ಸಾರಾಂಶ
ಮೆಟ್ರಿಕ್ ಮೇಳ ಹಾಗೂ ಭಾಷಾ ಮೇಳದಲ್ಲಿ ವಿವಿಧ ಸ್ಪರ್ಧೆಗಳು ಜರುಗುವುದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಮೂಡುತ್ತದೆ
ನವಲಗುಂದ: ಭಾಷೆ ಮತ್ತು ಗಣಿತ ಮೇಳಗಳಿಂದ ಮಕ್ಕಳಲ್ಲಿ ಕೌಶಲ್ಯ ಹಾಗೂ ಮೂಲಭೂತ ಕಲ್ಪನೆ ವೃದ್ಧಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಡಯಟ್ ಹಿರಿಯ ಉಪನ್ಯಾಸಕ ಎ.ಎ.ಖಾಜಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 01ರಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಭಾಷಾ ಮೇಳ ಮತ್ತು ಮೆಟ್ರಿಕ್ ಮೇಳ ಉದ್ಘಾಟಿಸಿ ಮಾತನಾಡಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿ, ಇಂತಹ ಮೇಳಗಳು ಮಕ್ಕಳ ಮನೋವಿಕಾಸಕ್ಕೆ ಸಹಕಾರಿ. ಮೆಟ್ರಿಕ್ ಮೇಳ ಹಾಗೂ ಭಾಷಾ ಮೇಳದಲ್ಲಿ ವಿವಿಧ ಸ್ಪರ್ಧೆಗಳು ಜರುಗುವುದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಮೂಡುತ್ತದೆ. ಕಲಿಕಾ ಪೂರಕವಾದ ಇಂತಹ ಮೇಳಗಳು ಮಕ್ಕಳಲ್ಲಿ ಪರಿಣಾಮಕಾರಿಯಾಗಲಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ. ಮಲ್ಲಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಯಟ್ ಉಪನ್ಯಾಸಕ ರಮೇಶ ಯರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿ.ವಿ. ಹೊಳೆಯನ್ನವರ, ಎನ್.ಎಸ್. ತಾಳಿಕೋಟಿಮಠ, ಆರ್.ಎನ್. ಹಾಲಿಗೇರಿ, ವೈ.ಆರ್.ನರಸಪ್ಪನವರ, ಜಯಶ್ರೀ ಪಾಟೀಲ, ಬಸವರಾಜ ಯಲಿಗಾರ, ಮಂಜುನಾಥ ನಾಯಕ ಸೇರಿದಂತೆ ಹಲವರಿದ್ದರು. ಮಹಾಂತೇಶ ಬೆಳಹಾರ ನಿರೂಪಿಸಿದರು. ಶ್ರೀನಿವಾಸ ಅಮತೆನ್ನವರ ಸ್ವಾಗತಿಸಿದರು. ಮಹೇಶ ಮಂತ್ರಿ ವಂದಿಸಿದರು.