ಶಾಸಕ ಮುನಿರತ್ನ ಹೇಳಿಕೆಗೆ ಲಕ್ಷ್ಮಣ್‌ ಖಂಡನೆ

| Published : Sep 17 2024, 12:54 AM IST

ಸಾರಾಂಶ

ಮುನಿರತ್ನ ಅವರು ಮನಸೋ ಇಚ್ಛೆ ಬಹಳಷ್ಟು ಹಗುರವಾಗಿ ಮಾತನಾಡಿದ್ದು, ಇವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹ ಪಡಿಸುತ್ತೇವೆ. ಇವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದರ ಜೊತೆಗೆ ಇವರು ಸಾರ್ವಜನಿಕವಾಗಿ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದಂತೆ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇಂತಹ ಕೀಳು ನಡವಳಿಕೆಯಿಂದ ಹೊರಬದದಿದ್ದರೆ ಇವರ ವಿರುದ್ಧ ರಾಜ್ಯಾಂದ್ಯಂತ ತೀವ್ರವಾಗಿ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಶಾಸಕ ಮುನಿರತ್ನ ಅವರು ಗುತ್ತಿಗೆದಾರರೊಬ್ಬರಿಗೆ ದೂರವಾಣಿ ಕರೆ ಮಾಡಿ ಸಂಭಾಷಣೆ ಸಂದರ್ಭದಲ್ಲಿ ದಲಿತರ ಕುರಿತು ಜಾತಿ ನಿಂದನೆ ಮಾಡಿರುವುದು ಮತ್ತು ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿದ ಅವರ ನಿಲುವನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಖಂಡಿಸಿದರು.

ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚನೆ ಮಾಡಿ ನಮ್ಮ ದೇಶಕ್ಕೆ ಅರ್ಪಿಸಿದ ವಿಶ್ವಕ್ಕೆ ಮಾದರಿಯಾದ ಸಂವಿಧಾನದ ಅಡಿಯಲ್ಲಿ ಮುನಿರತ್ನ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಮ್ಮೆಲ್ಲರಿಗೂ ಜನ್ಮ ನೀಡಿರುವ ಮಹಿಳೆಯರನ್ನು ಪೂಜ್ಯ ಸ್ಥಾನದಲ್ಲಿ ಇಟ್ಟು ಗೌರವಿಸಬೇಕು. ಈ ಕುರಿತು ಕನಿಷ್ಠ ಜ್ಞಾನವಿಲ್ಲದ ಮುನಿರತ್ನ ಅವರು ಮನಸೋ ಇಚ್ಛೆ ಬಹಳಷ್ಟು ಹಗುರವಾಗಿ ಮಾತನಾಡಿದ್ದು, ಇವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹ ಪಡಿಸುತ್ತೇವೆ. ಇವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದರ ಜೊತೆಗೆ ಇವರು ಸಾರ್ವಜನಿಕವಾಗಿ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದಂತೆ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇಂತಹ ಕೀಳು ನಡವಳಿಕೆಯಿಂದ ಹೊರಬದದಿದ್ದರೆ ಇವರ ವಿರುದ್ಧ ರಾಜ್ಯಾಂದ್ಯಂತ ತೀವ್ರವಾಗಿ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಮಂಜೇಗೌಡ ಬಿ.ಪಿ. ಮಾತನಾಡಿದರು. ಪುರಸಭಾ ಸದಸ್ಯ ಬೈರಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಲೋಕೇಶ್, ಗ್ರಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಕುಮಾರ್‌ ಇತರರು ಇದ್ದರು.