ಸಾರಾಂಶ
ಬಸವ ಮಂದಿರದ ದಾಖಲೆಯಲ್ಲಿಯೂ ವಕ್ಫ್ ಎಂದು ನಮೂದಿಸಿರುವ ಕುರಿತು ದಾಖಲೆಗಳನ್ನು ಪಡೆದು ಪರಿಶೀಲಿಸಿದರು. ಬಳಿಕ ಸಮೀಪದ ಮನೆ ಮನೆಗಳಿಗೆ ತೆರಳಿ ಅವರಿಂದಲೂ ಅವರ ಆಸ್ತಿ ಮತ್ತು ಎಷ್ಟು ವರ್ಷದಿಂದ ವಾಸವಿದ್ದಾರೆ ಎಂಬೆಲ್ಲಾ ಮಾಹಿತಿ ಕಲೆ ಹಾಕಿದರು.
ಕನ್ನಡಪ್ರಭ ವಾರ್ತೆ ಮೈಸೂರು
ವಕ್ಫ್‌ಬೋರ್ಡ್ ಆಸ್ತಿ ಎನ್ನುವಂತೆ ದಾಖಲೆಗಳಲ್ಲಿ ನಮೂದಾಗಿರುವ ಇಲ್ಲಿನ ಮುನೇಶ್ವರನಗರಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ನೇತೃತ್ವದ ನಿಯೋಗ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಅಹವಾಲು ಆಲಿಸಿತು.ಅಲ್ಲಿನ ಬಸವ ಮಂದಿರಕ್ಕೆ ಭೇಟಿ ನೀಡಿ ಮಾತೆ ಬಸವಾಂಜಲಿ ಅವರನ್ನು ಭೇಟಿಯಾಗಿ ಮಠಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ಬಸವ ಮಂದಿರದ ದಾಖಲೆಯಲ್ಲಿಯೂ ವಕ್ಫ್ ಎಂದು ನಮೂದಿಸಿರುವ ಕುರಿತು ದಾಖಲೆಗಳನ್ನು ಪಡೆದು ಪರಿಶೀಲಿಸಿದರು. ಬಳಿಕ ಸಮೀಪದ ಮನೆ ಮನೆಗಳಿಗೆ ತೆರಳಿ ಅವರಿಂದಲೂ ಅವರ ಆಸ್ತಿ ಮತ್ತು ಎಷ್ಟು ವರ್ಷದಿಂದ ವಾಸವಿದ್ದಾರೆ ಎಂಬೆಲ್ಲಾ ಮಾಹಿತಿ ಕಲೆ ಹಾಕಿದರು.ಸುಮಾರು 40- 50 ವರ್ಷದಿಂದ ವಾಸವಿರುವ ನಿವಾಸಿಗಳು ತಮ್ಮ ಖಾತೆ, ಕಂದಾಯ ಮುಂತಾದ ದಾಖಲಾತಿ ನೀಡಿದರು. ಈ ಎಲ್ಲವನ್ನೂ ಪರಿಶೀಲಿಸಿ ತಮ್ಮ ಪರವಾಗಿ ಸದನದಲ್ಲಿ ಧ್ವನಿ ಎತ್ತುತ್ತೇವೆ ಮತ್ತು ಬೀದಿಗಿಳಿದು ಹೋರಾಟ ರೂಪಿಸುವುದಾಗಿ ಅವರು ತಿಳಿಸಿದರು.
ವಕ್ಫ್ ಮಂಡಳಿ ನೋಟಿಸ್ ಗೆ ಹೆದರುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, ಎನ್. ರವಿಕುಮಾರ್, ಮಾಜಿ ಸಚಿವ ಹಾಲಪ್ಪ ಆಚಾರ್, ಕೇಂದ್ರದ ಮಾಜಿ ಸಚಿವ ನಾರಾಯಣಸ್ವಾಮಿ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ನಗರಾಧ್ಯಕ್ಷ ಎಲ್. ನಾಗೇಂದ್ರ ಮೊದಲಾದವರು ಇದ್ದರು.