ದಾಬಸ್‍ಪೇಟೆ: ಸದಾ ಒಂದೊಲ್ಲೊಂದು ವಿನೂತನ ಕಾರ್ಯಕ್ರಮ ಮಾಡಿ ಜನಮನ ಗೆಲ್ಲುವ ಪ್ರಯತ್ನದಲ್ಲಿ ಕನ್ನಡಪ್ರಭ ದಿನಪತ್ರಿಕೆ ಯಶಸ್ವಿ ಕೆಲಸ ಮಾಡುತ್ತಿದೆ. ಈ ಬಾರಿ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತಿಹಾಸ ಬಿಂಬಿಸುವ "ನಮ್ಮ ಊರು ನಮ್ಮ ಜಿಲ್ಲೆ " ಶೀರ್ಷಿಕೆಯಡಿ ಗ್ರಾಮಾಂತರ ಬೆಂಗಳೂರಿನ ಭಾವಾಂತರ ವಿಶೇಷ ಪುರವಣಿ ಹೊರ ತಂದಿದ್ದು ವಿಶೇಷವಾಗಿ ಮೂಡಿಬಂದಿದೆ ಎಂದು ಶಾಸಕ ಶ್ರೀನಿವಾಸ್ ಹೇಳಿದರು

ದಾಬಸ್‍ಪೇಟೆ: ಸದಾ ಒಂದೊಲ್ಲೊಂದು ವಿನೂತನ ಕಾರ್ಯಕ್ರಮ ಮಾಡಿ ಜನಮನ ಗೆಲ್ಲುವ ಪ್ರಯತ್ನದಲ್ಲಿ ಕನ್ನಡಪ್ರಭ ದಿನಪತ್ರಿಕೆ ಯಶಸ್ವಿ ಕೆಲಸ ಮಾಡುತ್ತಿದೆ. ಈ ಬಾರಿ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತಿಹಾಸ ಬಿಂಬಿಸುವ "ನಮ್ಮ ಊರು ನಮ್ಮ ಜಿಲ್ಲೆ " ಶೀರ್ಷಿಕೆಯಡಿ ಗ್ರಾಮಾಂತರ ಬೆಂಗಳೂರಿನ ಭವಾಂತರ ವಿಶೇಷ ಪುರವಣಿ ಹೊರ ತಂದಿದ್ದು ವಿಶೇಷವಾಗಿ ಮೂಡಿಬಂದಿದೆ ಎಂದು ಶಾಸಕ ಶ್ರೀನಿವಾಸ್ ಹೇಳಿದರು.

ನೆಲಮಂಗಲದ ಗೃಹಕಚೇರಿಯಲ್ಲಿ ಕನ್ನಡಪ್ರಭ ದಿನಪತ್ರಿಕೆಯ ನಮ್ಮ ಊರು ನಮ್ಮ ಜಿಲ್ಲೆ ಶೀರ್ಷಿಕೆಯಡಿ "ಗ್ರಾಮಾಂತರ ಬೆಂಗಳೂರಿನ ಭಾವಾಂತರ " ವಿಶೇಷ ಪುರವಣಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಐತಿಹಾಸಿಕ ಮತ್ತು ಪ್ರವಾಸಿ ತಾಣದ ಜೊತೆ ಬೆಂಗಳೂರು ಗ್ರಾಮಾಂತರದ ಇತಿಹಾಸವನ್ನು ಓದುಗರಿಗೆ ಮತಲುಪಿಸುವ ವಿನೂತನ ಪ್ರಯತ್ನವನ್ನು ಕನ್ನಡಪ್ರಭ ವಿಶೇಷ ಪುರವಣಿ ಮಾಡಿ ಪತ್ರಿಕಾರಂಗದ ಇತಿಹಾಸದಲ್ಲಿ ಹೊಸದೊಂದು ಮೈಲುಗಲ್ಲನ್ನು ಸ್ಥಾಪಿಸಿದೆ ಎಂದರು.

