ಶಿರಾಡಿಯಲ್ಲಿ ಮತ್ತೆ ಭಾರೀ ಪ್ರಮಾಣದ ಭೂ ಕುಸಿತ

| Published : Aug 01 2024, 12:19 AM IST

ಶಿರಾಡಿಯಲ್ಲಿ ಮತ್ತೆ ಭಾರೀ ಪ್ರಮಾಣದ ಭೂ ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ದೊಡ್ಡತಪ್ಲೆ ಬಳಿ ಮತ್ತೆ ಭೂ ಕುಸಿತ ಉಂಟಾಗಿದ್ದು, ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರವನ್ನು ಬಂದ್‌ ಮಾಡಲಾಗಿದೆ. ಭೂ ಕುಸಿತದ ಸಮಯದಲ್ಲಿ ಅದೇ ದಾರಿನಲ್ಲಿ ತೆರಳುತ್ತಿದ್ದ ನಾಲ್ಕು ಕಂಟೇನರ್‌ ಲಾರಿಗಳು ಮಣ್ಣಿನಲ್ಲಿ ಸಿಲುಕಿದ್ದು ಒಂದು ಕಂಟೇನರ್ ಲಾರಿ ಪ್ರಪಾತಕ್ಕೆ ಜಾರುವ ಹಂತದಲ್ಲಿದೆ. ಲಾರಿ ಚಾಲಕರು ಹಾಗೂ ನಿರ್ವಾಹಕರನ್ನು ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಹೆದ್ದಾರಿ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಭೂಕುಸಿತ ಸಂಭವಿಸಿದ ರಾಷ್ಟ್ರೀಯ ಹೆದ್ದಾರಿ 75 ರ ದೊಡ್ಡತಪ್ಲೆ ಗ್ರಾಮಕ್ಕೆ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿ ವಾಪಸ್ಸಾದ ಕೆಲವೇ ಗಂಟೆಗಳಲ್ಲಿ ಮತ್ತೆ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು ನಾಲ್ಕುವಾಹನಗಳು ಮಣ್ಣಿನಲ್ಲಿ ಸಿಲುಕಿವೆ.

ತಾಲೂಕಿನಲ್ಲಿ ಭೂಕುಸಿತ ಸಂಭವಿಸಿರುವ ಕೊಲ್ಲಹಳ್ಳಿಗೆ ಸಚಿವರು ಭೇಟಿ ನೀಡಿದ ನಂತರ ಡೊಡ್ಡತಪ್ಲೆ ಗ್ರಾಮಕ್ಕೆ ಭೇಟಿ ನೀಡಿ ಸುಮಾರು ಅರ್ಧ ಗಂಟೆಗೂ ಹೆಚ್ವಿನ‌ ಕಾಲ ಪರಿಶೀಲನೆ ನಡೆಸಿದ ಸಚಿವರು ಸಂಜೆ ನಾಲ್ಕು ಗಂಟೆಗೆ ಸ್ಥಳದಿಂದ ತೆರಳಿದ್ದರು. ಅದರೆ ಸಂಜೆ 6.30ಕ್ಕೆ ಭಾರಿ ಪ್ರಮಾಣದಲ್ಲಿ ಭೂಮಿ ಕುಸಿದಿದ್ದು, ಭೂ ಕುಸಿತದ ಸಮಯದಲ್ಲಿ ಅದೇ ದಾರಿನಲ್ಲಿ ತೆರಳುತ್ತಿದ್ದ ನಾಲ್ಕು ಕಂಟೇನರ್‌ ಲಾರಿಗಳು ಮಣ್ಣಿನಲ್ಲಿ ಸಿಲುಕಿದ್ದು ಒಂದು ಕಂಟೇನರ್ ಲಾರಿ ಪ್ರಪಾತಕ್ಕೆ ಜಾರುವ ಹಂತದಲ್ಲಿದೆ. ಲಾರಿ ಚಾಲಕರು ಹಾಗೂ ನಿರ್ವಾಹಕರನ್ನು ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಮತ್ತೆ ಬಂದ್‌ ಆಗಿದೆ. ಹೆದ್ದಾರಿ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.