ಕ್ಷಯರೋಗ ಪತ್ತೆ ಹಚ್ಚುವ ಮೊಬೈಲ್ ಕ್ಷ-ಕಿರಣ ಕಾರ್ಯಕ್ಕೆ ಚಾಲನೆ

| Published : Jun 17 2024, 01:36 AM IST

ಸಾರಾಂಶ

ರೋಗಿಗಳಲ್ಲಿ ಕಂಡು ಬರುವ ಹಲವು ದಿನಗಳಿಂದ ಇರುವ ಕೆಮ್ಮು ಕಫಾ ಸೇರಿ ಹಲವು ಸಮಸ್ಯೆ ಎದುರಿಸುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಕ್ಷ-ಕಿರಣ ಮಾಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಕೆಂಭಾವಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಆಧುನಿಕ ಉಪಕರಣಗಳು ರೋಗಿಗಳಿಗೆ ವರದಾನವಾಗಿವೆ. ಯುವ ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ ಅವರ ನಿರಂತರ ಶ್ರಮ ಮತ್ತು ಜಿಲ್ಲಾ ತಾಲೂಕಾ ಮಟ್ಟದ ವೈದ್ಯಾಧಿಕಾರಿಗಳ ಸಹಾಯದಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ತಮ್ಮ ಹಲವು ಸಮಸ್ಯೆಗಳಿಗೆ ಆಧುನಿಕ ಉಪಕರಣಗಳ ಮೂಲಕ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಪಟ್ಟಣದಲ್ಲಿ ನಡೆದ ಸಂಶಯಾಸ್ಪದ ಕ್ಷಯ ರೋಗ ಪತ್ತೆ ಹಚ್ಚುವ ಮೊಬೈಲ್ ಕ್ಷ ಕಿರಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ, ರೋಗಿಗಳಲ್ಲಿ ಕಂಡು ಬರುವ ಹಲವು ದಿನಗಳಿಂದ ಇರುವ ಕೆಮ್ಮು ಕಫಾ ಸೇರಿ ಹಲವು ಸಮಸ್ಯೆ ಎದುರಿಸುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಕ್ಷ-ಕಿರಣ ಮಾಡಿಸಿಕೊಳ್ಳಬೇಕು. ಬಹಳ ದಿನಗಳಿಂದ ಕೆಮ್ಮು ಜ್ವರ ತಲೆಸುತ್ತುವ ಸಮಸ್ಯೆ ಇದ್ದವರು ತಪ್ಪದೆ ಈ ತಪಾಸಣೆ ಮಾಡಿಸುವಂತೆ ಮನವಿ ಮಾಡಿದರು.

ಮೊಬೈಲ್ ಎಕ್ಸ್ ರೇ ವರದಿ ಬಂದ ನಂತರ ರೋಗಿಗಳಿಗೆ ಔಷಧಿ ಮಾತ್ರೆ ವಿತರಿಸಲಾಗುವುದು ಎಂದು ಹೇಳಿದರು. ತಾಲೂಕು ಆಸ್ಪತ್ರೆಯಿಂದ ಆಗಮಿಸಿದ ವಿಶೇಷ ತಜ್ಞರ ತಂಡ ಸುಮಾರು 116 ರೋಗಿಗಳಿಗೆ ತಪಾಸಣೆ ನಡೆಸಿದರು.

ತಾಲೂಕು ಕ್ಷಯರೋಗ ನಿರ್ಮೂಲನಾ ತಂಡದ ಹನುಮಂತ, ಚಿದಾನಂದ, ರಾಘವೇಂದ್ರ ನಾಯಕ, ಆರೋಗ್ಯ ನಿರೀಕ್ಷಕ ರೇವಣಸಿದ್ದಪ್ಪ, ನಿಂಗಮ್ಮ, ಭೀಮರಾಯ ಇದ್ದರು.