ಸಭೆಯಲ್ಲಿ ಲಾರಾ ಪ್ರಸನ್ನ ಅವರನ್ನು ಸರ್ವಾನುಮತದಿಂದ ಮುಂದಿನ ಆದೇಶದವರೆಗೆ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರಿಗೆ ಎಲ್ಲಾ ರೀತಿಯ ಸ್ವತಂತ್ರವನ್ನು ನೀಡಿ ತಾಲೂಕು ಕಮಿಟಿಯನ್ನು ರಚನೆ ಮಾಡಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕು ಕರ್ನಾಟಕ ಜನಪದ ಪರಿಷತ್ ನೂತನ ಅಧ್ಯಕ್ಷರನ್ನಾಗಿ ಲಾರಾ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ತಾಲೂಕು ಅಧ್ಯಕ್ಷರಾಗಿ ಸುಮಾರು ನಾಲ್ಕು ಹೊರೆ ವರ್ಷ ಸೇವೆ ಸಲ್ಲಿಸಿದ ಮಂಜು ಅವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.

ಲಾರಾ ಪ್ರಸನ್ನ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಮುಂದಿನ ಆದೇಶದವರೆಗೆ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರಿಗೆ ಎಲ್ಲಾ ರೀತಿಯ ಸ್ವತಂತ್ರವನ್ನು ನೀಡಿ ತಾಲೂಕು ಕಮಿಟಿಯನ್ನು ರಚನೆ ಮಾಡಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಮುಂದಿನ‌ ದಿನಗಳಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಜಿಲ್ಲಾ ಮತ್ತು ರಾಜ್ಯದ ಗಮನ ಸೆಳೆಯಲಿ ಎಂದರು.

ನೂತನ ಅಧ್ಯಕ್ಷ ಲಾರಾ ಪ್ರಸನ್ನ ಮಾತನಾಡಿ, ಸಂಘದ ಎಲ್ಲಾ ಪದಾಧಿಕಾರಿಗಳು ವಿಶ್ವಾಸಕ್ಕೆ ಪಡೆದು ಹಲವು ಜನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಕಜಾಪ ಮಾಜಿ ಅಧ್ಯಕ್ಷ ಮಂಜು, ಕರವೇ ತಾಲೂಕು ಅಧ್ಯಕ್ಷ ಅಶೋಕ್, ಕಕಜವೇ ಜಿಲ್ಲಾಧ್ಯಕ್ಷ ವಿ.ಸಿ.ಉಮಾ ಶಂಕರ್, ಮುಖಂಡರಾದ ಸ್ವಾಮಿ ಹುಣಸೆಮರದೊಡ್ಡಿ, ಕುಮಾರ್, ವಸಂತ ಕರಡಗೆರೆ, ನಿವೃತ್ತ ಶಿಕ್ಷಕ ಶಂಕರಯ್ಯ, ಚನ್ನಸಂದ್ರ ಮಹದೇವು, ತೈಲೂರು ಸಿದ್ದರಾಜು , ಅಂಬರಳ್ಳಿ ಸ್ವಾಮಿ, ಭೀಮನಕೆರೆ ಜಯಣ್ಣ, ಆಸಿಫ್ ಪಾಷ ಸೇರಿದಂತೆ ಇತರರು ಹಾಜರಿದ್ದರು.

ಜಿಲ್ಲಾಧ್ಯಕ್ಷರಾಗಿ ಪಿ.ಮಹೇಶ್ ಆಯ್ಕೆ

ಮಂಡ್ಯ: ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (೬ ರಿಂದ ೮ನೇ ತರಗತಿ) ೨೦೨೬-೨೦೩೧ನೇ ಸಾಲಿನ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಾಗಮಂಗಲ ತಾಲೂಕು ಬ್ರಹ್ಮದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪಿ.ಮಹೇಶ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಎಚ್.ಎಚ್.ಮಲ್ಲಿಕೇಶ್, ಖಜಾಂಚಿಯಾಗಿ ಎನ್.ಸುಪ್ರೀತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿ.ಮಂಜುಳಾ ತಿಳಿಸಿದ್ದಾರೆ.ನೂತನ ಪದಾಧಿಕಾರಿಗಳನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ನಾಗೇಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಚಿಕ್ಕೇಗೌಡ ಹಾಗೂ ಬಿ.ಎಂ.ಪ್ರಕಾಶ್ ಅಭಿನಂದಿಸಿದರು.