ಹಿಂದೂ ಕಾರ್ಯಕರ್ತರ ಮೇಲಿನ ಲಾಠಿ ಚಾರ್ಜ್‌ ಖಂಡನೀಯ

| Published : Sep 09 2025, 01:01 AM IST

ಸಾರಾಂಶ

ಹಿಂದೂ ಭಾವನೆಗಳನ್ನು ಕೆದಕುವ ದುಷ್ಟ ಶಕ್ತಿಗಳಿಗೆ ಪ್ರಚೋದನೆ ನೀಡುತ್ತಿದೆ. ಅದರ ಪರಿಣಾಮವಾಗಿ ಮದ್ದೂರಿನಲ್ಲಿ ಕಲ್ಲು ತೂರಾಟ ನಡೆದಿದೆ. ಇದು ಹಿಂದೂ ವಿರೋಧಿ ಸರ್ಕಾರ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮದ್ದೂರಿನಲ್ಲಿ ವಿಘ್ನೇಶ್ವರನ ವಿಸರ್ಜನೆಯಲ್ಲಿ ಮಂತಾದರ ತಂದ ವಿಘ್ನವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಮಾಡಿರುವ ಅಮಾನುಷ ಪೊಲೀಸ್ ಲಾಠಿ ಚಾರ್ಜ್‌ ಖಂಡನೀಯ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಸಮಯದಲ್ಲಿ ಯಾರು ಕಲ್ಲೆಸೆದರು ಎಂದು ಪೊಲೀಸ್‌ ಇಲಾಖೆ ತನಿಖೆ ಮಾಡಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ತಡೆಯುವುದನ್ನು ಬಿಟ್ಟು ಕಲ್ಲೆಸೆದವರ ರಕ್ಷಣೆಗೆ ಸರ್ಕಾರ ನಿಂತಿರುವುದನ್ನು ನೋಡಿದರೇ ಇದೆನೂ ಪೊಲೀಸ್‌ ರಾಜ್ಯವೆ? ಅಥವಾ ಪ್ರಜಾಪ್ರಭುತ್ವ ರಾಜ್ಯವೇ ಎಂಬುವುದು ಸಂಶಯವಾಗಿದೆ ಎಂದು ದೂರಿದರು.

ಕಲ್ಲು ಹೊಡೆಯುವವರಿಗೆ ರಕ್ಷಣೆ ಕೊಡಲಾಗುತ್ತದೆ. ಕಲ್ಲು ಹೊಡೆದುದನ್ನು ಪ್ರಶ್ನೆ ಮಾಡಿದ ಬಾಲಕಿಯ ಮೇಲೆ ಪೊಲೀಸ್‌ ಪೇದೆಲಾಠಿ ಚಾರ್ಜ್ ಮಾಡಿದ್ದು ಅಕ್ಷ್ಯಮ್ಯ ಅಪರಾಧವಾಗಿದೆ. ಕಾನೂನು ಸುವ್ಯವಸ್ಥೆ ಏನಾಗಿದೆ ಎಂಬುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಪೊಲೀಸ್‌ರ ಮೇಲೆಯೂ ಕಲ್ಲು ಬಿದ್ದಿವೆ. ಅವರು ಪೆಟ್ಟು ತಿಂದಿದ್ದಾರೆ. ಆದರೂ ಇದರ ತನಿಖೆ ಮಾಡದೇ ಪ್ರತಿಭಟನೆ ನಿರತ ಅಮಾಯಕರ ಮೇಲೆ‌ ಲಾಠಿ ಚಾರ್ಜ್‌ ಯಾವ ರೀತಿಯ ಮಾನವೀಯತೆ ಇರುವ ಸರ್ಕಾರ ಇದು. ಧಾರ್ಮಿಕ ಆಚರಣೆಯಲ್ಲಿ ಬಂದೋಬಸ್ತ್ ಏರ್ಪಡಿಸಲು ಯೋಗ್ಯತೆ ಇಲ್ಲವೆಂದಾದರೇ ಗೃಹ ಸಚಿವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಪ್ರಶ್ನಿಸಿದರು.

ಈ ಸರ್ಕಾರ ಪೊಲೀಸ್‌ರ ಕೈಯನ್ನು ಕಟ್ಟಿ ಹಾಕುತ್ತಿದೆ. ಪೊಲೀಸರಿಗೆ ಸರಿಯಾಗಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಈ ಸರ್ಕಾರ ಬಿಡುತ್ತಿಲ್ಲ. ಸ್ವತಂತ್ರವಾಗಿ ತನಿಖೆ ಮಾಡಲು ಈ ಸರ್ಕಾರ ಬಿಡುತ್ತಿದೆಯೇ ಎಂಬ ಸಂಶಯವಿದೆ. ಪೊಲೀಸ್ ಮ್ಯಾನುವಲ್ ಮೂಲಕ ಬಂದೋಬಸ್ತ್ ಕರ್ತವ್ಯದ ಯೋಜನೆ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಕುಸಿದು ಹೋಗಿರುವ ಸರ್ಕಾರ, ರಾಜಾರೋಷವಾಗಿ ಕಾನೂನಿನ ದುರ್ಬಳಕೆ ನಡೆಸುವ ಸರ್ಕಾರ ಎಂದು ಕಿಡಿಕಾರಿದರು.

ತುಷ್ಟೀಕರಣದ ಪರಾಕಾಷ್ಠೆಗೆ ಹೋಗಿ ಹಿಂದೂ ಧಾರ್ಮಿಕ ಸಂಸ್ಥೆಗಳು, ಹಿಂದೂ ಧಾರ್ಮಿಕ ಆಚರಣೆಗಳನ್ನು, ಹಿಂದೂ ಭಾವನೆಗಳನ್ನು ಕೆದಕುವ ದುಷ್ಟ ಶಕ್ತಿಗಳಿಗೆ ಪ್ರಚೋದನೆ ನೀಡುತ್ತಿದೆ. ಅದರ ಪರಿಣಾಮವಾಗಿ ಮದ್ದೂರಿನಲ್ಲಿ ಕಲ್ಲು ತೂರಾಟ ನಡೆದಿದೆ. ಇದು ಹಿಂದೂ ವಿರೋಧಿ ಸರ್ಕಾರ. ಪೊಲೀಸರು ತಮ್ಮ ಕರ್ತವ್ಯ ಮಾಡುವುದನ್ನು ಮರೆತು ರಾಜಕೀಯ ಅಣತಿಯಂತೆ ಕುಣಿಯುವ ಅನಿವಾರ್ಯತೆ ಸೃಷ್ಟಿಯಾಂದತ್ತಿದೆ ಎಫ್.ಎಸ್.ಸಿದ್ದನಗೌಡರ ಹೇಳಿದರು.