ಸಾರಾಂಶ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಗುರು ಕಲಿಸಿ ಕೊಟ್ಟ ಪಾಠ ಶ್ರದ್ಧೆ ಭಕ್ತಿಯಿಂದ ಕಲಿತು ಗುರಿ ಸಾಧನೆ ಮಾಡುವಂತವರಾಗಬೇಕು
ಗದಗ: ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಜನನಿಯಿಂದ ಪಾಠ ಕಲಿತ ನಾವೇ ಧನ್ಯರು, ನಮಗೆಲ್ಲ ಮೊದಲ ಗುರು ತಾಯಿ, ಆ ತಾಯಿಯಿಂದ ಕಲಿತ ಪಾಠ ನಮ್ಮ ಭವಿಷ್ಯಕ್ಕೆ ಮೈಲಿಗಲ್ಲು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಗುರು ಕಲಿಸಿ ಕೊಟ್ಟ ಪಾಠ ಶ್ರದ್ಧೆ ಭಕ್ತಿಯಿಂದ ಕಲಿತು ಗುರಿ ಸಾಧನೆ ಮಾಡುವಂತವರಾಗಬೇಕು ಎಂದು ಪ್ರಾ.ಜಯಶ್ರೀ ಮಡಿವಾಳರ ಹೇಳಿದರು.
ನಗರದ ಜೇಸಿ ಪ್ರೌಢಶಾಲೆಯಲ್ಲಿ ಗುರುವಾರ ಗುರುಪೂರ್ಣಿಮೆಯ ನಿಮಿತ್ತ 10ನೇ ತರಗತಿಯ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಮಹೇಶ ಸಂದಿಗೋಡ, ದಾನಮ್ಮಾ ತೆಗ್ಗಿನಕೇರಿ, ಭುವನೇಶ್ವರಿ ಸಿಂಗಟಾಲೂರ, ಜ್ಯೋತಿ ಹೇರಲಗಿ, ರೇಣುಕಾ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ಕುಲಕರ್ಣಿ, ಶ್ರೇಯಾ ಹಿರೇಮಠ, ಅಯಾನ ತಹಸೀಲ್ದಾರ ಮಾತನಾಡಿದರು.
ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತರುಣ ಬೇವಿನಮರದ ಸ್ವಾಗತಿಸಿದರು. ಕೋಮಲ ಅಗಸಿಮನಿ ನಿರೂಪಿಸಿದರು. ವೈಭವಿ ಸರಗಣಾಚಾರಿ ವಂದಿಸಿದರು.