ಸಾರಾಂಶ
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿರುವ ಬೆನ್ನಲ್ಲೇ ವಕೀಲರ ಧರ್ಮಯಾತ್ರೆ ಧರ್ಮಸ್ಥಳದ ಕಡೆ ಎಂಬ ಘೋಷಣೆಯೊಂದಿಗೆ ಯಾತ್ರೆ ಕೈಗೊಂಡ ಬೆಂಗಳೂರಿನ ವಕೀಲರು ಶನಿವಾರ ಹಾಸನ ನಗರದ ಮೂಲಕ ಹಾದು ಹೋಗುವಾಗ ಜಿಲ್ಲಾ ನ್ಯಾಯಾಲಯದ ಬಳಿ ವಾಹನ ನಿಲ್ಲಿಸಿ ಶ್ರೀ ಮಂಜುನಾಥ ಸ್ವಾಮಿ ಮತ್ತು ಭಾರತ ಮಾತೆ ಇರುವ ಭಾವಚಿತ್ರಕ್ಕೆ ಪುಷ್ಪನಮನ ನೆರವೇರಿಸಿ ಪ್ರಯಾಣ ಮುಂದುವರೆಸಿದರು. ವಕೀಲರು ಯಾವತ್ತೂ ಧರ್ಮಸ್ಥಳದ ಜೊತೆಗಿದ್ದಾರೆ. ಸಂಚು ರೂಪಿಸಿದವರ ವಿರುದ್ಧ ಕ್ರಮ ಆಗಲಿ ಎಂದು ವಕೀಲರ ಸಂಘದ ಅಧ್ಯಕ್ಷ ಮೊಗಣ್ಣಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿರುವ ಬೆನ್ನಲ್ಲೇ ವಕೀಲರ ಧರ್ಮಯಾತ್ರೆ ಧರ್ಮಸ್ಥಳದ ಕಡೆ ಎಂಬ ಘೋಷಣೆಯೊಂದಿಗೆ ಯಾತ್ರೆ ಕೈಗೊಂಡ ಬೆಂಗಳೂರಿನ ವಕೀಲರು ಶನಿವಾರ ಹಾಸನ ನಗರದ ಮೂಲಕ ಹಾದು ಹೋಗುವಾಗ ಜಿಲ್ಲಾ ನ್ಯಾಯಾಲಯದ ಬಳಿ ವಾಹನ ನಿಲ್ಲಿಸಿ ಶ್ರೀ ಮಂಜುನಾಥ ಸ್ವಾಮಿ ಮತ್ತು ಭಾರತ ಮಾತೆ ಇರುವ ಭಾವಚಿತ್ರಕ್ಕೆ ಪುಷ್ಪನಮನ ನೆರವೇರಿಸಿ ಪ್ರಯಾಣ ಮುಂದುವರೆಸಿದರು.ಬಿಳಿ ಬಣ್ಣದ ಬಟ್ಟೆ ಧರಿಸಿ ಕೇಸರಿ ಶಾಲು ಹಾಕಿಕೊಂಡು ಬಂದ ಬೆಂಗಳೂರು ವಕೀಲರ ಜೊತೆ ಹಾಸನ ನಗರದ ಡೇರಿ ವೃತ್ತದ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಳಿಯಿಂದ ಶನಿವಾರ ಮಧ್ಯಾಹ್ನ ತೆರಳಿದರು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಡಣ್ಣ, ಸಮೀರ್ ಸೇರಿ ಧರ್ಮಸ್ಥಳ ವಿರುದ್ಧ ಸಂಚು ರೂಪಿಸಿರುವುದು ಈಗ ಬಯಲಾಗಿದೆ ಎಂದರು. ವಕೀಲರು ಯಾವತ್ತೂ ಧರ್ಮಸ್ಥಳದ ಜೊತೆಗಿದ್ದಾರೆ. ಸಂಚು ರೂಪಿಸಿದವರ ವಿರುದ್ಧ ಕ್ರಮ ಆಗಲಿ ಎಂದು ವಕೀಲರ ಸಂಘದ ಅಧ್ಯಕ್ಷ ಮೊಗಣ್ಣಗೌಡ ಹೇಳಿದರು.