ಸಾರಾಂಶ
ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತು ಜಿಲ್ಲೆಯ ಎಲ್ಲಾ ನ್ಯಾಯಾಧೀಶರೊಂದಿಗೆ ಸಂವಾದ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದಲ್ಲಿ ಜನಸಾಮಾನ್ಯರೊಂದಿಗೆ ಇನ್ನಷ್ಟು ಹತ್ತಿರವಾಗಿ ಬೆರೆಯಲು ಅವಕಾಶವಾಗಿ ಸಾಮಾಜಿಕ ಜೀವನ ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಲು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕೆ ನ್ಯಾಯಾಂಗ ವ್ಯವಸ್ಥೆಯ ಕೆಲಸದ ಒತ್ತಡದ ನಡುವೆಯೂ ನ್ಯಾಯಾಧೀಶರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು. ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತು ಜಿಲ್ಲೆಯ ಎಲ್ಲಾ ನ್ಯಾಯಾಧೀಶರೊಂದಿಗಿನ ಸಂವಾದದಲ್ಲಿ ಮಾತನಾಡಿದರು. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ 1987 ಕಾನೂನು ಸೇವಾ ಪ್ರಾಧಿಕಾರದ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಸಂಬಂಧಿಸಿದ ಪೊಲೀಸ್ ಠಾಣೆ, ಜೈಲು ಸೇರಿದಂತೆ ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾನೂನು ಸೇವಾ ಪ್ರಾಧಿಕಾರದ ಅಸ್ತಿತ್ವಕ್ಕೆ ಬರುವ ಮುನ್ನ ಇವೆಲ್ಲಾ ಇರಲಿಲ್ಲ. ಹಿಂದೆ ಇದ್ದ ವ್ಯವಸ್ಥೆಯಲ್ಲಿ ದುರುಪಯೋಗಗಳಾಗಿದ್ದವು. ಹೀಗಾಗಿ ಇದನ್ನು ನಿರ್ವಹಿಸಲು ನ್ಯಾಯಾಧೀಶರೇ ಸೂಕ್ತ ಎಂದು ಈ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು. ನೈತಿಕ ಮೌಲ್ಯ ಹಾಗೂ ನೈತಿಕ ಮಾನದಂಡ ಇರಿಸಿಕೊಂಡಾಗ ವಕೀಲರು ನ್ಯಾಯಾಂಗದ ಒಳಗೆ ಮತ್ತು ಹೊರಗೆ ಸಮಾಜಕ್ಕೆ ಒಳಿತು ಮಾಡಬಹುದು. ದೇವಾಲಯದಲ್ಲಿ ಪಾಣಿಪೀಠದಲ್ಲಿ ದೇವರನ್ನು ಪ್ರತಿಷ್ಠಾಪಿಸಿರುತ್ತಾರೆ. ನಾವು ಪಾಣಿ ಪೀಠದ ಕೆಳಗೆ ನಿಂತು ದೇವರಿಗೆ ನಮಸ್ಕರಿಸುತ್ತೇವೆ. ಹಾಗೆಯೇ ನ್ಯಾಯಾಲಯದಲ್ಲಿ ಎರಡು ಮೆಟ್ಟಿಲು ಮೇಲಿರುವ ವಕೀಲರು ಪಾಣಿಪೀಠದ ಮೇಲಿದ್ದಂತೆ. ಆ ಭಾವನೆಯಲ್ಲೇ ಜನರು ವಕೀಲರಿಗೆ ನಮಸ್ಕರಿಸುತ್ತಾರೆ. ದೇವಾಲಯ ಹಾಗೂ ನ್ಯಾಯಾಲಯ ಈ ಎರಡಕ್ಕೂ ಜನರು ವ್ಯತ್ಯಾಸ ಕಾಣುವುದಿಲ್ಲ. ಎಲ್ಲೋ ಕೆಲವರು ನಿಂದಿಸಬಹುದು. ನ್ಯಾಯಾಲಯವನ್ನೇ ಬೈಯ್ಯಬಹುದು. ಆದರೆ, ಅದು ಕೇವಲ ಕೆಲವೇ ಮಂದಿ. ಹಾಗೆಯೇ ಅದು ಯಾವುದೋ ನಿರ್ದಿಷ್ಟ ವಿಚಾರಕ್ಕೆ ಸೀಮಿತ ವಾಗಿರಬಹುದು. ಯಾರು ಏನೇ ಅಂದುಕೊಂಡರೂ ನಮ್ಮ ವ್ಯವಸ್ಥೆ ಬಲವಾಗಿದೆ. ಹೀಗಾಗಿ ಮೌಲ್ಯಗಳನ್ನು ಅಳವಡಿಸಿ ಕೊಂಡು ಜೀವನ ನಿರ್ವಹಿಸಬೇಕು. ಸಮಾಜಕ್ಕೆ ನಾವು ಕೊಡುಗೆ ನೀಡಬೇಕೆಂದು ದೇವರೇ ನಮಗೆ ಈ ಅವಕಾಶ ಒದಗಿಸಿದ್ದಾನೆ. ವಕೀಲರು ಮೌಲ್ಯ ಅಳವಡಿಸಿಕೊಂಡಲ್ಲಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು.ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಸ್ವಾಗತಿಸಿದರು. --- ಬಾಕ್ಸ್----ಉಪ ಲೋಕಾಯುಕ್ತರಿಂದ ಕಚೇರಿಗಳಿಗೆ ದಿಢೀರ್ ಭೇಟಿಚಿಕ್ಕಮಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಶುಕ್ರವಾರ ನಗರಸಭೆ, ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾರ್ವಜನಿಕ ದೂರು ಪೆಟ್ಟಿಗೆಯಲ್ಲಿ 2020 ರ ದೂರು ಪತ್ರ ಪತ್ತೆಯಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ದೂರು ಪತ್ರಗಳಿಗೆ ಸಂಬಂಧಿಸಿದಂತೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರಸಭೆಗೆ ಭೇಟಿ ನೀಡಿದ ಅವರು, ಈ ಸಂದರ್ಭದಲ್ಲಿ ದೂರು ಪೆಟ್ಟಿಗೆಯನ್ನು ಗಮನಿಸಿ, ಅದನ್ನು ತೆರೆಯುವಂತೆ ಸೂಚಿಸಿದಾಗ ನಗರಸಭೆ ಅಧಿಕಾರಿಗಳು ಪೆಟ್ಟಿಗೆ ಕೀ ಕಳೆದು ಹೋಗಿರುವುದಾಗಿ ವಿವರಣೆ ನೀಡಿದರು. ಉಪ ಲೋಕಾಯುಕ್ತರ ಸೂಚನೆ ಮೇರೆಗೆ ದೂರು ಪೆಟ್ಟಿಗೆ ಬೀಗ ಒಡೆದಾಗ 2020 ರಿಂದೀಚೆಗೆ ಸಾರ್ವಜನಿಕರು ಹಾಕಿದ್ದ ಹಲವು ಪತ್ರಗಳು ಪತ್ತೆಯಾದವು ಅವುಗಳನ್ನು ಕೂಡಲೇ ಪರಿಶೀಲಿಸಿ ಅವುಗಳಿಗೆ ಸ್ಪಂದಿಸುವಂತೆ ತಿಳಿಸಿದ ಅವರು, ಹಳೆ ದೂರು ಪೆಟ್ಟಿಗೆಯನ್ನು ತೆಗೆದು ಹೊಸ ಪೆಟ್ಟಿಗೆ ಆಳವಡಿಸುವಂತೆ ಹಾಗೂ ನಗರಸಭೆ ಕಚೇರಿ ಟೇಬಲ್‌ಗಳ ಮೇಲಿದ್ದ ಕಡತಗಳನ್ನು ಗಮನಿಸಿ ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು.ನಗರದ ರಸ್ತೆಗಳು ಗುಂಡಿಗಳಿಂದ ತುಂಬಿರುವುದನ್ನು ಗಮನಿಸಿದ ಉಪ ಲೋಕಾಯುಕ್ತರು ಮಳೆ ಕಡಿಮೆಯಾದ ಕೂಡಲೇ ರಸ್ತೆಗಳನ್ನು ದುರಸ್ತಿ ಪಡಿಸುವಂತೆ ನಿರ್ದೇಶನ ನೀಡಿ, ಸಾರ್ವಜನಿಕರಿಂದ ನಗರಸಭೆ ವಿರುದ್ಧವೇ ಹೆಚ್ಚಾಗಿ ದೂರುಗಳು ಕೇಳಿ ಬರುತ್ತಿರುವುದರಿಂದ ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ತಿಳಿಸದರು ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅನಂತರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಮೂರು ದಿನಗಳಿಗೊಮ್ಮೆ ಆಸ್ಪತ್ರೆಯ ಬಯೋ ತ್ಯಾಜ್ಯ ವನ್ನು ಆಗಾಗ್ಗೆ ವಿಲೇವಾರಿ ಮಾಡುವಂತೆ ತಿಳಿಸಿದರಲ್ಲದೆ, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸುವುದು ಸಲ್ಲದು ಎಂದರು. ಬಳಿಕ ಪ್ರತಿಯೊಂದು ವಾರ್ಡ್‌ಗಳಿಗೆ ತೆರಳಿ ರೋಗಿಗಳ ಯೋಗಕ್ಷೇಮ ವಿಚಾರಿಸಿ ದರಲ್ಲದ, ಆಸ್ಪತ್ರೆ ಊಟೋಪಚಾರ, ವೈದ್ಯರ ಆರೈಕೆಯ ಬಗ್ಗೆ ವಿವರ ಪಡೆದರು. ಸಂಜೆ 6 ಗಂಟೆ ಬಳಿಕ ಸೊಳ್ಳೆ ಕಾಟ ವಿರುವುದರಿಂದ ಸೊಳ್ಳೆ ಪರದೆ ಅಳವಡಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು. ಆಸ್ಪತ್ರೆ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹೇಳಿದರು.ಉಪ ಲೋಕಾಯುಕ್ತರೊಂದಿಗೆ ಪರಿಶೀಲನೆ ಸಂದರ್ಭದಲ್ಲಿ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣಿಕರ್, ಶಿವಾಜಿ ಅನಂತ್ ನಲವಾಡೆ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ, ಹಾಸನ ಚಿಕ್ಕಮಗಳೂರು ಲೋಕಾಯುಕ್ತ ಎಸ್ಪಿ ಸ್ನೇಹಾ ಉಪಸ್ಥಿತರಿದ್ದರು. 26 ಕೆಸಿಕೆಎಂ 2ಜಿಲ್ಲಾ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಅವರನ್ನು ಗೌರವಿಸಲಾಯಿತು.