‘ಬಿಯಾಂಡ್‌ ದಿ ಸ್ಕೋರ್‌’ ರಂಗ ಕಾರ್ಯಾಗಾರಕ್ಕೆ ಚಾಲನೆ

| Published : Jan 03 2025, 12:34 AM IST

‘ಬಿಯಾಂಡ್‌ ದಿ ಸ್ಕೋರ್‌’ ರಂಗ ಕಾರ್ಯಾಗಾರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಡೋಲು ಬಾರಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಪ್ರಕಾಶ್‌ ರಾಜ್‌, ಕಲೆಗಳ ಬಗ್ಗೆ ಅಭಿರುಚಿ ಬೆಳೆಸುವಲ್ಲಿ ಕಾಲೇಜುಗಳಲ್ಲಿ ನಡೆಸುವಂತಹ ಕಾರ್ಯಾಗಾರಗಳು ಪೂರಕವಾಗಿರುತ್ತವೆ. ನನ್ನ ಕಾಲೇಜು ಅವಧಿಯಲ್ಲಿ ಕನ್ನಡ ಅಧ್ಯಾಪಕರು ಪಾಠದ ಜತೆ ಪದ್ಯವನ್ನು ನೋಡುವ, ವಿಮರ್ಶೆ ಮಾಡುವ ಬಗೆಯನ್ನು ತಿಳಿಸಿಕೊಟ್ಟ ಕಾರಣ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಲು ಕಾರಣವಾಯಿತು ಎಂದು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಂತ ಅಲೋಶಿಯಸ್ ಡೀಮ್ಡ್ ವಿವಿ ರಂಗ ಅಧ್ಯಯನ ಕೇಂದ್ರ ಹಾಗೂ ಹಿರಿಯ ನಟ, ರಂಗಕರ್ಮಿ ಪ್ರಕಾಶ್ ರಾಜ್ ನೇತೃತ್ವದ ‘ನಿರ್ದಿಗಂತ’ ವತಿಯಿಂದ ನಾಲ್ಕು ದಿನಗಳ ‘ಬಿಯಾಂಡ್ ದಿ ಸ್ಕೋರ್- ರಿದಂ’ ಕಾರ್ಯಾಗಾರದ ಉದ್ಘಾಟನೆ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಗುರುವಾರ ನಡೆಯಿತು.

ಡೋಲು ಬಾರಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಪ್ರಕಾಶ್‌ ರಾಜ್‌, ಕಲೆಗಳ ಬಗ್ಗೆ ಅಭಿರುಚಿ ಬೆಳೆಸುವಲ್ಲಿ ಕಾಲೇಜುಗಳಲ್ಲಿ ನಡೆಸುವಂತಹ ಕಾರ್ಯಾಗಾರಗಳು ಪೂರಕವಾಗಿರುತ್ತವೆ. ನನ್ನ ಕಾಲೇಜು ಅವಧಿಯಲ್ಲಿ ಕನ್ನಡ ಅಧ್ಯಾಪಕರು ಪಾಠದ ಜತೆ ಪದ್ಯವನ್ನು ನೋಡುವ, ವಿಮರ್ಶೆ ಮಾಡುವ ಬಗೆಯನ್ನು ತಿಳಿಸಿಕೊಟ್ಟ ಕಾರಣ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಲು ಕಾರಣವಾಯಿತು ಎಂದು ಸ್ಮರಿಸಿದರು. ಕಲೆಯ ಬಗ್ಗೆ ಯುವ ವಯಸ್ಸಿನಲ್ಲಿ ಅಭಿರುಚಿ, ನಂಬಿಕೆ, ಗ್ರಹಿಕೆಯನ್ನು ಬೆಳೆಸುವುದು ಮುಖ್ಯ ಎಂದವರು ಹೇಳಿದರು.ಮುಖ್ಯ ಅತಿಥಿ, ಸಂತ ಅಲೋಶಿಯಸ್ ಡೀಮ್ಡ್ ವಿವಿ ಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಾಗಾರದ ಪ್ರಮುಖರಾದ ಕ್ರಿಸ್ಟೋಫರ್ ಡಿಸೋಜ, ಸಂಪನ್ಮೂಲ ವ್ಯಕ್ತಿ ಶ್ರೀಕಂಠ ಸ್ವಾಮಿ, ಮುನ್ನಾ ಮೈಸೂರು, ಕೃಷ್ಣ ಚೈತನ್ಯ ಇದ್ದರು.