5 ಎಕರೆಯಲ್ಲಿ ಸರ್ಕಾರದಿಂದ ಲೇ ಔಟ್‌ ನಿರ್ಮಾಣ

| Published : Jan 04 2025, 12:30 AM IST

ಸಾರಾಂಶ

ನಗರ ಯೋಜನಾ ಪ್ರಾಧಿಕಾರದಿಂದ ಮಂಜೂರಾತಿ ಕಲ್ಪಿಸಿದ್ದು ನಿಯಮನುಸಾರ ಲೇ ಔಟ್‌ ನಿರ್ಮಿಸುವ ಮೂಲಕ 250ಕ್ಕೂ ಹೆಚ್ಚು ಮಂದಿ ಅರ್ಹ ಬಡವರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡುವುದಾಗಿ ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ನಗರ ಯೋಜನಾ ಪ್ರಾಧಿಕಾರದಿಂದ ಮಂಜೂರಾತಿ ಕಲ್ಪಿಸಿದ್ದು ನಿಯಮನುಸಾರ ಲೇ ಔಟ್‌ ನಿರ್ಮಿಸುವ ಮೂಲಕ 250ಕ್ಕೂ ಹೆಚ್ಚು ಮಂದಿ ಅರ್ಹ ಬಡವರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಿಕೊಡುವುದಾಗಿ ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಅವರು ಶುಕ್ರವಾರ ಮಾಜಿ ಸಚಿವ ವೆಂಕಟರಮಣಪ್ಪ ಅವರ ಜತೆ ತೆರಳಿ ಪಟ್ಟಣದ ತುಮಕೂರು ರಸ್ತೆ ಮಾರ್ಗ ಹೊರವಲಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ 5 ಎಕರೆ ಸರ್ಕಾರಿ ಜಮೀನಿನ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಎಚ್‌.ವಿ.ವೆಂಕಟೇಶ್‌, ಪಟ್ಟಣದ ನಿವೇಶನ ರಹಿತ ಅರ್ಹ ಬಡವರಿಗೆ ಮನೆ ಮಂಜೂರಾತಿ ಕಲ್ಪಿಸಲು ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಟ್ಟಣದ ಹೊರವಲಯದ ಎಸ್‌ಎಸ್‌ಕೆ ಕಾಲೇಜು ಹಿಂಭಾಗದಲ್ಲಿ 5 ಎಕರೆ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಲು ಸರ್ಕಾರದಿಂದ ಪುರಸಭೆಗೆ ಮಂಜೂರಾತಿ ಆದೇಶ ಜಾರಿಯಾಗಿದೆ. 5 ಎಕರೆಯಲ್ಲಿ ಸುಸಜ್ಜಿತ ಲೇ ಔಟ್‌ ನಿರ್ಮಿಸಲು ಈಗಾಗಲೇ ಅಂದಾಜುಪಟ್ಟಿ ಸಿದ್ದಪಡಿಸಿದ್ದು ಜಮೀನಿನಲ್ಲಿರುವ ಸೀಮೆ ಜಾಲಿ ಹಾಗೂ ಗಿಡಗಂಟೆ ಹಾಗೂ ನಿವೇಶನ ಹಂಚಿಕೆ ಜಮೀನು ಸಮತಟ್ಟು ನಿರ್ವಹಿಸಲು ಆದೇಶಿಸಲಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಪಿ.ಎಚ್‌.ರಾಜೇಶ್‌ , ಪುರಸಭೆಯ ಮುಖ್ಯಾಧಿಕಾರಿ ಜಾಫರ್‌ ಷರೀಷ್‌, ಮುಖಂಡರಾದ ಸುದೇಶ್‌ಬಾಬು,ಪುರಸಭೆ ಉಪಾಧ್ಯಕ್ಷರಾದ ಗೀತಾ ಹನುಮಂತರಾಯಪ್ಪ,ಸದಸ್ಯರಾದ ತೆಂಗಿನಕಾಯಿ ರವಿ ಇತರೆ ಅನೇಕ ಮಂದಿ ಮುಖಂಡರು ಹಾಗೂ ಪುರಸಭೆಯ ಹಲವು ಸದಸ್ಯರು ಇದ್ದರು.