ಸಾರಾಂಶ
ಜಿ ದೇವರಾಜ ನಾಯ್ಡು
ಕನ್ನಡಪ್ರಭ ವಾರ್ತೆ ಹನೂರುಜಿಲ್ಲೆಯ ವಿಸ್ತಾರವಾದ ದೊಡ್ಡ ತಾಲೂಕಾದ ಹನೂರು ಕೇಂದ್ರ ಸ್ಥಾನದ ತಹಸಿಲ್ ಕಚೇರಿ ಸಮೀಪದ ಅಂಗನವಾಡಿ ಕೇಂದ್ರವನ್ನು ಬೇರೆ ಕಡೆ ವರ್ಗಾವಣೆಗೊಳಿಸಿ ದಶಕ ನಂತರ ಭೂಮಾಪನ ಕಚೇರಿ ತೆರೆಯಲು ಕಂದಾಯ ಹಾಗೂ ಭೂಮಾಪನ ಇಲಾಖೆ ಕಚೇರಿಗೆ ಸಿದ್ಧತೆ ಕೈಗೊಂಡಿದೆ.ಹನೂರು 2013-14ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ ತಾಲೂಕು ಘೋಷಣೆಯಾಗಿ ಹೆಚ್ಚುವರಿ ತಹಸಿಲ್ ಕಚೇರಿ ಹಾಗೂ ಪಡಸಾಲೆ ವಿವಿಧ ಕಚೇರಿಗಳನ್ನು ತೆರೆಯಲಾಗಿದ್ದು, 2018ರಲ್ಲಿ ಅಧಿಕೃತವಾಗಿ ತಾಲೂಕು ಘೋಷಣೆಯಾಗಿ, ವಿವಿಧ ಕಚೇರಿಗಳು ತೆರೆದರೂ ಸಹ ಭೂಮಾಪನ ಕಚೇರಿ ತೆರೆಯಲಿಲ್ಲ. ರೈತರು ಹಾಗೂ ನಾಗರಿಕರು ಭೂ ದಾಖಲೆ ಪಡೆಯಲು ನೂರಾರು ಕಿ.ಮೀ. ಕ್ರಮಿಸಿ ಕೊಳ್ಳೇಗಾಲಕ್ಕೆ ಗೋಪಿನಾಥನ್ ಪಾಲರ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಹೋಗಿ ಬರಲು ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.
2023ರ ನ. 7 ರಂದು ಕನ್ನಡಪ್ರಭದಲ್ಲಿ "ದಶಕವಾದರೂ ಹನೂರಲ್ಲಿ ಭೂಮಾಪನ ಕಚೇರಿ ಇಲ್ಲ " ಎಂಬ ಶೀರ್ಷಿಕೆಯಾಡಿ ಶಾಸಕರು ಹಾಗೂ ಅಧಿಕಾರಿಗಳ ಹೇಳಿಕೆ ಪಡೆದು ಸುದ್ದಿ ಪ್ರಕಟಗೊಂಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಶಾಸಕರು ಹಾಗೂ ಇಲಾಖೆ ಅಧಿಕಾರಿಗಳು ಭೂಮಾಪನ ಕಚೇರಿ ತೆರೆಯಲು ತಹಸಿರ್ ಕಚೇರಿ ಮುಂಭಾಗವೇ ಇರುವ ಅಂಗನವಾಡಿ ಕೇಂದ್ರವನ್ನು ಬೇರೆ ಕಡೆ ವರ್ಗಾವಣೆಗೊಳಿಸಿ ಭೂಮಾಪನ ಕಚೇರಿ ತೆರೆಯಲು ಸಕಲ ಸಿದ್ಧತೆ ಕೈಗೊಂಡಿದೆ. ಹನೂರು ತಾಲೂಕಿಗೆ ಮೂರು ಹೋಬಳಿಗಳಾಗಿ ವಿಂಗಡಿಸಲಾಗಿದ್ದು, ಹನೂರು ರಾಮಪುರ ಲೋಕ್ಕನಹಳ್ಳಿ ಹೋಬಳಿಗಳಿಂದ 50ಕ್ಕೂ ಹೆಚ್ಚು ಕಂದಾಯ ಗ್ರಾಮಗಳು ಹಾಗೂ ಉಳಿದಂತೆ ನೂರಕ್ಕೂ ಹೆಚ್ಚು ಮಜಾರೆ ಗ್ರಾಮಗಳಾಗಿದೆ.