ಡಿಸೆಂಬರ್ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಪಕ್ಷಾತೀತವಾಗಿ ಅ.24 ರಂದು ಸಮೀಪದ ಭೀಮರಾಯನ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು, ವಿವಿಧ ಸಂಘ ಸಂಘಟನೆಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಡಿಸೆಂಬರ್ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಪಕ್ಷಾತೀತವಾಗಿ ಅ.24 ರಂದು ಸಮೀಪದ ಭೀಮರಾಯನ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು, ವಿವಿಧ ಸಂಘ ಸಂಘಟನೆಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ಕರೆ ನೀಡಿದರು.ಶಹಾಪುರ ನಗರದ ಗೃಹಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಬರದಿಂದಾಗಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಇದುವರೆಗೂ ಸಮರ್ಪಕ ಪರಿಹಾರವನ್ನೂ ಕಲ್ಪಿಸಿಲ್ಲ. ಅಲ್ಲದೆ ವಾರಾಬಂದಿ ನಿಯಮದಡಿ ಕಾಲುವೆಗೆ ನೀರು ಹರಿಸಿದರೆ ಅಳಿದುಳಿದ ಹತ್ತಿ, ಭತ್ತ, ಮೆಣಸಿನಕಾಯಿ, ತೊಗರಿ ಬೆಳೆಗಳೇ ಹೆಚ್ಚಾಗಿದ್ದು ನೀರಿನ ಅಭಾವದಿಂದ ಒಣಗುತ್ತಿವೆ. ವಾರಬಂದಿ ರದ್ದುಗೊಳಿಸಿ ಡಿಸೆಂಬರ್ ಅಂತ್ಯದವರೆಗೂ ನಿರಂತರವಾಗಿ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.
ರೈತರು ಸಂಕಷ್ಟದಲ್ಲಿದ್ದು ಪಕ್ಷಾತೀತವಾಗಿ ರೈತರ ಕಣ್ಣೊರೆಸಿ ಅವರಿಗೆ ಬೆಂಬಲವಾಗಿ ನಿಲ್ಲುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ರೈತರ ಹಿತ ದೃಷ್ಟಿಯಿಂದ ಸಂಘ, ಸಂಸ್ಥೆ ಪ್ರಮುಖರು, ರೈತ ಸಂಘಗಳ ಮುಖಂಡರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕಿದೆ ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಮಂಡಲ ಅಧ್ಯಕ್ಷ ತಿರುಪತಿ ಹತ್ತಿಕಟಿಗಿ, ನಗರ ಅಧ್ಯಕ್ಷ ಚಂದ್ರು ಯಾಳಗಿ ಹಾಗೂ ಮುಖಂಡರಾದ ರಾಜಶೇಖರ ಗೂಗಲ್, ದೇವಿಂದ್ರಪ್ಪ ಕೋನೇರ ಇತರರಿದ್ದರು.
------ಫೋಟೊ----22ವೈಡಿಆರ್7 :
ಶಹಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಅಮೀನರಡ್ಡಿ ಪಾಟೀಲ್ ಯಾಳಗಿ ಮಾತನಾಡಿದರು.