ಸಾರಾಂಶ
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 79 ನೇ ಸ್ವಾತಂತ್ರೋತ್ಸವ
ಕನ್ನಡಪ್ರಭ ವಾರ್ತೆ, ಕಡೂರುಭಾರತ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿ ಮುಂದುವರಿದ ರಾಷ್ಟ್ರಗಳ ಸಾಲಲ್ಲಿ ನಿಲ್ಲಲು ಹೋರಾಟಗಾರರ ಬಲಿದಾನ ಮತ್ತು ವಿವಿಧ ನಾಯಕರ ಆಡಳಿತ ಕಾರಣವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಶುಕ್ರವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 79 ನೇ ಸ್ವಾತಂತ್ರೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಭಾರತ ಅಲ್ಲದೆ ಇಡೀ ಪ್ರಪಂಚದಲ್ಲಿರುವ ಭಾರತೀಯರಿಗೆ ಸುವರ್ಣ ದಿನ ವಾಗಿದೆ. ಮಹಾತ್ಮ ಗಾಂಧೀಜಿ, ವಲ್ಲಭ ಬಾಯಿ ಪಟೇಲ್, ಲಾಲ ಲಜಪತರಾಯ್, ನೆಹರು, ತಿಲಕ್ ರಂತಹ ನಾಯಕರ ಹೋರಾಟದಿಂದ ದಾಸ್ಯದ ಸಂಕೋಲೆಯಿಂದ 1947ರಲ್ಲಿ ಬಿಡುಗಡೆ ಹೊಂದುವ ಜೊತೆ ಭಾರತ 1956ರ ಜ. 26 ರಂದು ತನ್ನದೇ ಆದ ಸಂವಿಧಾನವನ್ನು ಹೊಂದಿತು. ಆ ಮೂಲಕ ಸಮಪಾಲು ಸಮಬಾಳು ಎಂಬ ಪರಿಕಲ್ಪನೆಗೆ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ ಎಂದರು.ಸ್ವಾತಂತ್ರ ಬಂದ 78 ವರ್ಷಗಳಲ್ಲಿ ಭಾರತ ದೇಶವನ್ನಾಳಿದ ವಿವಿಧ ಪಕ್ಷಗಳ ಮುಖಂಡರು ರಾಷ್ಟ್ರದ ಅಭಿವೃದ್ಧಿಗೆ ಆದ್ಯತೆ ನೀಡಿ ಅಗ್ರ ರಾಷ್ಟ್ರಗಳ ಸಾಲಲ್ಲಿ ನಿಂತಿದೆ. ಹಾಗಾಗಿ ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಿ ಎಂದರು.
ತಾಲೂಕು ತಹಸೀಲ್ದಾರ್ ಸಿ.ಆರ್. ಪೂರ್ಣಿಮಾ ಶುಭಾಷಯ ಕೋರಿ ಮಾತನಾಡಿ, ಗಾಂಧೀಜಿ, ನೆಹರು, ಲಾಲಾ ಲಜಪತರಾಯ್, ಡಾ. ಬಿ.ಆರ್. ಅಂಬೇಡ್ಕರ್, ಬಾಲಗಂಗಾಧರ ತಿಲಕ್, ರಾಣಿ ಚನ್ನಮ್ಮ ಸೇರಿದಂತೆ ಸಾವಿರಾರು ಹೋರಾಟಗಾರರ ಬಲಿದಾನದಿಂದ ಸಿಕ್ಕಿರುವ ಸ್ವಾತಂತ್ರವನ್ನು ರಕ್ಷಿಸಬೇಕು. ದೇಶ ಕೃಷಿ, ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧಿಸಿದೆ. ಆದರೆ ಭ್ರಷ್ಟಾಚಾರ, ಪರಿಸರ, ಅಸಮಾನತೆಗಳ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಪ್ರತೀ ನಾಗರಿಕರು ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಸುಮಾರು 15 ಜನ ಗರ್ಭಿಣಿಯರೂ ತಮ್ಮ ಜೀವ ಬಲಿದಾನ ಮಾಡಿ ಸ್ವಾತಂತ್ರದ ಹೋರಾಟಕ್ಕೆ ಚಾಲನೆ ನೀಡಿರುವುದನ್ನು ನಾವು ಮರೆಯುವಂತಿಲ್ಲ. ನನ್ನ ದೇಶ ನನ್ನ ಹಕ್ಕು ಎಂದು ಹೆಮ್ಮೆ ಪಡಬೇಕು ಎಂದರು.
ಮಳೆ ಸರಿಯಾಗಿ ಬಾರದೆ ಅನ್ನದಾತ ರೈತರು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತಿದ್ದಾರೆ. ರೈತರ ಉಳಿವಿಗೆ ನಮ್ಮ ಶಾಸಕ ಕೆ.ಎಸ್. ಆನಂದ್ ಅವರು, ನೀರಾವರಿಗೆ ಹೋರಾಟ ಮಾಡುವ ನಡೆಸಿದ್ದರಿಂದ ಭದ್ರಾ ನೀರು ಸಿಗುವ ಹಂತ ದಲ್ಲಿದೆ ಎಂದರು.ಬೀರೂರಿನ ಪತ್ರಕರ್ತ ಸೋಮ ನಾಡಿಗ್ ಸೇರಿದಂತೆ, ಅಂಗನವಾಡಿ ಕಾರ್ಯಕರ್ತೆ, ಕೃಷಿ, ಪೌರ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.
ಬಹಳ ವರ್ಷಗಳ ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ಪಟ್ಟಣ ಹಾಗೂ ಸಮೀಪದ ಗ್ರಾಮಗಳ ಸುಮಾರು 35 ಶಾಲೆಗಳ ಮಕ್ಕಳು ಪೆರೇಡಲ್ಲಿ ಭಾಗವಹಿಸಿ, ಶಾಸಕರು ಹಾಗೂ ತಹಸೀಲ್ದಾರರು ಧ್ವಜ ವಂದನೆ ಸ್ವೀಕರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.ಗ್ಯಾರೆಂಟಿಗಳ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಪೊಲೀಸ್ ವೃತ್ತ ನಿರೀಕ್ಷಕ ಎಂ. ರಫೀಕ್, ವಿವಿಧ ಇಲಾಖೆ ಅಧಿಕಾರಿ ಸಿ. ಆರ್. ಪ್ರವೀಣ್, ಎಂ.ಅಶೋಕ್,ಶಿವಪ್ರಸಾದ್, ಚೈತ್ರಾ,ತುಳಸಿಲಕ್ಷ್ಮೀ, ತಿಮ್ಮಯ್ಯ, ಹರೀಶ್, ಸಪ್ತಕೋಟಿ ಧನಂಜಯ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
15ಕೆೆಕೆೆೆಡಿಯು2. ಕಡೂರು ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ 79ನೇ ಸ್ವಾತಂತ್ರ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ತಾಲೂಕು ಆಡಳಿತದಿಂದ ಗೌರವಿಸಲಾಯಿತು.15ಕೆಕೆಡಿಯು2ಎ.
ಕಡೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಟಣದ ವಿಕಲಚೇತನರ ಶಾಲೆ ಮಕ್ಕಳ ನೃತ್ಯ ಗಮನ ಸೆಳೆಯಿತು.