ಸಾರಾಂಶ
ಶಿಗ್ಗಾಂವಿ: ವಿದ್ಯಾರ್ಥಿಗಳಿಗೆ ಮಾತೃ ಭಾಷೆ ಶಿಕ್ಷಣ ನೀಡುವುದರಿಂದ ಮಾತೃ ಭಾಷೆಗೆ ಹೆಚ್ಚಿನ ಮಹತ್ವ ನೀಡಿದಂತಾಗುವುದರೊಂದಿಗೆ ಮಕ್ಕಳಲ್ಲಿ ಕಲಿಕೆ ಸರಳವಾಗುತ್ತದೆ ಎಂದು ಬಂಕಾಪುರದ ಎಸ್.ಎ.ಕ್ಯೂ. ಆಂಗ್ಲೋ ಉರ್ದು ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಮುಹಮ್ಮದ್ ಹುಸೇನ ಹೇಳಿದರು.ಬಂಕಾಪುರದ ಎಸ್.ಎ.ಕ್ಯೂ. ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ನಡೆದ ಉರ್ದು ಶಾಲೆಗಳ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸಹಾಯಕವಾಗಲಿದ್ದು, ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಪ್ರತಿಭೆಗಳನ್ನು ಕಾರಂಜಿಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.ಉರ್ದು ಶಿಕ್ಷಣ ಸಂಯೋಜಕ ಅಬ್ದುಲ್‌ಖಾದರ ಕಡೇಮನಿ ಪ್ರಸ್ತಾವಿಕ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಭಾವನಾತ್ಮಕ ಕಲೆಗಳ ಅನಾವರಣವೇ ಪ್ರತಿಭಾ ಕಾರಂಜಿಯಾಗಿದ್ದು, ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಗಳನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಪ್ರೋತ್ಸಾಹಿಸುವುದರಿಂದ ಮುಂದೆ ಅವರು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಲು ಸಹಾಯವಾಗುತ್ತದೆ ಎಂದರು.ಬಂಕಾಪುರದ ಎಸ್.ಎ.ಕ್ಯೂ. ಆಂಗ್ಲೋ ಉರ್ದು ಪ್ರೌಢಶಾಲೆಯ ಕಾರ್ಯದರ್ಶಿ ತಮಹೀದ ಖಾಜಿ ಮಾತನಾಡಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಮಕ್ಕಳ ಮಾನಸಿಕ ವಿಕಾಸದ ಅಭಿವೃದ್ಧಿಯಾಗುವುದರೊಂದಿಗೆ ಆತ್ಮಬಲ ಹೆಚ್ಚಾಗುತ್ತದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತವೆ ಎಂದರು. ಈ ಸಂಧರ್ಭದಲ್ಲಿ ಬಂಕಾಪೂರ ಕ್ಲಸ್ಟರ್‌ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಶಿಕ್ಷಕರಿಗೆ ಹಾಗೂ ವರ್ಗಾವಣೆ ಹೊಂದಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ರಬ್ಬಾನಿ ತರೀನ್, ತಮ್ಹಿದ್ ಖಾಝಿ, ಅಬ್ದುಲ್‌ಖಾದಿರ್ ಜಿಲಾನಿ, ಎಫ್‌ಸಿ ಕಾಡ್ಡಪಗೌಡ, ಭೀಮ್ಮಪ್ಪ ಉಪ್ಪಾರ, ಪ್ರಕಾಶ ಬಾರಕೇರ, ಉಮೇಶ ಎಸ್. ಆರ್., ಬಸವರಾಜ ಬಸರಿಕಟ್ಟಿ, ಎ.ಎಫ್. ಹೂಸಮನಿ, ಭಟ್ಟಿಪುರಿ, ಅಯೂಬ್‌ಖಾನ್ ಪಠಾಣ್, ಮುಹಮ್ಮದ್ ಹುಸೈನ್, ಝಮೀರ್ ಅಹ್ಮದ್ ಮಿರ್ಚೌನಿ, ಸೀದಿಖ ಖತಿಬ ಹಿದಾಯತವುಲ್ಲಾ, ಮೇವಾ ಜಬೀಹುಲ್ಲಾ ಗಂಗಾಂಕೋಟಿ, ಶಬಾನಾ ಬಿ. ಮುಖ್ತಿಯಾರ್, ಶಾದಾಬ್ ಮಹೆಬೂಬ್ ಅಲಿ ಪಟ್ನಿ, ಮುಹಮ್ಮದ್ ಜಾವೇದ್ ಬಶೀಶ್ರೀ, ಮುಹಮ್ಮದ್ ಖಾಸಿಂ, ಹಿದಾಯತ್ತುಲಾ ರಟ್ಟಿಹಳ್ಳಿ, ನವೀದ್ ಇಕ್ಬಾಲ್ ನಿಸಾರ್ ಅಹ್ಮದ್ ಮುತುಬಾಯಿ, ತುಕೀರ್ ಪಠಾಣ್, ಇಸಹಾಖ ಪಟೇಲ, ಅಬ್ದುಲ್ ಅಜೀಜ್, ಖಲೀಫಾ, ಖವಾಜಾಸಾಹಿಬ್ ಬಡಿಗೇರ, ಅಬ್ದುಲ್ ರೆಹಮಾನ್ ಪಟೇಲ್, ಮುಹಮ್ಮದ್ ರಝಾ ಡಾಣೆಬಾಗ, ಮಕ್ಬೂಲ್ ಅಹ್ಮದ್ ಬೊಮ್ಮನಹಳ್ಳಿ, ಅಮ್ಜದ ಖಾನ ಪಠಾಣ, ಅಬ್ದುಲ್ ಮುನಾಪ ಢಾಣೆಬಾಗ, ಇಮ್ರಾನ್ ಕನವಳ್ಳಿ, ಇಮ್ತಿಯಾಝ್ ಭಟ್ಟಿಪುರಿ, ಅಬ್ದುಲ್ ಖಾದರ್ ಕಡೇಮಿನಿ, ಉರ್ದು ಇಸಿವಿ, ಶಕೀಲ್ ಅಹ್ಮದ್ ಕರುಟ, ಮುಹಮ್ಮದ್ ಜಾಫರ್, ಮೆಹಬೂಬ್ ಮೊಮಿನ್, ಮೇವಾ ಮುಹಮ್ಮದ್ ಖಾಸಿಂ ಇತರರಿದ್ದರು.