ಅಭಿವೃದ್ಧಿ ಶುಲ್ಕ ಪಾವತಿಗೆ ಮುಂದಾದ ನಿವೇಶನದಾರರು

| Published : Mar 06 2025, 12:30 AM IST

ಸಾರಾಂಶ

ರಾಮನಗರ: ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದು ಒಂದೂವರೆ ದಶಕದಿಂದ ಅತಂತ್ರರಾಗಿದ್ದ ನಿವೇಶನದಾರರನ್ನು ಕಾನೂನು ತೊಡಕುಗಳಿಂದ ಹೊರತಲು ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ.

ರಾಮನಗರ: ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದು ಒಂದೂವರೆ ದಶಕದಿಂದ ಅತಂತ್ರರಾಗಿದ್ದ ನಿವೇಶನದಾರರನ್ನು ಕಾನೂನು ತೊಡಕುಗಳಿಂದ ಹೊರತಲು ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಪ್ರಾಧಿಕಾರದಿಂದ ರಚನೆಗೊಂಡಿದ್ದ ರಾಮನಗರದ ಜೀಗೇನಹಳ್ಳಿ, ಹೆಲ್ತ್ ಸಿಟಿ ಮತ್ತು ಚನ್ನಪಟ್ಟಣದ ಕಣ್ವ ಬಡಾವಣೆಗಳಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ನಿವೇಶನದಾರರು ಕಂಗ್ಗಲಾಗಿದ್ದರು. ಸಚಿವ ಸಂಪುಟ ಅಭಿವೃದ್ಧಿ ಶುಲ್ಕ ನಿಗದಿ ಪಡಿಸಿ ಮೂರು ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಮುಂದಾಗಿರುವುದರಿಂದ ನಿವೇಶನ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರತಿ ಚದುರ ಅಡಿಗೆ 200 ರುಪಾಯಿನಂತೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ಬಡಾವಣೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಹಾಗೂ ಮಾಲೀಕರಿಗೆ ಶುದ್ಧಕ್ರಯ ಪತ್ರ ಹಾಗೂ ಇ-ಖಾತೆಗಳನ್ನು ವಿತರಿಸಲು ಸರ್ಕಾರ ಸೂಚಿಸಿದೆ. ಇದಕ್ಕೆ 1800ಕ್ಕೂ ಅಧಿಕ ನಿವೇಶನ ಮಾಲೀಕರ ಪೈಕಿ ಬಹುತೇಕ ಮಂದಿ ಶಾಸಕ ಇಕ್ಬಾಲ್ ಹುಸೇನ್ ಅವರು ಕರೆದಿದ್ದ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದರು.

ಅದರಂತೆ ಪ್ರಾಧಿಕಾರದ ನಿವೇಶನ ಮಾಲೀಕರು ಅಭಿವೃದ್ಧಿ ಶುಲ್ಕ ಪಾವತಿಸಲು ಮುಂದಾಗಿದ್ದಾರೆ. ಈವರೆಗೆ 25ಕ್ಕೂ ಅಧಿಕ ಮಂದಿ ಡಿಡಿ ಮೂಲಕ ಅಭಿವೃದ್ಧಿ ಶುಲ್ಕ ಪಾವತಿಸಿದ್ದಾರೆ. ಇವರಿಗೆ 10 ದಿನದೊಳಗೆ ಖಾತೆಗಳನ್ನು ನೀಡಲು ಅಗತ್ಯ ಪ್ರಕ್ರಿಯೆಗಳನ್ನು ಪ್ರಾಧಿಕಾರ ಕೈಗೊಂಡಿದೆ.

ಪ್ರತಿನಿತ್ಯ ನಿವೇಶನ ಮಾಲೀಕರು ಪ್ರಾಧಿಕಾರದ ಕಚೇರಿಗೆ ಬಂದು ಪಾವತಿ ಮೊತ್ತ, ಪಾವತಿ ವಿಧಾನ ಹಾಗೂ ಒದಗಿಸಬೇಕಾದ ದಾಖಲೆಗಳ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಹತ್ತಾರು ನಿವೇಶನ ಮಾಲೀಕರು ಪ್ರಾಧಿಕಾರದ ಕಚೇರಿಗೆ ಬಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಅಭಿವೃದ್ಧಿ ಶುಲ್ಕ ಪಾವತಿಸಿದವರಿಗೆ ಮುಂದಿನ ವಾರ ಖಾತೆಗಳನ್ನು ವಿತರಿಸಲಾಗುತ್ತಿದ್ದು, ಬಡಾವಣೆಗಳ ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ.

