ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬಿಲ್ಲುಗಾರಿಕೆ ಕ್ರೀಡೆಯೂ ಅಭಿವೃದ್ಧಿ ಹೊಂದುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಪುರಾತನ ಕ್ರೀಡೆಯನ್ನು ಪ್ರತಿಯೊಬ್ಬರೂ ಕಲಿಯಬೇಕು. ಈ ಕ್ರೀಡೆಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ರಾಜಾ ಸುಶಾಂತ ನಾಯಕ ಹೇಳಿದರು.ತಾಲೂಕಿನ ತಿಂಥಣಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ವನವಾಸಿ ಕಲ್ಯಾಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬಿಲ್ಲುಗಾರಿಕೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯೂ ಯುವಕರನ್ನು ಸದೃಢವಾಗಿರಸಲು ಸಹಕರಿಸುತ್ತದೆ. ಸುಮಾರು 9 ಜಿಲ್ಲೆಯ 40ಕ್ಕೂ ಹೆಚ್ಚು ಕ್ರೀಡಾಪಟಗಳು ಪಾಲ್ಗೊಂಡಿರುವುದು ನೋಡಿದರೆ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ ಪದಕ ತರಬೇಕು ಎಂದರು.
ವನವಾಸಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ ಕೊಡಗು ಮಾತನಾಡಿ, ವನವಾಸಿ ಕಲ್ಯಾಣ ಕರ್ನಾಟಕವು ಭಾರತ ದೇಶದಲ್ಲಿ 1952 ರಂದು ಆರಂಭಗೊಂಡಿದೆ. ಹಾಸ್ಟೆಲ್‌ಗಳು, ಆಸ್ಪತ್ರೆಗಳು, ವಿದ್ಯಾ ಕೇಂದ್ರಗಳು, ಗ್ರಾಮ ವಿಕಾಸ ಕೇಂದ್ರಗಳು ಹಾಗೂ ಸಂಸ್ಕಾರ ಕೇಂದ್ರಗಳೊಂದಿಗೆ ಸಂಸ್ಥೆ ಬೆಳೆದು ಹೆಮ್ಮರವಾಗಿದೆ. ಈ ಸಂಸ್ಥೆಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಸಾಕಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ಮುನ್ನಡೆಯುತ್ತಿದ್ದಾರೆ. ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದವರಿಗೆ ನಮ್ಮ ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದರು.ರಾಘವೇಂದ್ರರಾವ್ ಜಾಗೀರದಾರ್, ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಮಾತನಾಡಿದರು. ದಕ್ಷಿಣ ಕಾಶಿ ಸುಕ್ಷೇತ್ರ ತಿಂಥಣಿ ಮೌನೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವನವಾಸಿ ಕಲ್ಯಾಣ ಸುರಪುರ ನಗರ ಸಮಿತಿ ಅಧ್ಯಕ್ಷ ರಾಜಾ ಪಿಡ್ಡ ನಾಯಕ ಧ್ವಜಾರೋಹಣ ನೆರವೇರಿಸಿದರು. ಮುಖ್ಯಶಿಕ್ಷಕ ಬಸವರಾಜ ಗೋಗಿ ಕ್ರೀಡಾಧ್ವಜ ಸ್ವೀಕರಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಈರಮ್ಮ ಹುಣಸಗಿ ಪ್ರಾರ್ಥಿಸಿದರು.
ಶ್ರೀಮೌನೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ವೆಂಕಟೇಶ್ ಯರಡೋಣಿ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಕವಲ್ದಾರ್, ರಾಜು ಎಸ್ ರಾಮನಗರ, ವಕೀಲ ಬಲಭೀಮ ನಾಯಕ, ಮಂಜುನಾಥ ಸಾಹುಕಾರ್, ರಂಗಣ್ಣ ನಾಯಕ ಬಂಕುಲ್‌ದೊಡ್ಡಿ, ಹನುಮಂತರಾಯ ಟೋಕಾಪುರ, ಪರಮಣ್ಣ ಕಕ್ಕೇರಾ, ದತ್ತು ಗುತ್ತೇದಾರ್, ವೆಂಕಟೇಶ ಸಾವತಿಗಿರಿ, ಮಣಿವಣ್ಣ, ರವೀಂದ್ರ, ಶಿವಪ್ಪ ನಾಯಕ, ಜಯಕುಮಾರ್ ಚಿಟ್ಟಿ, ಭೀಮಶಂಕರ್ ಮೇಟಿ, ವೆಂಕೋಬ ದೊರೆ, ಭೀಮರೆಡ್ಡಿ, ಶಿವಕುಮಾರ್, ಜಗದೀಶ್, ವೆಂಕಪ್ಪ ಮೊಕಾಶಿ, ಮಂಜುಳಾ, ಈರಮ್ಮ ಹುಣಸಿಗಿ, ಕಾಶಪ್ಪ ದೊರೆ, ಗಂಗಾಧರ ನಾಯಕ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.;Resize=(128,128))
;Resize=(128,128))
;Resize=(128,128))