ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕನ್ನಡದಲ್ಲಿ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ. ಅದರಲ್ಲಿ ಇತಿಹಾಸ ಕೂಡ ಇದೆ ಎಂದು ಕಲಬುರಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಪ್ರಮಿಳಾ ಜಾನಪ್ಪಗೌಡ ಹೇಳಿದರು.ಕನ್ನಡ ಭಾಷೆಯನ್ನು ಒತ್ತಾಯಪೂರ್ವಕವಾಗಿ ಕಲಿಸದೆ ಪ್ರೀತಿಯಿಂದ ಕಲಿಸಬೇಕು. ಕನ್ನಡ ಬಳಸಿದಾಗ ಮಾತ್ರ ಭಾಷೆ ಬೆಳೆಯುತ್ತದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದ ಅವರು , ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀತಿಯ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು.ಇಂದು ಕೇವಲ ಕನ್ನಡ ಭಾಷೆ ಮೇಲೆ ಆಗುವ ದಾಳಿಯಲ್ಲ. ಬದಲಿಗೆ ನಮ್ಮ ಭವ್ಯ ಪರಂಪರೆ, ಜೀವನ ಶೈಲಿ, ಸಂಸ್ಕೃತಿ, ಆಹಾರ ಪದ್ಧತಿಗಳ ಮೇಲೆ ಆದ ದಾಳಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ. ನಾಗೇಂದ್ರ ಮಸೂತಿ ಮಾತನಾಡಿ, ಮನಸ್ಸು ದೊಡ್ಡದಾಗಬೇಕು. ವಾತ್ಸಲ್ಯ ತುಂಬಿದ ಸಾಹಿತ್ಯ ಮಹಿಳಾ ಸಾಹಿತ್ಯ. ಕನ್ನಡಕ್ಕಾಗಿ ಕೈ ಎತ್ತದೆ ಈಗ ಬಾಯಿ ತೆಗೆಯಬೇಕು ಎಂದರು.ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದಶರಣಬಸವೇಶ್ವರ ಸಂಸ್ಥಾನದ ಶ್ರೀ ಡಾ. ಲಿಂಗರಾಜ ಅಪ್ಪಾ, ನಮ್ಮ ಕನ್ನಡ ಭಾಷೆ ತವರು ಮನೆ ಇದ್ದಂತೆ. ಸ್ನೇಹ ಪ್ರೀತಿಯಿಂದ ಮಾತೃಭಾಷೆ ಬೆಳೆಸಬೇಕಾಗಿದೆ ಎಂದರು.
ಭ್ರಮದ ಕ್ಕೆ ಗುರುವಾರ ನಗರದ ಕನ್ನಡ ಭವನದಲ್ಲಿ ಅದ್ಧೂರಿಯಾಗಿ ಚಾಲನೆ ದೊರಕಿತು.ಆರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಅವರಿಂದ ಧ್ವಜಾರೋಹಣ ನೆರವೇರಿತು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿನೋದ ಪಾಟೀಲ ಸರಡಗಿ, ಕಾರ್ಯಾಧ್ಯಕ್ಷ ರಾಘವೇಂದ್ರ ಕಲ್ಯಾಣಕರ್, ಸಮ್ಮೇಳನಾಧ್ಯಕ್ಷೆ ಪ್ರಮೀಳಾ ಜಾನಪ್ಪಗೌಡ ಉಪಸ್ಥಿತರಿದ್ದರು. ಭಾರತ ಸೇವಾ ದಳದ ಚನ್ನಬಸಪ್ಪ ಸಜ್ಜನ್ ಹಾಗೂ ಶಿವಲಿಂಗಪ್ಪ ಗೌಳಿ ಕಾರ್ಯಕ್ರಮ ನಡೆಸಿಕೊಟ್ಟರು.
ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ತಾಲೂಕಾ ಘಟಕದ ವಿಶಾಲಾಕ್ಷಿ ಮಾಯಣ್ಣವರ್, ವಿಶ್ವನಾಥ ಯನಗುಂಟಿ, ಕುಪೇಂದ್ರ ಬರಗಾಲಿ, ಶರಣು ಹಾಗರಗುಂಡಗಿ, ರೇವಯ್ಯಾ ಸ್ವಾಮಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಪ್ರಭವ ಪಟ್ಟಣಕರ್, ಭಾಗ್ಯಶ್ರೀ ಮರಗೋಳ, ಕವಿತಾ ಕವಳೆ, ಸುನೀತಾ ಮಾಳಗಿ, ವಿಜಯಕುಮಾರ ಹಾಬನೂರ, ರೇವಣಸಿದ್ದಪ್ಪ ಗುಂಡಗುರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸಮ್ಮೇಳನದ ನಿರ್ಣಯಗಳು:
ಈ ಭಾಗದ ತೊಗರಿ ಬೆಳೆಗೆ ಬೆಂಬಲ ಬೆಲೆ ಕೊಡಬೇಕು.ಜವಳಿ ಉದ್ಯಮದಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ ನೀಡಬೇಕು.