ಗ್ರಾಮಾಂತರ ಬೆಂಗಳೂರಿನ ಭಾವಂತರ ವಿಶೇಷ ಪುರವಣಿ ಹೊರತಂದು ಇಲ್ಲಿನ ಇತಿಹಾಸ, ರಾಜಕೀಯ, ಸಂಸ್ಕøತಿ, ಪರಂಪರೆ, ಎಲ್ಲದರಲ್ಲೂ ನಮ್ಮ ಜಿಲ್ಲೆ ವಿಭಿನ್ನತೆಯನ್ನು ಕಾಯ್ದುಕೊಂಡಿದೆ. ಇದೆಲ್ಲವನ್ನು ಒಂದೇ ಸೂರಿನಡಿ ಅಂದರೆ ಪುಸ್ತಕ ರೂಪದಲ್ಲಿ ಕಟ್ಟಿ ಕೊಡೋ ಪ್ರಯತ್ನವನ್ನು ಕನ್ನಡ ಪ್ರಭ ವಿಶೇಷದ ಪುರವಣಿ ಮಾಡಿದೆ. ಈ ನೆಲದ ಸಂಸ್ಕೃತಿ, ಜಿಲ್ಲೆಯ ರಾಜಕೀಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಿಂದೆ ಹೇಗಿತ್ತು, ಈಗ ಹೇಗಾಗಿದೆ ಎನ್ನುವುದು ಸೇರಿದಂತೆ ಹತ್ತು ಹಲವು ಐತಿಹಾಸಿಕ ವಿಷಯಗಳನ್ನೊಳಗೊಂಡ ಪುರವಣಿ ಜನಮಾನಸದಲ್ಲಿ ಉಳಿಯಲಿದೆ ಎಂದರು.

ನೆಲಮಂಗಲ ತಾಲೂಕಿನ ಇತಿಹಾಸ, ಪ್ರಸಿದ್ದ ಪೌರಾಣಿಕ ಸ್ಥಳಗಳು, ಚಲನಚಿತ್ರ ನಟರು, ರಾಜಕಾರಣಿಗಳ ಪರಿಚಯ, ಸಾಧನೆಯ ಸಮಗ್ರ ಮಾಹಿತಿಯನ್ನು ಒಳಗೊಂಡಿರುವುದು ವಿಶೇಷವಾಗಿತ್ತು. ಶಿವಗಂಗೆ, ಮಹಿಮರಂಗನ ಬೆಟ್ಟ, ಸಿದ್ದರಬೆಟ್ಟ, ವಿಶ್ವಶಾಂತಿ ಆಶ್ರಮ, ಮಣ್ಣೆ ಸೇರಿದಂತೆ ಇತರ ಸ್ಥಳಗಳ ಇತಿಹಾಸವನ್ನು ಈ ಲೇಖನಗಳನ್ನು ಓದಿ ತಿಳಿಯಲು ಅನುಕೂಲವಾಗಲಿದೆ. ಪ್ರತಿನಿತ್ಯ ನಮ್ಮ ಅಭಿವೃದ್ಧಿ ಕಾರ್ಯಗಳು, ಕಾರ್ಯಕ್ರಮಗಳ ಬಗ್ಗೆ ಸುದ್ದಿ ಪ್ರಕಟವಾಗಿ ಜನರ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಮೂಲ್ ಮಾಜಿ ನಿರ್ದೇಶಕ ಭಾಸ್ಕರ್, ಎನ್‌ಪಿಎ ಸದಸ್ಯ ವೆಂಕಟೇಶ್, ತಾಪಂ ಮಾಜಿ ಸದಸ್ಯ ಮುನಿರಾಮು, ಗ್ರಾಪಂ ಮಾಜಿ ಅಧ್ಯಕ್ಷರಾದ ಗಂಗರೇವಣ್ಣ, ಹೊಸಳಯ್ಯ, ಕನ್ನಡಪ್ರಭ ಪತ್ರಿಕೆ ಜಾಹೀರಾತು ವಿಭಾಗದ ಶಿವಕುಮಾರ್, ವರದಿಗಾರ ರುದ್ರೇಶ್ ಹೊನ್ನೇನಹಳ್ಳಿ ಇತರರಿದ್ದರು.

ಪೋಟೋ 3 :

ನೆಲಮಂಗಲ ಗೃಹಕಚೇರಿಯಲ್ಲಿ ಕನ್ನಡಪ್ರಭ ಪತ್ರಿಕೆಯ ನಮ್ಮ ಊರು ನಮ್ಮ ಜಿಲ್ಲೆ ಶೀರ್ಷಿಕೆಯಡಿ ಗ್ರಾಮಾಂತರ ಬೆಂಗಳೂರಿನ ಭಾವಾಂತರ ವಿಶೇಷ ಪುರವಣಿಯನ್ನು ಶಾಸಕ ಶ್ರೀನಿವಾಸ್ ಬಿಡುಗಡೆಗೊಳಿಸಿದರು.