ಹೊಸ ಆವಿಷ್ಕಾರಗಳಿಂದ ಜಗತ್ತಿನ ಮುನ್ನಡೆ: ಡಾ. ಬಿರಾದಾರ

| Published : Feb 03 2024, 01:48 AM IST

ಹೊಸ ಆವಿಷ್ಕಾರಗಳಿಂದ ಜಗತ್ತಿನ ಮುನ್ನಡೆ: ಡಾ. ಬಿರಾದಾರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕದ ಸೂಕ್ಷ್ಮ ಅರಿವಿಗೆ ಸಂಶೋಧನೆಗಳು ದಾರಿಯಾಗಿವೆ ಎಂದು ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜಿನ ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ''''ಸಂಶೋಧನಾ ವೈಧಾನಿಕತೆ'''' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ, ಬೀದರ್‌

ಲೋಕದ ಸೂಕ್ಷ್ಮ ಅರಿವಿಗೆ ಸಂಶೋಧನೆಗಳು ದಾರಿಯಾಗಿವೆ ಎಂದು ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜಿನ ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ''''''''''''''''ಸಂಶೋಧನಾ ವೈಧಾನಿಕತೆ'''''''''''''''' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಹೊಸ ಆವಿಷ್ಕಾರಗಳಿಂದ ಜಗತ್ತಿನ ಮುನ್ನಡೆ ಸಾಧ್ಯ. ಸಂಶೋಧನೆಗಳು ಮನುಷ್ಯ ಲೋಕದ, ಮಾನವಿಕ ಮತ್ತು ವೈಜ್ಞಾನಿಕ ವಲಯದ ಚಾಲಕ ಶಕ್ತಿಗಳಾಗಿವೆ. ಸಂಶೋಧನೆಯಲ್ಲಿ ಬಳಸುವ ತಾತ್ವಿಕ ಪರಿಕರ, ದೃಷ್ಟಿಕೋನಗಳು ಸಂಶೋಧಕನ ಬದುಕಿನ ಕ್ರಮವೂ ಆಗಿರುತ್ತದೆ ಎಂದರು.ಯಾವುದೇ ಕ್ಷೇತ್ರದಲ್ಲಿ ಸಂಶೋಧನೆ ನಡೆದರೂ ಅದೊಂದು ಬೌದ್ಧಿಕ ಪ್ರಕ್ರಿಯೆಯಾಗಿದೆ. ಸಂಶೋಧನಾ ಅಧ್ಯಯನಗಳು ಲೋಕದ ಸಂಗತಿಗಳಿಗೆ ಸೈದ್ಧಾಂತಿಕ, ತಾತ್ವಿಕ ಮತ್ತು ಪ್ರಾಯೋಗಿಕ ಮುಖಾಮುಖಿಯಾಗಿವೆ ಎಂದರು.ಐಕ್ಯೂಎಸಿ ಸಂಯೋಜಕ ಡಾ. ಶ್ರೀಕಾಂತ ಪಾಟೀಲ್‌, ಹುಡುಕಾಟ ಮನುಷ್ಯನ ಮೂಲ ಜಾಯಮಾನ. ಆ ಹುಡುಕುವ ಪ್ರಕ್ರಿಯೆಗೆ ಜ್ಞಾನ ಶಿಸ್ತು ಬೆರೆಸಿದರೆ ಸಂಶೋಧನೆಯಾಗುತ್ತದೆ ಎಂದರು.ಕಾಲೇಜಿನ ಪ್ರಾಚಾರ್ಯ ಪ್ರೊ. ಮನೋಜಕುಮಾರ ಅಧ್ಯಕ್ಷತೆ ವಹಿಸಿ, ಒಂದು ದೇಶದ ಗತಿ ಶೀಲತೆಯಲ್ಲಿ ಸಂಶೋಧನೆಗಳ ಪಾತ್ರ ದೊಡ್ಡದು. ಸಂಶೋಧನೆಗಾಗಿ ನಮ್ಮ ಸುತ್ತಲೂ ಹಲವು ಆಕರಗಳಿವೆ. ಹೆಚ್ಚಿನ ಸಂಗತಿಗಳನ್ನು ಸಂಶೋಧನಾ ವ್ಯಾಪ್ತಿಗೆ ತರಬೇಕು. ಈ ತರಹದ ವಿಚಾರ ಸಂಕಿರಣದಿಂದ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಯಲು ಸಾಧ್ಯ ಎಂದರು.ಡಾ. ವಿದ್ಯಾ ಪಾಟೀಲ್‌, ಡಾ. ಮನೋಹರ, ದೇವೇಂದ್ರ ಬರಗಾಲೆ, ಡಾ. ಉಮಾಕಾಂತ ನಿರೂಪಿಸಿದರು. ಪ್ರೊ. ವಿಜಯಲಕ್ಷ್ಮಿ, ಹಿರಿಯ ಪರ್ತಕರ್ತ ಮಾರುತಿ ಸೋನಾರ್‌ ಮತ್ತಿತರರು ಇದ್ದರು.