ಖಾಸಗಿ ಕಂಪನಿಯಲ್ಲಿ ಕನ್ನಡ ಮಾಧ್ಯಮದ ಉದ್ಯೋಗಾಕಂಕ್ಷಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು.ಕಲ್ಯಾಣ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಲೇಖಕರ ಪುಸ್ತಕಗಳನ್ನು ಖರೀದಿಸಬೇಕು.
ಕಲಬುರಗಿ ನಗರದ ಪ್ರಮುಖ ರಸ್ತೆಗಳಿಗೆ ಜಿಲ್ಲೆಯ ಸಾಹಿತಿಗಳ ಹೆಸರಿಡಲು ಆಗ್ರಹ.ಸಮಾರೋಪ ಸಮಾರಂಭ:
ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಸಮಾರೋಪ ನುಡಿಗಳನ್ನಾಡಿ, ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಇಂದಿನ ಕಾಲದಲ್ಲಿ ಓದುವ ಮತ್ತು ಬರೆಯುವ ಸಂಸ್ಕೃತಿ ಬೆಳೆಸಬೇಕಾಗಿದೆ. ಇಂದು ಓದುವ ಅವಶ್ಯಕತೆ ಇದೆ. ಆದರೆ ಕಾಲ ಕೆಟ್ಟಿದೆ ಎಂದು ದೂರುವ ಬದಲು ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮನೆ ಮನಗಳಲ್ಲಿ ದೇಶೀಯ ಸಂಸ್ಕøತಿ ಬೆಳೆಸಬೇಕಾಗಿದೆ. ಹಾಗೂ ಸಮಾಜದಲ್ಲಿ ಬದುಕುವ ನಾವು ಜವಾಬ್ದಾರಿಯಿಂದ ಮುನ್ನಡೆಯಬೇಕಾಗಿದೆ. ದಾರಿಯಲ್ಲಿನ ಮುಳ್ಳು ತೆಗೆದು ಹಾಕುವ ಮೂಲಕ ನಾವು ಇತರ ಜೀವನ ಮಾರ್ಗ ಹಸನಾಗಿಸೋಣ ಎಂದರು.ಬಿ.ಎಸ್. ದೇಸಾಯಿ ಮಾತನಾಡಿ, ಗೃಹಿಣಿಯಾಗಿ ಸಾಹಿತ್ಯ ರಚನೆ ಮಾಡಿದ ಪ್ರಮೀಳಾ ಜಾನಪ್ಪಗೌಡ ನಾಡಿನ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಿಪಡಿಸಿದರು.
ಡಿಡಿಪಿಐ ಸೂರ್ಯಕಾಂತ ಮದಾನಿ, ಸೇವಂತಾ ಚವ್ಹಾಣ, ಭಾನುಕುಮಾರ ಗಿರೇಗೋಳ, ಬಿ.ಎಸ್. ಮಾಲಿಪಾಟೀಲ, ಪ್ರಭುಲಿಂಗ ಮೂಲಗೆ ಮಾತನಾಡಿದರು.ತಾಲೂಕು ಸಮ್ಮೇಳನಗಳ ಹಿಂದಿನ ಸರ್ವಾಧ್ಯಕ್ಷರುಗಳಾದ ಡಾ. ಸ್ವಾಮಿರಾವ ಕುಲಕರ್ಣಿ, ಡಾ. ಶ್ರೀನಿವಾಸ ಸಿರನೂರಕರ್, ಪ.ಮಾನು ಸಗರ, ಡಾ. ನಾಗೇಂದ್ರ ಮಸೂತಿ ಅವರನ್ನು ಸತ್ಕರಿಸಲಾಯಿತು.
ಮಕ್ಕಳ ಭರತನಾಟ ಸೇರಿ ಅನೇಕ ವೈವಿದ್ಯಮಯ ಕಾರ್ಯಕ್ರಮಗಳು ಜರುಗಿದವು. ಸುರೇಶ ದೇಶಪಾಂಡೆ, ನಾಗಪ್ಪ ಸಜ್ಜನ್, ವೀರೇಂದ್ರಕುಮಾರ ಕೊಲ್ಲೂರ, ಪ್ರಭುಲಿಂಗ ಮೂಲಗೆ, ಸುರೇಶ ಲೇಂಗಟಿ, ಶಾಮಸುಂದರ ಕುಲಕರ್ಣಿ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಎಂ ಎನ್ ಸುಗಂಧಿ, ಪ್ರೊ. ಎಸ್ ಎಲ್ ಪಾಟೀಲ, ಕೆ.ಪಿ. ಗಿರಿಧರ, ನಾರಾಯಣ ಕುಲಕರ್ಣಿ, ಶಿವಾನಂದ ಸಾಲಿಮಠ, ಶಿವಲಿಗ ಇದ್ದರು.