ಉತ್ತರ ಕರ್ನಾಟಕದಲ್ಲಿ ಬರಗಾಲ ಬಿದ್ದಿದ್ದು ರಾಜ್ಯ, ಕೇಂದ್ರ ಸರ್ಕಾರಗಳು ತಕ್ಷಣವೇ ಬರಗಾಲ ಘೋಷಿಸಿ ರೈತರಿಗೆ ಪರಿಹಾರ ಮತ್ತು ಬೆಳೆವಿಮೆ ಬಿಡುಗಡೆ ಹಾಗೂ ಹಿಂದಿನ ವರ್ಷದ ಬೆಳೆವಿಮೆ ಬಾಕಿ ಉಳಿದ ಪರಿಹಾರ ಬಿಡುಗಡೆಗೊಳಿಸಬೇಕು.
ನವಲಗುಂದ:
ಮಲಪ್ರಭೆಗೆ ಮಹದಾಯಿ, ಕಳಸಾ-ಬಂಡೂರಿ ಜೋಡಣೆ ಬಗ್ಗೆ ನ್ಯಾಯಾಧಿಕರಣದ ತೀರ್ಪಿನಂತೆ ಯೋಜನೆ ಆರಂಭಿಸಬೇಕೆಂದು ಆಗ್ರಹಿಸಿ ಮಹದಾಯಿ, ಕಳಸಾ- ಬಂಡೂರಿ ಹೋರಾಟಗಾರರು ತಹಸೀಲ್ದಾರ್ ಕಚೇರಿ ಶಿರೇಸ್ತದಾರರ ಮುಖಾಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆವರಿಗೆ ಗುರುವಾರ ಮನವಿ ಸಲ್ಲಿಸಿದರು.ಉತ್ತರ ಕರ್ನಾಟಕದಲ್ಲಿ ಬರಗಾಲ ಬಿದ್ದಿದ್ದು ರಾಜ್ಯ, ಕೇಂದ್ರ ಸರ್ಕಾರಗಳು ತಕ್ಷಣವೇ ಬರಗಾಲ ಘೋಷಿಸಿ ರೈತರಿಗೆ ಪರಿಹಾರ ಮತ್ತು ಬೆಳೆವಿಮೆ ಬಿಡುಗಡೆ ಹಾಗೂ ಹಿಂದಿನ ವರ್ಷದ ಬೆಳೆವಿಮೆ ಬಾಕಿ ಉಳಿದ ಪರಿಹಾರ ಬಿಡುಗಡೆಗೊಳಿಸಬೇಕು. ಜನರಿಗೆ ಉದ್ಯೋಗ, ಜಾನುವಾರುಗಳಿಗೆ ಆಹಾರ ಒದಗಿಸಬೇಕು ಎಂದು ಒತ್ತಾಯಿಸಿದ ಹೋರಾಟಗಾರರು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿಯಿಂದ ನೀರು ಹರಿಸಬಾರದು ಎಂದು ಒತ್ತಾಯಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳು ಸಿಬಿಲ್ ತೆಗೆದು ಹಾಕಿ ರೈತರಿಗೆ ಮರಳಿ ಸಾಲ ಕೊಡಬೇಕು. ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಸುಭಾಸಚಂದ್ರಗೌಡ ಪಾಟೀಲ, ಉಳಿವೆಪ್ಪ ಇಬ್ರಾಹಿಂಪುರ, ಗುರಪ್ಪ ಗಡ್ಡಿ, ಕೃಷ್ಣರಡ್ಡಿ ಕುರಹಟ್ಟಿ, ಬಸನಗೌಡ ಫಕೀರಗೌಡ್ರ, ಬಾಂಬೆ ಮೇಸ್ತ್ರಿ, ಚಾಹುಸೇನಿ, ಭೀಮಪ್ಪ ಹಿರೇಗಣ್ಣವರ, ಕರಿಯಪ್ಪ ತಳವಾರ, ಯಲ್ಲಪ್ಪ ತಡಸಿ, ಮುರಗೆಪ್ಪ ಪಲ್ಲೇದ, ರವಿ ತೋಟದ, ಸಂಗಪ್ಪ ನಿಡವಣಿ ಸೇರಿದಂತೆ ಹಲವರಿದ್ದರು.