ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಕನ್ನಡ ಭಾಷೆಯನ್ನು ಬಳಸುವ ಬಹುತೇಕರು ಪದಗಳ ಉಚ್ಚಾರಣೆ ಸೇರಿದಂತೆ ಪದ ಬಳಕೆಯಲ್ಲಿ ಬಹಳಷ್ಟು ಲೋಪಗಳು ಕಂಡುಬರುತ್ತಿದೆ. ಆದ್ದರಿಂದ ನಮ್ಮ ವಿದ್ಯಾರ್ಥಿಗಳು ಕನ್ನಡ ಭಾಷೆ ಬಳಕೆ ಮಾಡುವಾಗ ಸರಿಯಾದ ಕ್ರಮದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡಿ ಕನ್ನಡ ಭಾಷೆಗೆ ಕೀರ್ತಿ ತರುವಂತ ಕೆಲಸವನ್ನು ಮಾಡಬೇಕೆಂದು ಎಂದು ಹಾಸನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಜಿ. ಕವಿತಾ ಕಿವಿಮಾತು ಹೇಳಿದರು.ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎಸ್‌ಎಸ್‌ಎಸ್, ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದಿನ ಮೂವತ್ತು ವರ್ಷಗಳ ವಿದ್ಯಾಭ್ಯಾಸ ಹಾಗೂ ಇಂಂದಿನ ವಿದ್ಯಾಬ್ಯಾಸಕ್ಕೂ ಹೋಲಿಕೆ ಮಾಡಿದಾಗ ಅಜಗಜಾಂತರಗಳ ವ್ಯತ್ಯಾಸ ಕಾಣುತ್ತೇವೆ. ಆದ್ದರಿಂದ ಇಂದಿನ ಸ್ಪರ್ಧಾತ್ಮಕ ಸನ್ನವೇಶಕ್ಕೆ ತಕ್ಕಂತೆ ಜ್ಞಾನಾರ್ಜನೆ ಮಾಡುವ ಜತೆಗೆ ಇಂದಿನ ವೇಗಕ್ಕೆ ತಕ್ಕಂತೆ ಪ್ರಗತಿಯತ್ತ ಸಾಗಬೇಕಿದೆ. ನಾವು ವ್ಯಾಸಂಗ ಮಾಡುವಾಗ ಸರಿಯಾದ ವ್ಯವಸ್ಥೆಯೇ ಇರಲಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ್ದ ನಮಗೆ ಶಿಕ್ಷಣ ದೊರೆತಿದ್ದೇ ದೊಡ್ಡ ಅಂಶವಾಗಿತ್ತು. ನಮ್ಮ ಕಲಿಕೆಯ ಸಮಯದಲ್ಲಿ ನಿಮ್ಮಂತೆ ವಿವಿಧ ತಿಂಡಿಗಳ ವ್ಯವಸ್ಥೆ ಇರಲಿಲ್ಲ, ನಮ್ಮ ಪೋಷಕರು ನೀಡಿದ ಆ ರಾಗಿ ರೊಟ್ಟಿಯನ್ನ ಬೆಳಿಗ್ಗೆ ತಿಂದು ಅದನ್ನೇ ಮತ್ತೆ ಮಧ್ಯಾಹ್ನವೂ ತಿನ್ನಬೇಕಾದ ಕ್ಲಿಷ್ಟ ಪರಿಸ್ಥಿತಿ ಇತ್ತು, ಜೊತೆಗೆ ಅಂದಿನ ಸರ್ಕಾರಗಳು ವ್ಯಾಸಂಗಕ್ಕೆ ಈಗಿನಂತೆ ಸಮವಸ್ತ್ರ, ಕಾಲಿಗೇ ಬೂಟು, ಲೇಖನ ಸಾಮಾಗ್ರಿಗಳು ದೊರೆಯುತ್ತಿರಲಿಲ್ಲ, ಅಂದು ನಮ್ಮ ಷ್ಷಕರು ನೀಡುವ ಪೆನ್ಸಿಲ್, ಬಳಪ, ಸ್ಲೇಟ್, ಬ್ಯಾಗ್ ಇವುಗಳು ನಮ್ಮ ವ್ಯಾಸಂಗದಲ್ಲಿ ಅವಿಭಾಜ್ಯ ಅಂಗವಾಗಿತ್ತು ಎಂದು ನೆನಪು ಮಾಡಿಕೊಂಡರು. ಆದರೆ ಇಂದು ನಮ್ಮ ಸರ್ಕಾರಗಳು ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ನೀಡಿದರು ಸಹ ಬಹಳಷ್ಟು ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳದೆ ಇರುವುದು ಸಹ ನಾವು ನೋಡುತ್ತಿದ್ದೇವೆ. ಇಂದಿನಂತೆ ನಮಗೆ ನಮ್ಮ ಪೋ?