ಸಿಐಎಸ್‌ಎಫ್‌ ಪಿಂಚಣಿ ಸೇವಾ ನಿರ್ವಹಣೆಗೆ ಇ-ಸೇವಾ ಪುಸ್ತಕ ಪ್ರಾರಂಭ

| Published : Dec 06 2024, 09:01 AM IST

ಸಿಐಎಸ್‌ಎಫ್‌ ಪಿಂಚಣಿ ಸೇವಾ ನಿರ್ವಹಣೆಗೆ ಇ-ಸೇವಾ ಪುಸ್ತಕ ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ರಿಯಲ್-ಟೈಮ್ ಟ್ರ‍್ಯಾಕಿಂಗ್, ಭಾಗೀದಾರರ ಸಹಕಾರದ ವೈಶಿಷ್ಟ್ಯಗಳು ಮತ್ತು ಆನ್‌ಲೈನ್‌ ಸೇವಾ ದಾಖಲೆಯೊಂದಿಗೆ ಪಾರದರ್ಶಕತೆ ಹೆಚ್ಚಿಸಲಿದೆ. ಇ ಪೋರ್ಟಲ್‌ ಮೂಲಕ ಸೇವೆಯಲ್ಲಿರುವ ಸಿಬ್ಬಂದಿ ತಮ್ಮ ದಾಖಲೆಗಳನ್ನು ಪರಿಶೀಲಿಸಬಹುದು. ಏನಾದರೂ ತಪ್ಪುಗಳಿದ್ದರೆ ಸರಿಪಡಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್‌) ಪಿಂಚಣಿ ಮತ್ತು ಸೇವಾ ನಿರ್ವಹಣೆಯ ಸುಧಾರಿತ ವ್ಯವಸ್ಥೆಗೆ ಇ-ಸೇವೆ ಪುಸ್ತಕವನ್ನು ಪ್ರಾರಂಭಿಸಿದೆ.

ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಸಿಐಎಸ್‌ಎಫ್‌ನ ಹೋಂ ಸಿಸಿಎ ಕಲ್ಯಾಣಿ ಅವರ ಉಪಸ್ಥಿತಿಯಲ್ಲಿ ಎಡಿಜಿ ಪದ್ಮಾಕರ್‌ ಚಾಲನೆ ನೀಡಿದರು.

‘ನ್ಯಾಷನಲ್ ಡಿಜಿಟಲ್ ಇಂಡಿಯಾ’ ಯೋಜನೆಯಡಿ ಪಿಂಚಣಿ ಮತ್ತು ಸೇವಾ ನಿರ್ವಹಣೆ ಆಧುನೀಕರಿಸಲು ಇ-ಸೇವೆ ಪುಸ್ತಕ ಪೋರ್ಟಲ್‌ ಆರಂಭಿಸಿದೆ. ಎಲ್ಲ ಸಿಬ್ಬಂದಿಗೆ ಲಭ್ಯವಿರುವ ಇ ಪೋರ್ಟಲ್‌, ಸೇವಾ ಪುಸ್ತಕಗಳ ಭೌತಿಕ ಸ್ಥಳಾಂತರದಿಂದ ಉಂಟಾಗುವ ತಡತೆಯನ್ನು ನಿವಾರಿಸಿ, ವಾರ್ಷಿಕ ೨,೪೦೦ ಪಿಂಚಣಿ ಹಕ್ಕುದಾರರಿಗೆ ಸಕಾಲದಲ್ಲಿ ಪಿಂಚಣಿ ವಿತರಣೆಯನ್ನು ಸುಲಭಗೊಳಿಸಲಿದೆ.