ್ತಿರುವುದೇ ನಿಮ್ಮಲ್ಲಿರುವ ಪ್ರಧಾನ ದೋಷವಾಗಿದೆ, ಇದನ್ನೇ ಅಂತಃಪ್ರಜ್ಞೆ ಎನ್ನ ಲಾಗುತ್ತದೆ ಇದನ್ನು ಎಂದಿಗೂ ಮನುಷ್ಯ ಕಳೆದುಕೊಳ್ಳಬಾರದು ಎಂದರು.

ಪರಿಸರ ನಿಮ್ಮನ್ನು ಉಳಿಸಲು ಇರುವ ಸಂಪತ್ತು:ನದಿಯಲ್ಲಿರುವ ಮರಳನ್ನು ದೋಚುವ ಪ್ರಯತ್ನ ಮಾಡಿದರೇ ಅಪರಾಧ, ಆದರೆ ನದಿಯಲ್ಲಿನ ನೀರು ಮನುಷ್ಯನ ಸಂಪತ್ತು, ಆದರೆ ಮನುಷ್ಯ ಮರಳನ್ನ ಮಾತ್ರ ಸಂಪತ್ತು ಅಂದುಕೊಂಡಿದ್ದಾನೆ ಬದಲಾಗಿ, ಮನುಷ್ಯ ಜೀವವನ್ನು ಉಳಿಸುವ ನೀರು ನನ್ನ ಸಂಪತ್ತು ಎನ್ನುವ ಮನೋಭಾವನೆ ಬೆಳೆಸಿಕೊಂಡಿಲ್ಲ ಎಂದರು. ಹೀಗೆ ಪರಿಸರದಲ್ಲಿರುವ ಗಿಡ, ಮರ, ಗಾಳಿ, ಬೆಳಕು ಎಲ್ಲವೂ ನಿಮ್ಮದೇ ಸಂಪತ್ತು. ಸತ್ತ ಮೇಲೆ ಬರಿಗೈಯಲ್ಲಿ ಹೋಗುತ್ತೇನೆ ಎಂದು ತಿಳಿದಿದ್ದರೂ ಕೋಟೆಕಟ್ಟಿ ಮೆರೆಯುವ ಪ್ರಯತ್ನ ಮಾಡುತ್ತಿದ್ದಾನೆ ಎಂದರು.ಪ್ರಾಣಿಗಳನ್ನಾದರೂ ನೋಡಿ ಕಲಿಯಬೇಕು:ದನದ ಕೊಟ್ಟಿಗೆಯಲ್ಲಿ ಸಾಯುವಂತಹ ಆಕಳು ಎಂದಿಗೂ ಕರುವಿಗೆ ಮೇವಿನ ಬಣವಿ ಒಟ್ಟಿ ಹೋಗುವುದಿಲ್ಲ, ಬದಲಾಗಿ ನನ್ನ ಕರುವನ್ನು ನಿಸರ್ಗದ ಉಪವಾಸ ಸಾಯಿಸುವುದಿಲ್ಲ ಮೇವು ಕೊರತೆಯಾಗದಂತೆ ನೋಡಿಕೊಳ್ಳಲಿದೆ ಎಂಬುದರ ಬಗ್ಗೆ ಮೇಲಿನ ನಂಬಿಕೆಯನ್ನಿಟ್ಟು ಬಿಟ್ಟು ಹೋಗುತ್ತದೆ. ಹೀಗಾಗಿಯೆ ಪ್ರಾಣಿಗಳು ನಿಸರ್ಗದ ಮಕ್ಕಳಾಗಿ ಸುಭೀಕ್ಷವಾಗಿವೆ. ಇದರ ತಾತ್ಪರ್ಯವಿಷ್ಟೇ ಮನುಷ್ಯಗಿರುವ ಗೇಣು ಹೊಟ್ಟಿಗೆ ಸುಂದರ ಜೀವನದ ಸಂತೃಪ್ತಿಯನ್ನು ಕಳಕೊಳ್ಳುತ್ತಿದ್ದಾನೆ. ಕೊಟ್ಟು ಹೋಗಬೇಕ, ಇಲ್ಲಾಂದ್ರ ಬಿಟ್ಟು ಹೋಗಬೇಕು ಹಣ, ನೆಣ, ಗುಣ ಗ್ಯಾರಂಟಿ ಉಳಿಯಲ್ಲ, ಮನುಷ್ಯ ಎಲ್ಲರಿಗೂ ಹಂಚಿ ತಿನ್ನುವ ಗುಣವನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಇದರಿಂದ ಬಂಧನದ ಬದುಕು ಸಾರ್ಥಕವಾಗಲಿದೆ ಎಂದರು.