ಬೀಳಗಿಯಲ್ಲಿ 21, 22 ರಂದು ನಗೆ ನಾಟಕ ಪ್ರದರ್ಶನ

| Published : Sep 19 2024, 01:53 AM IST

ಸಾರಾಂಶ

ಪ್ರಖ್ಯಾತ ನಗೆ ನಾಟಕಗಳ ಮೂಲಕವೇ ಕನ್ನಡ ನಾಡಿನಾದ್ಯಂತ ಖ್ಯಾತಿ ಪಡೆದಿರುವ, ಹುಬ್ಬಳ್ಳಿಯ ಗುರು ಇನ್ಸಿಟ್ಯೂಟ್ ತಂಡ ಹಾಗೂ ಬೀಳಗಿಯ ಸಿದ್ಧೇಶ್ವರ ವಿದ್ಯಾವರ್ದಕ ಸಂಘದ 1983-84ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸಹಯೋಗದಲ್ಲಿ ಸೆಪ್ಟೆಂಬರ್ 21 ರಂದು ಸೂಪರ ಸಂಸಾರ ಮತ್ತು 22 ರಂದು ''''ಸಹಿ ರೀ ಸಹಿ'''' ಎಂಬ ಎರಡು ಹಾಸ್ಯ ನಾಟಕಗಳ ಪ್ರದರ್ಶನವನ್ನು ಸಂಜೆ 6:30 ರಿಂದ ರಾತ್ರಿ 10 ಗಂಟೆಯವರೆಗೆ ಬೀಳಗಿಯ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಗುರು ಇನಸ್ಟಿಟ್ಯೂಟ್ ಮುಖ್ಯಸ್ಥ ಡಾ.ಯಶವಂತ ಸರದೇಶಪಾಂಡೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಪ್ರಖ್ಯಾತ ನಗೆ ನಾಟಕಗಳ ಮೂಲಕವೇ ಕನ್ನಡ ನಾಡಿನಾದ್ಯಂತ ಖ್ಯಾತಿ ಪಡೆದಿರುವ, ಹುಬ್ಬಳ್ಳಿಯ ಗುರು ಇನ್ಸಿಟ್ಯೂಟ್ ತಂಡ ಹಾಗೂ ಬೀಳಗಿಯ ಸಿದ್ಧೇಶ್ವರ ವಿದ್ಯಾವರ್ದಕ ಸಂಘದ 1983-84ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸಹಯೋಗದಲ್ಲಿ ಸೆಪ್ಟೆಂಬರ್‌ 21 ರಂದು ಸೂಪರ ಸಂಸಾರ ಮತ್ತು 22 ರಂದು ''''''''ಸಹಿ ರೀ ಸಹಿ'''''''' ಎಂಬ ಎರಡು ಹಾಸ್ಯ ನಾಟಕಗಳ ಪ್ರದರ್ಶನವನ್ನು ಸಂಜೆ 6:30 ರಿಂದ ರಾತ್ರಿ 10 ಗಂಟೆಯವರೆಗೆ ಬೀಳಗಿಯ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಗುರು ಇನಸ್ಟಿಟ್ಯೂಟ್ ಮುಖ್ಯಸ್ಥ ಡಾ, ಯಶವಂತ ಸರದೇಶಪಾಂಡೆ ತಿಳಿಸಿದ್ದಾರೆ.

ಬೀಳಗಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾಟಕದ ಕೊನೆಗೆ ಅದೃಷ್ಟವಂತ ಪ್ರೇಕ್ಷಕರಿಗೆ ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸಿನ ಪ್ರಾಯೋಜಕತ್ವದಲ್ಲಿ ಸಾವಿರಾರು ರುಪಾಯಿ ಬೆಲೆಯ ಸಿಲ್ಕ್‌ ಸೀರೆ ಉಡುಗೊರೆಯಾಗಿ ನೀಡಲಾಗುವುದು. ನಾಟಕ ಪ್ರದರ್ಶನಗಳ ನಂತರ ಪ್ರೇಕ್ಷಕರೆಲ್ಲರಿಗೂ ಸಹಭೋಜನವಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಡಾ.ಪ್ರಮೋದ ದೇಶಪಾಂಡೆ, ಲಿಂಗರಾಜ ವೈದ್ಯ, ವೆಂಕಟೇಶ ಪಾಟೀಲ, ಶಿವಾನಂದ ಶಿರೊಳ, ಸಿದ್ದು ಬಾಗಶೆಟ್ಟಿ, ಈರಣ್ಣ ನಾಗರಾಳ, ರಾಜು ಗೋಕಾಕ ಇದ್ದರು. ಬೀಳಗಿಯ ಸಂಯೋಜನಾ ಸಹಾಯಕ ಕಿಯೋನಿಕ್ಸ್ ಯುವ.ಕಾಂ ಬೀಳಗಿ, ಹರಿ ಓಂ ಝರಾಕ್ಸ್‌ ಸೆಂಟರ್ ಬೀಳಗಿ ಮೊ.ನಂ.9902465889,9448640336 ಇವರನ್ನು ಸಂಪರ್ಕಿಸಿ.