ಮಾಗಡಿ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಒಳ ಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು, ಹಳೇ ಮೀಸಲಾತಿ ಪದ್ಧತಿಯಡಿಯಲ್ಲೇ ಸರ್ಕಾರಿ ನೌಕರರ ನೇಮಕಾತಿ ಮಾಡುವಂತೆ ಒತ್ತಾಯಿಸಿ ತಾಲೂಕಿನ ಭೋವಿ, ಲಂಬಾಣಿ, ಕೊರಮ ಹಾಗೂ ಕೊರ್ಚ ಸಮುದಾಯಗಳು ಬೆಂಗಳೂರಿನಲ್ಲಿ ಮಾ.25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿತು.
ಪಟ್ಟಣದ ಕಲ್ಯಾಗೇಟ್‌ನಲ್ಲಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ತಾಲೂಕು ಭೋವಿ ಸಮುದಾಯದ ಅಧ್ಯಕ್ಷ ಬಿ.ಟಿ. ವೆಂಕಟೇಶ, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ೨೦೧೧ರ ಜನಗಣತಿ ಮತ್ತು ೨೦೨೫ರ ಸಮೀಕ್ಷೆಯ ನಡುವೆ ಕೆಲವು ಸಮುದಾಯಗಳ ಜನಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿದೆ. ಆದರೆ ಭೋವಿ ಸಮುದಾಯದ ಅಂಕಿಅಂಶಗಳು ಸಂಶಯಾಸ್ಪದವಾಗಿವೆ. ೨೦೧೧ರ ವರದಿ ಪ್ರಕಾರ ಭೋವಿ ಸಮುದಾಯದ ಜನಸಂಖ್ಯೆ: ೧೧,೧೯,೩೧೫ ಇದ್ದು ೨೦೨೫ರ ವರದಿ ಪ್ರಕಾರ ಭೋವಿ ಸಮುದಾಯದ ಜನಸಂಖ್ಯೆ: ೧೧,೨೯,೩೦೧ ಇದೇ ಕಳೆದ ೧೪ ವರ್ಷಗಳಲ್ಲಿ ಕೇವಲ ಅತ್ಯಲ್ಪ ಏರಿಕೆ ತೋರಿಸಿರುವುದು ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಕಿಡಿಕಾರಿದರು.ಅವೈಜ್ಞಾನಿಕ ವರ್ಗೀಕರಣ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ (ಎ,ಬಿ,ಸಿ ) ಮಾಡುವಲ್ಲಿ ವಾಸ್ತವ ಜನಸಂಖ್ಯೆಯನ್ನು ಪರಿಗಣಿಸದೆ ಸಮಗ್ರ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ ಎಂದು ವೆಂಕಟೇಶ್ ಆರೋಪಿಸಿದರು.
ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತುತ ವರದಿಯನ್ನು ಕೈಬಿಡಬೇಕು ಯಾವುದೇ ಗೊಂದಲವಿಲ್ಲದAತೆ ಹಳೇ ಮೀಸಲಾತಿ ಅನ್ವಯವೇ ಸರ್ಕಾರಿ ನೌಕರರ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಮುಖಂಡರು ಒತ್ತಾಯಿಸಿದರು.ಇದೇ ವೇಳೆ ಪುರಸಭೆ ಮಾಜಿ ಅಧ್ಯಕ್ಷ ನಾಗರಾಜು, ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಜಣ್ಣ, ಚಂದೂರಾಯನಹಳ್ಳಿ ಶಿವರಾಮಯ್ಯ, ಯುವ ಮುಖಂಡರಾದ ಸಂಜೀವ ಮೂರ್ತಿ, ಪಾಂಡುರAಗಯ್ಯ, ನಾಗಭೋವಿದೊಡ್ಡಿ ಮಂಜುನಾಥ, ಗಿರೀಶ್ ಸೇರಿದಂತೆ ಅನೇಕ ಸಮುದಾಯದ ಮುಖಂಡರು ಭಾಗವಹಿಸಿದ್ದರು.