ಅಲ್ಲದೆ ಲೇಔಟ್ ಅಭಿವೃದ್ಧಿಗೆ ಅಂದಾಜು ಪಟ್ಡಿ ಸಿದ್ಧಪಡಿಸಲಾಗಿದ್ದು, ಡಿಪಿಆರ್ ಸಿದ್ಧತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದಷ್ಡು ಬೇಗ ಟೆಂಡರ್ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತದೆ. ಈಗಾಗಗಲೇ ಆಯಾಯ ಇಓಗಳ ಜೊತೆ ಸಭೆ ನಡೆಸಲಾಗಿದ್ದು, ಯಾವುದೇ ಅಡೆತಡೆ ಇಲ್ಲದೆ ಖಾತೆಗಳು ಲಭ್ಯವಾಗಲಿದೆ.

ಕೋಟ್ .................

17 ವರ್ಷಗಳ‌ ಹಿಂದೆ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಖರೀದಿಸಿ ಅತಂತ್ರರಾಗಿದ್ದೇವು. ನಮಗೆ ತಾತ್ಕಾಲಿಕ ನೋಂದಣಿ ಪತ್ರಗಳು ಮಾತ್ರ ದೊರೆತಿತ್ತು. ನಿವೇಶನಗಳನ್ನು ಮಾರಲೂ ಆಗದೇ, ಅಲ್ಲಿ ಮನೆ ಕಟ್ಡಿಕೊಂಡು ವಾಸ ಮಾಡಲೂ ಆಗದೆ ಅತಂತ್ರರಾಗಿದ್ದೇವು. ಇದೀಗ ಸರ್ಕಾರ ನಮ್ಮ ಕಾನೂನು ತೊಡಕುಗಳನ್ನು ಬಗೆಹರಿಸಿದೆ. ಅಭಿವೃದ್ಶಿ ಶುಲ್ಕ ಪಾವತಿಸಿ, ಬಡಾವಣೆ ಅಭಿವೃದ್ಧಿ ನಿರೀಕ್ಷೆಯಲ್ಲಿದ್ದೇವೆ.

- ಚಂದ್ರು, ಪ್ರಾಧಿಕಾರ ಬಡಾವಣೆ ನಿವೇಶನದಾರರು

ಕೋಟ್‌............

ಅತಂತ್ರ ಸ್ಥಿತಿಯಲ್ಲಿದ್ದ ಪ್ರಾಧಿಕಾರದ ನಿವೇಶನಗಳ ಕಾನೂನು ತೊಡಕುಗಳನ್ನು ಸಚಿವ ಸಂಪುಟದ ನಿರ್ಣಯದ ಮೂಲಕ ನಮ್ಮ ಸರಕಾರ ಬಗೆಹರಿಸಿದೆ. ಮಾಜಿ ಸಂಸದರಾದ ಡಿ.ಕೆ.ಸುರೇಶ್, ಶಾಸಕರಾದ ಇಕ್ಬಾಲ್‌ ಹುಸೇನ್, ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಶೀಘ್ರದಲ್ಲೆ ಅಭಿವೃದ್ಧಿ ಶುಲ್ಕ ಪಾವತಿಸಿದ ನಿವೇಶನ ಮಾಲೀಕರಿಗೆ ಖಾತೆ ಹಸ್ತಾಂತರಿಸಲಾಗುವುದು.

- ಎ.ಬಿ.ಚೇತನ್ ಕುಮಾರ್, ಅಧ್ಯಕ್ಷರು,ನಗರಾಭಿವೃದ್ಧಿ ಪ್ರಾಧಿಕಾರ, ರಾಮನಗರ

ಕೋಟ್‌..........

ಅಭಿವೃದ್ಧಿ ಶುಲ್ಕ ಪಾವತಿಸಿ ಅಧಿಕೃತ ಖಾತಾ ದಾಖಲೆಗಳನ್ನು ಪಡೆದುಕೊಳ್ಳಲು ನಿವೇಶನ ಮಾಲೀಕರು ಉತ್ಸುಕರಾಗಿದ್ದಾರೆ. ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿವೇಶನದಾರರು ಅಭಿವೃದ್ಧಿ ಶುಲ್ಕ ಪಾವತಿಸಲು ಸಮ್ಮತಿ ಸೂಚಿಸಿದ್ದರು. ಅದರಂತೆ ನಿವೇಶನದಾರರು ಡಿಡಿ ಮೂಲಕ ಶುಲ್ಕ ಪಾವತಿಸುತ್ತಿದ್ದಾರೆ.

-ಶಿವನಂಕರೀ ಗೌಡ, ಆಯುಕ್ತರು,

5ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಚೇತನ್ ಕುಮಾರ್ ರವರು ನಿವೇಶನದಾರರಿಂದ ಅಭಿವೃದ್ಧಿ ಶುಲ್ಕದ ಡಿಡಿ ಸ್ವೀಕರಿಸುತ್ತಿರುವುದು.