ಒಂದೇ ಸೂರಿನಡಿ ಅಗತ್ಯ ದಾಖಲಾತಿಗಳನ್ನು ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ದಶಕಗಳ ನಂತರ ಭೂಮಾಪನ ಕಚೇರಿ ತೆರೆಯಲು ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ನೀಡಿದ ನಿರ್ದೇಶನದಂತೆ ಕಚೇರಿ ಮುಂಭಾಗವೇ ಭೂಮಾಪನ ಕಚೇರಿ ತೆರೆಯಲು ರೈತರಿಗೆ ಭೂತ ಕಲೆಗಳನ್ನು ಪಡೆಯಲು ಸಕಲ ಸಿದ್ಧತೆಯನ್ನು ಕೈಗೊಂಡಿದೆ.ಸಿಸಿಟಿವಿ ಕಣ್ಗಾವಲು: ಭೂಮಾಪನ ಕಚೇರಿಗೆ ಸಿಸಿಟಿವಿ ಅಳವಡಿಸಲಾಗಿದ್ದು, ಸುಣ್ಣಬಣ್ಣ ಬಳಿಯಲಾಗುತ್ತಿದ್ದು ಕಚೇರಿಗೆ ಬೇಕಾದ ಅಗತ್ಯ ಪೀಠೋಪಕರಣಗಳನ್ನು ಸಹ ಅಳವಡಿಸಲಾಗುತ್ತಿದ್ದು, ಶಾಸಕರು ಕಚೇರಿ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಿದ ನಂತರ ಕಚೇರಿಯನ್ನು ಪಟ್ಟಣದಲ್ಲಿ ತೆರೆಯಲು ಸಕಲ ಸಿದ್ಧತೆ ಕಂದಾಯ ಇಲಾಖೆ ಕೈಗೊಂಡಿದೆ.ದಶಕ ಕಳದರೂ ಪಟ್ಟಣದಲ್ಲಿ ಭೂಮಾಪನ ಕಚೇರಿ ಇಲ್ಲದೆ ಇರುವುದರಿಂದ ಈ ಭಾಗದ ಮೂರು ಹೋಬಳಿಗಳ ರೈತರು ಗೋಪಿನಾಥಂ ಗ್ರಾಮದಿಂದ ಹಾಗೂ ಒಡೆಯರ್ಪಾಳ್ಯ ಪಿ ಜಿ ಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ಕಿ.ಮೀ. ಪಟ್ಟಣದಲ್ಲಿ ಭೂಮಾಪನ ಕಚೇರಿ ತೆರದು ಅಧಿಕಾರಿ ಮತ್ತು ಹೆಚ್ಚಿನ ಸರ್ವರ್ ಗಳನ್ನು ನೇಮಕ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಒಂದೇ ಸೂರಿ ನಡಿ ದಾಖಲೆಗಳನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಗಮನಹರಿಸಬೇಕು.
ಹೊನ್ನೂರ್ ಪ್ರಕಾಶ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷಪ್ರತ್ಯೇಕ ತಾಲೂಕಿಗೆ ಬೇಕಾಗಿದೆ ಅಧಿಕಾರಿ, ಸಿಬ್ಬಂದಿ: ದೊಡ್ಡ ತಾಲೂಕಿಗೆ ಭೂಮಾಪನ ಕಚೇರಿ ತೆರೆಯುವುದರ ಜೊತೆಗೆ ಸಂಬಂಧಪಟ್ಟ ಭೂಮಾಪನ ಇಲಾಖೆಯ ಎಡಿಎಲ್ಆರ್ ಹಾಗೂ ಸೂಪರ್ ಡೆಂಟ್ ಹಾಗೂ ರೈತರ ಜಮೀನುಗಳನ್ನು ಅಳತೆ ಮಾಡಿ ತುರ್ತಾಗಿ ದಾಖಲಾತಿಗಳನ್ನು ನೀಡಲು ಸರ್ವೇಯರ್ ಗಳನ್ನು ಸಹ ಮೂರು ಹೋಬಳಿಗಳಿಗೆ ಹೆಚ್ಚಿನ ಸಿಬ್ಬಂದಿಗಳನ್ನು ಜಿಲ್ಲಾಡಳಿತ ನೇಮಕ ಮಾಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.