ದಾಬಸ್‍ಪೇಟೆ: ಎಐ ಸೃಷ್ಟಿ ಯುಗದಲ್ಲಿ ಮನುಷ್ಯ ಕಲಿಕೆ ಮತ್ತಷ್ಟು ಎತ್ತರಕ್ಕೆ ಸಾಗಿದಾಗ ಮಾತ್ರ ನಮ್ಮ ವೃತ್ತಿ ಉಳಿಸಿಕೊಳ್ಳಲು ಸಾಧ್ಯ ಇಲ್ಲದಿದ್ದರೆ ಎಐ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತದೆ. ಇಂತಹ ಗಂಭೀರ ವಿಚಾರಗಳ ಬಗ್ಗೆ ಜಯಣ್ಣ ಪುಸ್ತಕ ಬರೆದಿರುವುದು ಸ್ವಾಗತಾರ್ಹ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಹರೀಶ್ ತಿಳಿಸಿದರು

ದಾಬಸ್‍ಪೇಟೆ: ಎಐ ಸೃಷ್ಟಿ ಯುಗದಲ್ಲಿ ಮನುಷ್ಯ ಕಲಿಕೆ ಮತ್ತಷ್ಟು ಎತ್ತರಕ್ಕೆ ಸಾಗಿದಾಗ ಮಾತ್ರ ನಮ್ಮ ವೃತ್ತಿ ಉಳಿಸಿಕೊಳ್ಳಲು ಸಾಧ್ಯ ಇಲ್ಲದಿದ್ದರೆ ಎಐ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತದೆ. ಇಂತಹ ಗಂಭೀರ ವಿಚಾರಗಳ ಬಗ್ಗೆ ಜಯಣ್ಣ ಪುಸ್ತಕ ಬರೆದಿರುವುದು ಸ್ವಾಗತಾರ್ಹ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಹರೀಶ್ ತಿಳಿಸಿದರು.

ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ವಕೀಲ ಬೈರಸಂದ್ರ ಜಯಣ್ಣ ರಚಿತ "ಕೃತಕ ಬುದ್ದಿಮತ್ತೆ ಮತ್ತು ನ್ಯಾಯಾಂಗದ ಭವಿಷ್ಯ " ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಗೂ ಎಐ ಪ್ರವೇಶಲಿದೆ ಎಂಬ ನಿಟ್ಟಿನಲ್ಲಿ ವಕೀಲ ಜಯಣ್ಣ ಬರೆದಿರುವ ಕೃತಕ ಬುದ್ದಿಮತ್ತೆ ಕೃತಿ ವಕೀಲರಿಗೆ ಸಹಕಾರಿಯಾಗಿದೆ. ಕರತಿಯಲ್ಲಿ ಭವಿಷ್ಯದ ದಿನಗಳಲ್ಲಿ ನಾವು ಬದಲಾಗಬೇಕಿರುವ ವಿಚಾರಗಳ ಕುರಿತು ವಿವರಿಸಿದ್ದಾರೆ. ವೃತ್ತಿ ಜೀವನದಲ್ಲಿ ವಕೀಲರು ಬರೆದ ಮೊದಲ ಪುಸ್ತಕ ಬಿಡುಗಡೆ ಮಾಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಸಂದೇಶ್, ಕಿಶೋರ್ ಕುಮಾರ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಪೂಜಾಶೆಟ್ಟಿ, ಅಪರ ಸಿವಿಲ್ ನ್ಯಾಯಧೀಶ ಮಂಜು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ, ಬೆಂಗಳೂರು ವಕೀಲರ ಸಂಘದ ಹೈಕೋರ್ಚ್ ವಿಭಾಗದ ಉಪಾಧ್ಯಕ್ಷ ಅರವಿಂದ ಕಾಮತ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಬಿ.ಟಿಮೋಹನ್‍ಕುಮಾರ್, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಜಂಟಿ ಕಾರ್ಯದರ್ಶಿ ರಾಮೇಗೌಡ, ಖಜಾಂಚಿ ಲೋಕೇಶ್, ಹಿರಿಯ ವಕೀಲರಾದ ಹನುಮಂತೇಗೌಡ, ಎನ್.ಪಿ ರಘುನಾಥ್, ಬೈಲಪ್ಪ, ರಾಮಚಂದ್ರ, ಸೋಮಶೇಖರ್, ವಕೀಲರಾದ ಸತೀಶ್, ಎಚ್.ಪಿ.ಗೋವಿಂದರಾಜು, ಧನಂಜಯ್, ನಾರಾಯಣಗೌಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪೋಟೋ 1 :

ನೆಲಮಂಗಲ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ವಕೀಲ ಬೈರಸಂದ್ರ ಜಯಣ್ಣ ಬರೆದಿರುವ "ಕೃತಕ ಬುದ್ದಿಮತ್ತೆ ಮತ್ತು ನ್ಯಾಯಾಂಗದ ಭವಿಷ್ಯ " ಪುಸ್ತಕ ಬಿಡುಗಡೆ ಮಾಡಿದರು.