ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

| Published : Mar 30 2024, 12:50 AM IST

ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಬೀದರ್‌

ಬಿಜೆಪಿ, ಜೆಡಿಎಸ್ ಸೇರಿ ವಿವಿಧ ಪಕ್ಷದ ಮುಖಂಡರನ್ನು ನಗರದ ಎಸ್ಆರ್‌ಎಸ್ ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪಕ್ಷಕ್ಕೆ ಬರಮಾಡಿಕೊಂಡರು.

ಜಿಪಂ ಮಾಜಿ ಅಧ್ಯಕ್ಷೆ ಸಂಗೀತಾ ಪಾಟೀಲ, ಮಾಜಿ ಸದಸ್ಯ ಝರೆಪ್ಪ ಮಮದಾಪುರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಂಕರೆಪ್ಪ ಪಾಟೀಲ ಅತಿವಾಳ, ಅಲಿಯಂಬರ್ ಗ್ರಾಪಂ ಅಧ್ಯಕ್ಷೆ ಸವಿತಾ ಅಶೋಕ ಡೋಣೆ, ಮುಖಂಡರಾದ ಸಂಗಮೇಶ ಪಾಟೀಲ ಅಲಿಯಂಬರ್, ಸೋಮಶೇಖರ ಬಸಪ್ಪ, ರಾಜಪ್ಪ ಖ್ಯಾಮಾ, ನೇತಾಜಿ ಪಾಟೀಲ ವಿಳಾಸಪುರ, ಚಂದ್ರಕಾಂತ ಹಾಲಹಳ್ಳೆ ರಾಜನಾಳ, ಮಹಾದೇವ ಬಿರಾದಾರ, ಸಿದ್ದು ಲೌಟೆ, ಸಂತೋಷ ಪಡಸಾಲೆ, ಅಲಿಯಂಬರ್‌ನ ನಾರಾಯಣರಾವ್ ಹಾಲಕೋಡೆ, ರಮೇಶ ಮಾಲಿಪಾಟೀಲ, ಬಸವರಾಜ ಮಾಲಿಪಾಟೀಲ, ಜಗನ್ನಾಥ ಪಾಪಡೆ, ಉಮೇಶ ಕೋಳಿ, ಪ್ರಭು ವಗ್ಗೆ, ರಮೇಶ ಬಸ್ತೆ, ಹುಲೆಪ್ಪ ಮೈಲೂರೆ, ಸಾಂಗ್ವಿಯ ಪಂಡಿತ, ಕಾಮಶೆಟ್ಟಿ ಉಪ್ಪೆ, ವಿಠ್ಠಲ ಸಂತಪುರೆ, ಉದಯಕುಮಾರ ಸಿದ್ದಾಪುರ, ಶಿವರಾಜ ಕಪಲಾಪುರ(ಎ), ಶರಣಪ್ಪ ಖೇಮಶೆಟ್ಟಿ, ಖ್ಯಾಡ್ ಗ್ರಾಮದ ಸಂಜೀವಕುಮಾರ ದಾನಾ, ಬಸವರಾಜ ದಾನಾ, ಧನರಾಜ ಹೊನ್ನಿಕೇರಿ ಮೊದಲಾದವರು ಕಾಂಗ್ರೆಸ್ ಸೇರಿದರು.

ಈ ವೇಳೆ ಪೌರಾಡಳಿತ ಸಚಿವ ರಹೀಂಖಾನ್, ಮಾಜಿ ಶಾಸಕ ಅಶೋಕ ಖೇಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮುರಳಿಧರ ಎಕಲಾರಕರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಎಂಎ ಸಮಿ, ಜಿಲ್ಲಾ ಒಬಿಸಿ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪೂಜಾ ಜಾರ್ಜ್, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಸಂಜುಕುಮಾರ ಡಿ.ಕೆ ಮತ್ತಿತರರು ಇದ್ದರು.