ಹಾನಗಲ್ಲ ತಾಲೂಕಿನ ಅಭಿವೃದ್ಧಿಗಾಗಿ ಆಗಸ್ಟ್‌ ತಿಂಗಳ ನಂತರ ದೊಡ್ಡ ಮೊತ್ತದ ಅನುದಾನ ಬಿಡುಗಡೆಯಾಗಲಿದ್ದು, ತಾಲೂಕಿನ ಹಿತಕ್ಕೆ ಕಂಕಣಬದ್ಧವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಮಾನೆ ತಿಳಿಸಿದರು.

ಹಾನಗಲ್ಲ: ತಾಲೂಕಿನ ಅಭಿವೃದ್ಧಿಗಾಗಿ ಆಗಸ್ಟ್‌ ತಿಂಗಳ ನಂತರ ದೊಡ್ಡ ಮೊತ್ತದ ಅನುದಾನ ಬಿಡುಗಡೆಯಾಗಲಿದ್ದು, ತಾಲೂಕಿನ ಹಿತಕ್ಕೆ ಕಂಕಣಬದ್ಧವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಮಾನೆ ತಿಳಿಸಿದರು.

ತಾಲೂಕಿನ ಯಳವಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ೮೦ ಲಕ್ಷ ರು. ವೆಚ್ಚದಲ್ಲಿ ವಿವಿಧ ಸಿಸಿ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಅವರು, ತಾಲೂಕು ಕೇಂದ್ರದಲ್ಲಿ ಕುಳಿತು ಗ್ರಾಮೀಣ ಪ್ರದೇಶಗಳಿಗೆ ಅನುದಾನ ಬಿಡುಗಡೆಮಾಡುವ ಪದ್ಧತಿಯ ಬದಲಿಗೆ ಆಯಾ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಒತ್ತಾಸೆಯಂತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ಗ್ರಾಮಗಳಿಗೂ ಅನುದಾನ ಒದಗಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ತಾಲೂಕಿಗೆ ಕಳೆದ ೩ ವರ್ಷಗಳ ಅವಧಿಯಲ್ಲಿ ೭೫೦ ಕೋಟಿ ರು. ಅಭಿವೃದ್ಧಿ ಕಾಮಗಾರಿಗಳಿಗೆ, ಪಂಚ ಗ್ಯಾರಂಟಿ ಯೋಜನೆಗಳಡಿ ಜನಕಲ್ಯಾಣಕ್ಕೆ೭೫೦ಕೋಟಿ ರು. ಲಭಿಸಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಯಳವಟ್ಟಿ ₹ ೩೩ ಲಕ್ಷ, ನಿಡಸಂಗಿ ಬಸಾಪುರ ₹ ೧೫ ಲಕ್ಷ, ಬದಾಮಗಟ್ಟಿ ₹ ೫ ಲಕ್ಷ, ಯಳ್ಳೂರ ಮತ್ತು ಯಳ್ಳೂರ ಪ್ಲಾಟ್‌ನಲ್ಲಿ ₹ ೧೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವೀರಪ್ಪ ಬೈಲವಾಳ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸನಗೌಡ ಪಾಟೀಲ, ಪ್ರಮುಖರಾದ ಗುಡದಣ್ಣ ನೆವರದ, ವರ್ಧಮಾನ್‌ ಚೌಟಿ, ಶೇಕಪ್ಪ ಪೂಜಾರ, ಲಕ್ಷ್ಮಣ ವರ್ದಿ, ಫಕ್ಕೀರಪ್ಪ ತಳವಾರ, ಶಬ್ಬೀರ್‌ ಅಹ್ಮದ್‌ ಬಮ್ಮನಹಳ್ಳಿ, ಶಿವನಾಗಪ್ಪ ಎಲಿಗಾರ, ರಾಮೂ ಭಜಂತ್ರಿ, ಈರಪ್ಪ ವಡ್ಡರ, ಜವರ್‌ಅಲಿ ಕರೀಂಸಾಬನವರ, ಸೂರಪ್ಪ ನಡುವಿನಮನಿ, ಸೂರಪ್ಪ ನಡುವಿನಮನಿ, ಅಶೋಕ ಬಟ್ಟೂರ, ಇಮಾಮ್‌ಖಾಸಿಂ ಕಾಲೆನವರ, ಗಣೇಶ ಭೈರಣ್ಣನವರ, ಪ್ರವೀಣ ಹಿರೇಮಠ ಇದ್ದರು.

ಹಾನಗಲ್‌ ತಾಲೂಕಿನಲ್ಲಿ ಕಳೆದ ೪೦-೫೦ ವರ್ಷಗಳಿಂದ ಪರಿಹಾರ ಕಾಣದ ಹಲವು ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಗಮನ ನೀಡಲಾಗಿದೆ. ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಫಲಾನುಭವಿ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರ ವಿತರಿಸಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಹೇಳಿದರು.