ಕಾನೂನು ಸುವ್ಯವಸ್ಥೆ ಕುಸಿದು ಹತ್ಯೆಗಳು ಹೆಚ್ಚಳ

| Published : May 21 2024, 12:47 AM IST / Updated: May 21 2024, 12:53 PM IST

ಕಾನೂನು ಸುವ್ಯವಸ್ಥೆ ಕುಸಿದು ಹತ್ಯೆಗಳು ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

  ದುಷ್ಕರ್ಮಿಗಳನ್ನು ಗಲ್ಲಿಗೇರಿಸುವಂತೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಸಮಾಜ ಬಾಂಧವರು ಪ್ರತಿಭಟಿಸಿದರು.

 ದಾವಣಗೆರೆ :  ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದಲ್ಲಿ ಅಪ್ರಾಪ್ತೆಯನ್ನು ವಾಮಾಚಾರಕ್ಕೆ ಬಲಿ ಕೊಟ್ಟಿರುವ ದುಷ್ಟರು, ಹುಬ್ಭಳ್ಳಿಯಲ್ಲಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ್ ಹತ್ಯೆ ಮಾಡಿದ ದುಷ್ಕರ್ಮಿಗಳು ಹಾಗೂ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರು ಗ್ರಾಮದ ಅರ್ಜುನಪ್ಪ ಹಣಮಂತನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಗಲ್ಲಿಗೇರಿಸುವಂತೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಸಮಾಜ ಬಾಂಧವರು ಪ್ರತಿಭಟಿಸಿದರು.

ನಗರದ ಶ್ರೀ ಜಯದೇವ ವೃತ್ತದಿಂದ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೆ ಮಡಿವಾಳ ಮಾಚಿದೇವ ಸಂಘದ ಪದಾಧಿಕಾರಿಗಳು, ಸಮಾಜದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿದರು. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಆವರಗೆರೆ ಎಚ್‌.ಜಿ.ಉಮೇಶ ಇದೇ ವೇಳೆ ಮಾತನಾಡಿ, ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠಗೆ ಕಾಲೇಜು ಕ್ಯಾಂಪಸ್‌ನಲ್ಲಿ ಹಂತದ ಫಯಾಜ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಅಂಜಲಿ ಅಂಬಿಗೇರ ಅವರನ್ನು ಮತ್ತೊಬ್ಬಆರೋಪಿ ಕೊಲೆ ಮಾಡಿದ್ದಾನೆ. ಆತನೇ ಗದಗ ಮೂಲದ ಮಹಿಳೆಗೂ ಚಾಕುವಿನಿಂದ ಇರಿದಿದ್ದಾನೆ. ಕೊಡಗು ಜಿಲ್ಲೆ ಕುಂಬಾರ ಗಡಿಗೆ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನಾ ಕುತ್ತಿಗೆಯನ್ನೇ ಕತ್ತರಿಸಿದ್ದಾರೆ, ಕಲಬುರಗಿ ಜಿಲ್ಲೆ ಸೇಡಂ ತಾಲೂಕು ದೇವನೂರು ಗ್ರಾಮದಲ್ಲಿ ಮೂವರನ್ನೂ ವಿವಸ್ತ್ರಗೊಳಿಸಿ, ಗುಪ್ತಾಂಗಪ್ಪೆ ಬ್ಯಾಟರಿಯಿಂದ ಕರೆಂಟ್ ಶಾಕ್ ನೀಡಿ, ಪೈಶಾಚಿಕ ವರ್ತನೆ ತೋರಲಾಗಿದೆ. ಇಷ್ಟೆಲ್ಲಾ ಅನಾಹುತ, ಅಪರಾಧ, ಕೃತ್ಯ, ಹತ್ಯೆಗಳು ನಡೆಯುತ್ತಿದ್ದರೂ ಗೃಹ ಸಚಿವರು, ಮುಖ್ಯಮಂತ್ರಿ, ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಕಿಡಿಕಾರಿದರು. ಅಲ್ಲದೇ, ಹಂತಕರು, ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಸಮಾಜದ ಮುಖಂಡರಾದ ಹುಲಕಟ್ಟೆ ರಾಮಚಂದ್ರಪ್ಪ, ಹಿರಿಯ ಪತ್ರಕರ್ತ ಎಂ.ವೈ.ಸತೀಶ ಮಡಿವಾಳರ್, ಜಿ.ಕಿಶೋರಕುಮಾರ, ಆರ್.ಎನ್. ಮಾರುತಿ, ಅಂಜಿನಪ್ಪ ಪೂಜಾರ, ಜಿ.ವಿಜಯಕರುಮಾರ, ಹನುಮಂತಪ್ಪ, ಕಕ್ಕರಗೊಳ್ಳ ಮಂಜುನಾಥ, ಅಣಜಿ ಹನುಮಂತಪ್, ಐಗೂರು ಅಂಜಿನಪ್ಪ, ಡೈಮಂಜ್ ಮಂಜುನಾಥ, ಗೋಪಾಲ, ಕೃಷ್ಣಮೂರ್ತಿ, ಬಾತಿ ಶಂಕರ, ರವಿ, ಅರಸೀಕೆರೆ ಬಸವರಾಜ, ರವಿ ಚಿಕ್ಕಣ್ಣ, ಮಧುರ, ನಾಗಮ್ಮ, ಸುಭಾಷ್, ರಾಜಣ್ಣ, ಎಂ.ಕೆ.ಬಸವರಾಜ ಇತರರು ಇದ್ದರು.