ಕರು ಸವಲತ್ತುಗಳನ್ನು ನೀಡಿದ್ದರೆ ಈಗಿನ ಸಾಧನೆಗಿಂತ ಮತ್ತಷ್ಟು ಸಾಧನೆ ಮಾಡಲು ಅವಕಾಶ ಇರುತ್ತಿತ್ತೆಂದು ತಮ್ಮ ಮನದಾಳದ ಮಾತನ್ನು ಸಭೆಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳಿಗೆ ಮನಸ್ಸಿಗೆ ತಲುಪುವಂತೆ ನುಡಿದರು. ತಮ್ಮ ವ್ಯಾಸಂಗದ ದಿನಗಳಲ್ಲಿ ವಾರ್ಷಿಕ ಎರಡು ಕಾರ್ಯಕ್ರಮಗಳು ಇರುತ್ತಿತ್ತು, ಆದರೆ ಈಗ ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೇಂಜರ್ಸ್ ಸೇರಿದಂತೆ ಹಲವು ಚಟುವಟಿಕೆಗಳು ವರ್ಷದ ಎಲ್ಲ ದಿನಗಳು ಒಂದಲ್ಲ ಒಂದು ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ ಎಂದರು.ಸಮಾರೋಪ ಸಮಾರಂಭದ ಪ್ರಯುಕ್ತ ಏರ್ಪಡಿಸಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಗುರುರಾಜ್ ಕೆ. ವಹಿಸಿದ್ದರು ಹಾಗೂ ಸಂಚಾಲಕ ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವಿದ್ಯಾರ್ಥಿನಿ ವೈಭವಿ ಪ್ರಾರ್ಥಿಸಿದರು, ಸ್ಫೂರ್ತಿ ಭರತ ನಾಟ್ಯದ ಮೂಲಕ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಪಿ. ಶಂಕರ್ ಸ್ವಾಗತಿಸಿದರು, ರವಿಕುಮಾರ್ ನಿರೂಪಿಸಿದರು, ಉಪನ್ಯಾಸಕಿ ವೀಣಾ ವಂದಿಸಿದರು.ಕಾಲೇಜಿನ ಉಪನ್ಯಾಸಕರಾದ ಡಾ.ಮಂಜುರಾಜ್, ಡಾ. ಕುಸುಮ, ಖಲೀದ್ ಅಹ್ಮದ್, ಕೆ. ಎಸ್. ಚಂದ್ರಕಲಾ, ವಿದ್ಯಾ ಕೆ., ಡಾ. ಯಪ್ಪಪ್ಪ ಹಾಗೂ ನಾಗೇಶ್ ನಾಯಕ್ ಉಪಸ್ಥಿತರಿದ್ದರು.
ಸರಿಯಾದ ಕ್ರಮದಲ್ಲಿ ಕನ್ನಡ ಮಾತನಾಡುವುದನ್ನು ಕಲಿಯಿರಿ
ಕನ್ನಡ ಭಾಷೆಯನ್ನು ಬಳಸುವ ಬಹುತೇಕರು ಪದಗಳ ಉಚ್ಚಾರಣೆ ಸೇರಿದಂತೆ ಪದ ಬಳಕೆಯಲ್ಲಿ ಬಹಳಷ್ಟು ಲೋಪಗಳು ಕಂಡುಬರುತ್ತಿದೆ. ಆದ್ದರಿಂದ ನಮ್ಮ ವಿದ್ಯಾರ್ಥಿಗಳು ಕನ್ನಡ ಭಾಷೆ ಬಳಕೆ ಮಾಡುವಾಗ ಸರಿಯಾದ ಕ್ರಮದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡಿ ಕನ್ನಡ ಭಾಷೆಗೆ ಕೀರ್ತಿ ತರುವಂತ ಕೆಲಸವನ್ನು ಮಾಡಬೇಕೆಂದು ಎಂದು ಹಾಸನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಜಿ. ಕವಿತಾ ಕಿವಿಮಾತು ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.