ಸಾರಾಂಶ
ನರಸಿಂಹರಾಜಪುರ, ತಾಲೂಕಿನ ಕುದುರೆಗುಂಡಿ-ಕಾನೂರು - ಚಿಕ್ಕಅಗ್ರಹಾರ ರಸ್ತೆಯಲ್ಲಿನ ಕಟ್ಟಿನಮನೆಯಲ್ಲಿ ಬುಧವಾರ ರಾತ್ರಿ ಮುಖ್ಯ ರಸ್ತೆ ಪಕ್ಕದ ಧರೆ ಕುಸಿದಿದ್ದು ಇಡೀ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ.
- ಪಟ್ಟಣದ ಪೌರ ಕಾರ್ಮಿಕರ ಕಾಲೋನಿಯಲ್ಲಿ ಗೋಡೆ ಉರುಳಿ ಕುರಿ ಸಾವು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಕುದುರೆಗುಂಡಿ-ಕಾನೂರು - ಚಿಕ್ಕಅಗ್ರಹಾರ ರಸ್ತೆಯಲ್ಲಿನ ಕಟ್ಟಿನಮನೆಯಲ್ಲಿ ಬುಧವಾರ ರಾತ್ರಿ ಮುಖ್ಯ ರಸ್ತೆ ಪಕ್ಕದ ಧರೆ ಕುಸಿದಿದ್ದು ಇಡೀ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ.
ಕಳೆದ ವರ್ಷವೂ ಇದೇ ರಸ್ತೆ ಪಕ್ಕದಲ್ಲಿ ಸ್ವಲ್ಪ ಧರೆ ಕುಸಿತ ಕಂಡಿತ್ತು. ಆದರೆ, ರಸ್ತೆಗೆ ಆಪಾಯವಾಗಿರಲಿಲ್ಲ. ಆದರೆ, ಈಗ ಕುಸಿದ ಧರೆಯಿಂದ ಮುಖ್ಯ ರಸ್ತೆಗೆ ಕೇವಲ 1 ಅಡಿ ಇದ್ದು ಇನ್ನೂ ಕುಸಿದರೆ ರಸ್ತೆಯೇ ಹೋಗುವ ಸಾದ್ಯತೆ ಇದೆ. ಇದರಿಂದ ಕುದುರೆಗುಂಡಿ, ಕಾನೂರು ಕೆರೆಮನೆ, ಜೋಗಿಮಕ್ಕಿ ಗ್ರಾಮದವರು ಚಿಕ್ಕಅಗ್ರಹಾರ, ಬಾಳೆಹೊನ್ನೂರಿಗೆ ಹೋಗಲು ಸುತ್ತುವರಿದು ಹೋಗಬೇಕಾಗುತ್ತದೆ. ಕಟ್ಟಿನಮನೆ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗೆ ಗುಬ್ಬೂರು, ಹಕ್ಕಲು ಮನೆಯ ಶಾಲೆ ಮಕ್ಕಳು ಬರಲು ಸಹ ತೊಂದರೆ ಎದುರಾಗಲಿದೆ. ಈ ರಸ್ತೆಯಲ್ಲಿ ಪ್ರತಿ ನಿತ್ಯ ಬಸ್ಸು ಹಾಗೂ ಇತರ ವಾಹನಗಳು ಓಡಾಡುತ್ತಿದೆ. ಸ್ವಲ್ಫ ಎಚ್ಚರ ತಪ್ಪಿದರೂ ರಸ್ತೆ ಕುಸಿತದ ಹೊಂಡಕ್ಕೆ ಬೀಳುವ ಅಪಾಯ ಎದುರಾಗಿದೆ.ಪಟ್ಟಣದ ಪೌರ ಕಾರ್ಮಿಕರ ಕಾಲೋನಿಯ ಕೃಷ್ಣ ಅವರ ಮನೆ ಗೋಡೆ ಕುರಿ ಕಟ್ಟುವ ಕೊಟ್ಟಿಗೆ ಮೇಲೆ ಬಿದ್ದು 1 ಕುರಿ ಸತ್ತು ಹೋಗಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಕಂದಾಯ ನಿರೀಕ್ಷಕ ವಿಜಯಕುಮಾರ್, ಗ್ರಾಮ ಆಡಳಿತಾಧಿಕಾರಿ ಸಾನಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ 5 ನೇ ವಾರ್ಡನ ರಹಮ ತುಲ್ಲ ಎಂಬುವರ ಬಚ್ಚಲು ಮನೆ ಗೋಡೆ ಕುಸಿದಿದೆ. ಕಸಬಾ ಹೋಬಳಿ ಬೈರಾಪುರ ಗ್ರಾಮದಲ್ಲಿ ಮಳೆಯಿಂದ ರಸ್ತೆ ಹಾಗೂ ಮೋರಿ ಹಾಳಾಗಿದೆ. ಇದೇ ಗ್ರಾಮದ ಕೊಲ್ಲಪ್ಪ ಅವರ ಜಮೀನಿಗೆ ಹಳ್ಳದ ನೀರು ನುಗ್ಗಿ ಹಾನಿಯಾಗಿದೆ.